ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈಗೆ ಸೂರ್ಯಕುಮಾರ್ ನಾಯಕ

ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡವನ್ನು ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಜನವರಿ 10ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ 20 ಜನರ ಮುಂಬೈ ತಂಡಕ್ಕೆ ಯಾದವ್ ನಾಯಕರಾಗಲಿದ್ದಾರೆ.
ಮುಂಬೈ ತಂಡಕ್ಕೆ ಉಪನಾಯಕರಾಗಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಆದಿತ್ಯ ತಾರೆ ಆಯ್ಕೆಯಾಗಿದ್ದಾರೆ. ಶನಿವಾರ (ಡಿಸೆಂಬರ್ 26) ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) 20 ಜನರಿರುವ ಮುಂಬೈ ತಂಡವನ್ನು ಪ್ರಕಟಿಸಿದೆ.
'ಆಯ್ಕೆಯಾದ ಆಟಗಾರರು ಡಿಸೆಂಬರ್ 29ರಂದು 9.30 amಗೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ವರದಿ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ,' ಎಂದು ಎಂಸಿಎ ತನ್ನ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ. ಜನವರಿ 10ರಂದು ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಜನವರಿ 31ಕ್ಕೆ ಮುಕ್ತಾಯಗೊಳ್ಳಲಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಗೆ ಮುಂಬೈ ತಂಡ
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಆದಿತ್ಯ ತಾರೆ (ಉಪನಾಯಕ), ಯಶಸ್ವಿ ಜೈಸ್ವಾಲ್, ಆಕರ್ಷಿತ್ ಗೊಮೆಲ್, ಸರ್ಫರಾಜ್ ಖಾನ್, ಸಿದ್ಧೇಶ್ ಲಾಡ್, ಶಿವಮ್ ದೂಬೆ, ಶುಭಮ್ ರಂಜನೆ, ಸುಜಿತ್ ನಾಯಕ್, ಸಾಯ್‌ರಾಜ್ ಪಾಟೀಲ್, ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಮಿನಾದ್ ಮಂಜ್ರೇಕರ್, ಪ್ರಥಮೇಶ್ ಧಾಕೆ, ಅಥರ್ವ ಅಂಕೋಲೆಕರ್, ಶಶಾಂಕ್ ಅತ್ತಾರ್ಡೆ, ಶಮ್ಸ್ ಮುಲಾನಿ, ಹಾರ್ದಿಕ್ ತಮೋರ್, ಆಕಾಶ್ ಪಾರ್ಕರ್ ಮತ್ತು ಸುಫಿಯಾನ್ ಶೇಖ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications