Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿಂಗ್ ಖಾನ್ ಶಾರುಖ್ ಈಗ ಮೂರು ಟಿ20 ತಂಡಗಳ ಒಡೆಯ!

ಮುಂಬೈ, ಜೂನ್ 20: ಭಾರತ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ತಂಡಗಳನ್ನು ಹೊಂದಿರುವ ಕಿಂಗ್ ಖಾನ್ ಶಾರುಖ್ ಕಣ್ಣು ಈಗ ದಕ್ಷಿಣ ಆಫ್ರಿಕಾದ ಮೇಲೆ ಬಿದ್ದಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಸಹ ಮಾಲೀಕರಾಗಿರುವ ಶಾರುಖ್ ಅವರು ಕೇಪ್ ಟೌನ್ ತಂಡದ ಫ್ರಾಂಚೈಸಿ ಪಡೆದಿದ್ದಾರೆ. ದೆಹಲಿ ಡೇರ್ ಡೆವಿಲ್ಸ್ ತಂಡದ ಮಾಲೀಕನಾಗಿರುವ ಜಿಎಂಆರ್ ಗ್ರೂಪ್ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ತಂಡವನ್ನು ಖರೀದಿ ಮಾಡಿದೆ.

T20 Global League: Shah Rukh Khan now co-owns Cape Town Knight Riders T20 Global League: Shah Rukh Khan now co-owns Cape Town Knight Riders


ಶಾರುಖ್ ಒಡೆತನದ ತಂಡವನ್ನು ದಕ್ಷಿಣ ಆಫ್ರಿಕಾದ ಜೆಪಿ ಡುಮಿನಿ ಅವರು ಮುನ್ನೆಡೆಸಲಿದ್ದು, ನವೆಂಬರ್-ಡಿಸೆಂಬರ್ ನಲ್ಲಿ ಪಂದ್ಯಗಳ್ಡೆು ಯಲಿದೆ.

ಲಂಡನ್ನಿನಲ್ಲಿ ಸೋಮವಾರ(ಜೂನ್ 19)ದಂದು ನಡೆದ ಸಮಾರಂಭದಲ್ಲಿ ಹೊಸ ತಂಡವನ್ನು ಘೋಷಿಸಲಾಯಿತು. ಶಾರುಖ್ ಅವರ ಫ್ರಾಂಚೈಸಿ ಹೆಸರು-ಕೇಪ್ ಟೌನ್ ನೈಟ್ ರೈಡರ್ಸ್ ಎಂಡು ಸಿಇಒ ಹರೂನ್ ಲೋರ್ಗಾಟ್ ಅವರು ಪ್ರಕಟಿಸಿದರು.



ಕೇಪ್ ಟೌನ್ ಹಾಗೂ ನ್ಯೂಲ್ಯಾಂಡ್ ಎರಡು ಮೈದಾನಗಳು ಈ ತಂಡಕ್ಕೆ ಲಭಿಸಿದೆ. 8 ತಂಡಗಳ ಜಾಗತಿಕ ಟಿ20 ಲೀಗ್ ಆರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್), ಕೆರಿಬಿಯನ್ ಕ್ರಿಕೆಟ್ ಲೀಗ್(ಸಿಪಿಎಲ್) ನಲ್ಲಿ ಟ್ರಿನಿಡಾಡ್ ನೈಟ್ ರೈಡರ್ಸ್ ತಂಡಗಳ ಮಾಲೀಕತ್ವ ಹೊಂದಿರುವ ಶಾರುಖ್ ಈಗ ಕೇಪ್ ಟೌನ್ ನೈಟ್ ರೈಡರ್ಸ್ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+