ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಅಫ್ಘಾನಿಸ್ತಾನದ ಕ್ರಿಕೆಟರ್
ಕಾಬೂಲ್, ಜುಲೈ 11: ಅಫ್ಘಾನಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶಫಿ ಖುಲ್ಲಾ ಶಫಾಕ್ ಅವರು ಟ್ವೆಂಟಿ-20 ಟೂರ್ನಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಕೇವಲ 71 ಎಸೆತಗಳಲ್ಲಿ 214 ರನ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪ್ಯಾರಾಗಾನ್ ನಂಗರ್ ಹರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಫಾಕ್ ಅವರು 71 ಎಸೆತಗಳನ್ನು ಎದುರಿಸಿ 21 ಸಿಕ್ಸರ್ ಹಾಗೂ 16 ಬೌಂಡರಿಗಳನ್ನು ಬಾರಿಸಿದರು. ಶಫಾಕ್ ಅವರಿಗೆ ವಹೀದುಲ್ಲಾ ಶಫಾಕ್ ಸಾಥ್ ನೀಡಿ 31 ಎಸೆತಗಳಲ್ಲಿ 81 ರನ್ ಗಳಿಸಿದರು.

ಶಫಾಕ್ ಅವರ ದ್ವಿಶತಕದ ನೆರವಿನಿಂದ ಖತೀಝ್ ಅಕಾಡಮಿ ತಂಡ 20 ಓವರ್‌ಗಳಲ್ಲಿ 351 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಕಾಬೂಲ್ ಸ್ಟಾರ್ ಕ್ರಿಕೆಟ್ ಕ್ಲಬ್ 107 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ಟ್ವೆಂಟಿ-20 ದೇಶೀಯ ಲೀಗ್ ಟೂರ್ನಿಯಲ್ಲಿ ಖತೀಝ್ ಕ್ರಿಕೆಟ್ ಅಕಾಡಮಿ ಗರಿಷ್ಠ ಮೊತ್ತ ದಾಖಲಿಸಿದೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಪುಣೆ ವಾರಿಯರ್ಸ್ ವಿರುದ್ಧ 263 ರನ್ ಗಳಿಸಿದ್ದು ಇಲ್ಲಿ ತನಕದ ದಾಖಲೆಯಾಗಿತ್ತು.
ಅಫ್ಘಾನಿಸ್ತಾನ ಪರ ಶಫಾಕ್ ಅವರು ಈವರೆಗೆ 35 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, 392 ರನ್ ಗಳಿಸಿದ್ದಾರೆ. ಶಫಾಕ್ ಅಂತಾರಾಷ್ಟ್ರೀಯ ಟ್ವೆಂಟಿ-20 ಟೂರ್ನಿಯಲ್ಲಿ ಗಳಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಕೇವಲ 51. ಆದರೆ ಅವರ ಸ್ಟ್ರೈಕ್‌ರೇಟ್(143.07) ಉತ್ತಮವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications