ಟಿ10: ಶಹಝಾದ್ ಅಬ್ಬರ, ನಾಲ್ಕೇ ಓವರ್‌ನಲ್ಲಿ ಆಟ ಮುಗಿಸಿದ ರಜಪೂತ್ಸ್!

ಶಾರ್ಜಾ, ನವೆಂಬರ್ 21: ಯುಎಇಯ ಶಾರ್ಜಾದಲ್ಲಿ ಬುಧವಾರ (ನವೆಂಬರ್ 21) ನಡೆದ ಟಿ10 ಲೀಗ್ ಆರಂಭಿಕ ಪಂದ್ಯದಲ್ಲಿ ಸಿಂಧೀಸ್ ವಿರುದ್ಧ ರಜಪೂತ್ಸ್ 10 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಮೊಹಮ್ಮದ್ ಶಹಝಾದ್ ಅಬ್ಬರದ ಅರ್ಧಶತಕ ನೆರವಿನಿಂದ ರಜಪೂತ್ಸ್ ಸುಲಭ ಜಯ ಸಾಧಿಸಿತು.
ರಜಪೂತ್ಸ್ ಪರ ನಾಯಕ ಬ್ರೆಂಡನ್ ಮೆಕಲಮ್ ಮತ್ತು ಶಹಝಾದ್ ಇಬ್ಬರೇ ನಿಂತು ಪಂದ್ಯ ಮುಗಿಸಿಕೊಟ್ಟರು . ಸಿಂಧೀಸ್ ನೀಡಿದ್ದ 95 ರನ್ ಗುರಿಯನ್ನು ಕೇವಲ ನಾಲ್ಕೇ ಓವರ್‌ನಲ್ಲಿ (96 ರನ್) ತಲುಪುವ ಮೂಲಕ ಸಿಂಧೀಸ್ ತಂಡವನ್ನು ರಜಪೂತ್ಸ್ ದಂಗುಬಿಡಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸಿಂಧೀಸ್ ತಂಡ ನಾಯಕ ಶೇನ್ ವಾಟ್ಸನ್ ಆಕರ್ಷಕ 42 (20) ರನ್ ನೆರವಿನಿಂದ 10 ಓವರ್‌ಗೆ 6 ವಿಕೆಟ್ ಕಳೆದು 94 ರನ್ ಪೇರಿಸಿತು. ಆದರೆ ಶಹಝಾದ್ ಕೇವಲ್ 16 ಎಸೆತಗಳಿಗೆ 74 ರನ್, ಮೆಕಲಮ್ 8 ಎಸೆತಗಳಿಗೆ 21 ರನ್ ಸೇರಿಸಿದ್ದರಿಂದ ರಜಪೂತ್ಸ್ 4 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 96 ರನ್ ಗಳಿಸಿತು.
Story first published: Wednesday, November 21, 2018, 21:50 [IST]
Other articles published on Nov 21, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications