ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಹೊಂದಿರುವ ವಿಶ್ವದ ಆಟಗಾರರು!

t20 cricket highest run scorer in world list

ಬೆಂಗಳೂರು, ಏಪ್ರಿಲ್ 6: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 5) ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿಶ್ವಮಟ್ಟದ ಟಿ20 ಸಾಧನೆಗಾಗಿ ಗುರುತಿಸಿಕೊಂಡಿದ್ದರು. ಪಂದ್ಯವನ್ನು ಬೆಂಗಳೂರು 5 ವಿಕೆಟ್ ಗಳಿಂದ ಸೋತಿತಾದರೂ ಕೊಹ್ಲಿ ಹೋರಾಟ ಗಣನೀಯವೆನಿಸಿತ್ತು.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

ಪಂದ್ಯದಲ್ಲಿ ಕೊಹ್ಲಿ 49 ಎಸೆತಕ್ಕೆ 84 ರನ್ ಸಿಡಿಸಿದ್ದರು. ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಹೀಗೆ ಒಟ್ಟು 5110 ರನ್ ಕಲೆ ಹಾಕುವ ಮೂಲಕ ಕೊಹ್ಲಿ ಐಪಿಎಲ್‌ನಲ್ಲಿ ಅತ್ಯಧಿಕ ರನ್ ದಾಖಲೆ ಹೊಂದಿದ್ದ ಸುರೇಶ್ ರೈನಾ (5086) ಅವರನ್ನು ಮೀರಿಸಿದ್ದರು.

IPL 2019: ವಿರಾಟ್ ಕೊಹ್ಲಿಯೀಗ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಸರದಾರIPL 2019: ವಿರಾಟ್ ಕೊಹ್ಲಿಯೀಗ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಸರದಾರ

ಅಷ್ಟೇ ಅಲ್ಲ, ಟಿ20 ಮಾದರಿಯಲ್ಲಿ 8000 ರನ್ ಗಡಿ ದಾಟಿದ 2ನೇ ಭಾರತೀಯ ಹೆಗ್ಗಳಿಕೆಗೂ ಕೊಹ್ಲಿ ಕಾರಣರಾಗಿದ್ದರು. ಕ್ರಿಕೆಟ್‌ ಮಾದರಿಗಳಲ್ಲೇ ಚುಟುಕು ಕ್ರಿಕೆಟ್ ಅನ್ನಿಸಿರುವ ಟಿ20ಯಲ್ಲಿ ಅತೀ ಹೆಚ್ಚು ರನ್ ಸಾಧನೆ ಮಾಡಿರುವ ವಿಶ್ವದ ಆಟಗಾರರ ಸಂಕ್ಷಿಪ್ತ ಮಾಹಿತಿ ಇಲ್ಲಿವೆ (ಗಮನಿಸಿ; ಈ ಅಂಕಿ-ಅಂಶಗಳು 5 ಏಪ್ರಿಲ್ 2019ರ ವರೆಗಿನ ಪಂದ್ಯಗಳನ್ನು ಅವಲಂಭಿಸಿದೆ).

ಗೇಲ್ ಬಳಿ ಸುಳಿದವರಿಲ್ಲ

ಗೇಲ್ ಬಳಿ ಸುಳಿದವರಿಲ್ಲ

ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ವಿಶ್ವದಾಖಲೆ ವೆಸ್ಟ್ ಇಂಡೀಸ್ ಬಲಾಡ್ಯ ಕ್ರಿಸ್‌ ಗೇಲ್ ಹೆಸರಿನಲ್ಲಿದೆ. ಗೇಲ್ ಒಟ್ಟು 366 ಇನ್ನಿಂಗ್ಸ್‌ಗಳಲ್ಲಿ 12457 ರನ್ ಕಲೆ ಹಾಕಿ ಅಗ್ರ ಸ್ಥಾನದಲ್ಲಿದ್ದಾರೆ. ಗೇಲ್ ಬಿಟ್ಟರೆ ಟಿ20ಯಲ್ಲಿ 10000 ರನ್ ಮಾಡಿದವರೂ ವಿಶ್ವದಲ್ಲಿಲ್ಲ. ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ 364 ಇನ್ನಿಂಗ್ಸ್‌ಗಳಲ್ಲಿ 9922 ರನ್ ದಾಖಲೆ ಹೊಂದಿದ್ದಾರೆ.

ಪೊಲಾರ್ಡ್ ತೃತೀಯ

ಪೊಲಾರ್ಡ್ ತೃತೀಯ

ವೆಸ್ಟ್ ಇಂಡೀಸ್ ಮತ್ತೊಬ್ಬ ದೈತ್ಯ ಕೀರನ್ ಪೊಲಾರ್ಡ್ ಟಿ20 ಅತ್ಯಧಿಕ ರನ್ ಬಾರಿಸಿದವರಲ್ಲಿ ವಿಶ್ವದಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ. ಒಟ್ಟು 419 ಇನ್ನಿಂಗ್ಸ್‌ಗಳಲ್ಲಿ ಪೊಲಾರ್ಡ್ 9087 ರನ್ ಬಾರಿಸಿದ್ದಾರೆ. 4ನೇ ಸ್ಥಾನದಲ್ಲಿ ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಇದ್ದಾರೆ (324 ಇನ್ನಿಂಗ್ಸ್, 8701 ರನ್) - ಚಿತ್ರಕೃಪೆ: ಮುಂಬೈ ಇಂಡಿಯನ್ಸ್ ಡಾಟ್ ಕಾಮ್.

ಸುರೇಶ್ ರೈನಾ 6ನೇ ಬ್ಯಾಟ್ಸ್ಮನ್

ಸುರೇಶ್ ರೈನಾ 6ನೇ ಬ್ಯಾಟ್ಸ್ಮನ್

ಇತ್ತೀಚೆಗಷ್ಟೇ ಒಂದು ವರ್ಷದ ನಿಷೇಧ ಶಿಕ್ಷೆ ಪೂರೈಸಿರುವ ಆಸ್ಟ್ರೇಲಿಯಾದ ಬೀಸುಗೈ ದಾಂಡಿಗ ಡೇವಿಡ್ ವಾರ್ನರ್ ಈ ಯಾದಿಯಲ್ಲಿ 5ರೊಳಗೆ ಸ್ಥಾನ ಪಡೆದಿದ್ದಾರೆ. ವಾರ್ನರ್ ಖಾತೆಯಲ್ಲಿ 8375 ರನ್‌ಗಳಿಗೆ. ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಸುರೇಶ್ ರೈನಾ ಟಿ20 ಅತ್ಯಧಿಕ ರನ್‌ಗಾಗಿ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ. 290 ಇನ್ನಿಂಗ್ಸ್‌ಗಳಲ್ಲಿ ರೈನಾ 8110 ರನ್ ಸಂಪಾದಿಸಿದ್ದಾರೆ.

ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್‌ಗಳಲ್ಲಿ ಕೊಹ್ಲಿ

ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್‌ಗಳಲ್ಲಿ ಕೊಹ್ಲಿ

ವಿಶ್ವ ಕ್ರಿಕೆಟ್‌ನಲ್ಲಿ ರನ್ ಮೆಷೀನ್ ಹೆಸರಿರುವ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಟಿ20 ಅತ್ಯಧಿಕ ರನ್‌ಗಾಗಿ 7ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 8067 ರನ್ ದಾಖಲೆ ಹೊಂದಿದ್ದಾರೆ. ಕೊಹ್ಲಿ ಬೆನ್ನಲ್ಲಿರುವ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ 7902 ರನ್ ಬಾರಿಸಿದ್ದಾರೆ.

Story first published: Saturday, April 6, 2019, 1:58 [IST]
Other articles published on Apr 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X