ಕಿಂಗ್ಸ್ ಟನ್ (ಜಮೈಕಾ), ಜುಲೈ 09: ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 190/6 ಸ್ಕೋರ್ ಮಾಡಿತು.ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ವಿಂಡೀಸ್ ಪಡೆ, ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.
ವೆಸ್ಟ್ ಇಂಡೀಸ್ ಚೇಸ್ :
* ಕ್ರಿಸ್ ಗೇಲ್ 18ರನ್ ಮಾತ್ರ ಗಳಿಸಿ ಔಟಾದರು.
* ಎವಿನ್ ಲೆವಿಸ್ ಅವರು ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿ 62 ಎಸೆತಗಳಲ್ಲಿ 125ರನ್ ಗಳಿಸಿ ಅಜೇಯರಾಗಿ ಉಳಿದು ಜಯ ತಂದಿತ್ತರು.
* ಲೆವಿಸ್ ಅವರು 6 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸಿ ತಮ್ಮ ಎರಡನೇ ಟಿ20 ಶತಕ ಗಳಿಸಿದರು. ಎರಡು ಶತಕಗಳನ್ನು ಭಾರತದ ವಿರುದ್ಧವೇ ಗಳಿಸಿದ್ದಾರೆ.
* ಮರ್ಲಾನ್ ಸ್ಯಾಮಿಯಲ್ಸ್ 29 ಎಸೆತಗಳಲ್ಲಿ 39ರನ್ ಗಳಿಸಿ ನಾಟೌಟ್ ಆಗಿ ಉಳಿದು ಜಯದ ಗಡಿ ದಾಟಿಸಿದರು.
ಟೀಂ ಇಂಡಿಯಾ ಇನ್ನಿಂಗ್ಸ್ :
* ಶಿಖರ್ ಧವನ್ ಜತೆ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು.
* ವಿರಾಟ್ ಕೊಹ್ಲಿ 22 ಎಸೆತಗಳಲ್ಲಿ 39ರನ್ ಹಾಗೂ ಧವನ್ 12 ಎಸೆತಗಳಲ್ಲಿ 23 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
* ರಿಷಬ್ ಪಂತ್ 35 ಎಸೆತಗಳಲ್ಲಿ 38ರನ್ ಗಳಿಸಿ, ದಿನೇಶ್ ಕಾರ್ತಿಕ್ ಜತೆಗೂಡಿ ರನ್ ಗತಿ ಹೆಚ್ಚಿಸಿದರು.
* ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 48ರನ್ ಗಳಿಸಿ 16ನೇ ಓವರ್ ನಲ್ಲಿ ಔಟಾದರು.
* ವೆಸ್ಟ್ ಇಂಡೀಸ್ ಪರ ಟೇಲರ್, ವಿಲಿಯಮ್ಸ್ ತಲಾ 2 ಹಾಗೂ ಸ್ಯಾಮುಯಲ್ಸ್ 1 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಪ್ರವಾಸಿ ಟೀಂ ಇಂಡಿಯಾ 3-1ರಲ್ಲಿ ಗೆದ್ದುಕೊಂಡಿದೆ. ಏಕೈಕ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದುಕೊಂಡಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಕಾರ್ಲೊಸ್ ಬ್ರಥ್ ವೈಟ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ವೆಸ್ಟ್ ಇಂಡೀಸ್ ನ ಏಕದಿನ ತಂಡದ ನಾಯಕ ಜಾಸನ್ ಹೋಲ್ಡರ್ ಅವರು ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕಾರ್ಲೊಸ್ ಬ್ರಥ್ ವೈಟ್ ಅವರು ನಾಯಕರಾಗಿದ್ದು, ಕ್ರಿಸ್ ಗೇಲ್, ಸುನಿಲ್ ನಾರಾಯಣ್ ಹಾಗೂ ಸ್ಯಾಮುಯಲ್ ಬದ್ರಿ ಅವರು ತಂಡ ಸೇರಿದ್ದಾರೆ.

ರಿಷಬ್ ಪಂತ್ ಗೆ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಲಭ್ಯವಾಗಲಿಲ್ಲ. ಟಿ20 ಪಂದ್ಯಕ್ಕೂ ಲಭ್ಯವಾಗಿದ್ದು, ಆಡುವ XIಯಲ್ಲಿ ಆಯ್ಕೆಯಾಗಿದ್ದಾರೆ. ಜತೆಗೆ ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ದಿನೇಶ್ ಕಾರ್ತಿಕ್ ಕೂಡಾ ತಂಡ ಸೇರಿದ್ದಾರೆ.
ಭಾರತ : ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಕೇದಾರ್ ಜಾಧವ್, ರವೀಂದ್ರ ಜಡೇಜ, ಆರ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್.
ವೆಸ್ಟ್ ಇಂಡೀಸ್ : ಕ್ರಿಸ್ ಗೇಲ್, ಇವಿನ್ ಲಿವಿಸ್, ಚಾಡ್ವಿಕ್ ವಾಲ್ಟನ್, ಮರ್ಲನ್ ಸ್ಯಾಮಿಯಲ್ಸ್, ಕಿರಾನ್ ಪೊಲ್ಲಾರ್ಡ್, ರೊವ್ಮನ್ ಪೊವೆಲ್, ಕಾರ್ಲಸ್ ಬ್ರಥ್ ವೈಟ್, ಸುನಿಲ್ ನಾರಾಯಣ್, ಸ್ಯಾಮುಯಲ್ ಬದ್ರಿ, ಜೆರೊಮಿ ಟೇಲರ್, ಕೆಸ್ರಿಕ್ ವಿಲಿಯಮ್ಸ್ (ಒನ್ಇಂಡಿಯಾ ಸುದ್ದಿ)