Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಮುಂಬೈ ಲೀಗ್: ಅರ್ಜುನ್ ತೆಂಡೂಲ್ಕರ್ ಅತ್ಯಧಿಕ ಬೆಲೆಗೆ ಮಾರಾಟ

T20 Mumbai League: Arjun Tendulkar picked for Rs 5 lakh

ಮುಂಬೈ, ಮೇ 4: ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಟಿ20 ಮುಂಬೈ ಲೀಗ್‌ನಲ್ಲಿ ಅತ್ಯಧಿಕ ಬೆಲೆಗೆ ಹರಾಜಾಗಿದ್ದಾರೆ. ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್ ಸಬರ್ಬ್ ಫ್ರಾಂಚೈಸಿ, ಅರ್ಜುರ್ನ್ ಅವರನ್ನು 5 ಲಕ್ಷ ರೂ. ಬೆಲೆಗೆ ಖರೀದಿಸಿದೆ.

ಎಡಗೈ ವೇಗಿ ಮತ್ತು ಬ್ಯಾಟ್ಸ್ಮನ್‌ ಆಗಿರುವ ಅರ್ಜುನ್ ಅನಧಿಕೃತ ಟೆಸ್ಟ್ ನಲ್ಲಿ ಭಾರತ ಅಂಡರ್ -19 ತಂಡದಲ್ಲಿ ಆಡಿದ್ದರು. ಬಿಡ್ ವೇಳೆ ಗಮನಾರ್ಹ ಆಟಗಾರರಲ್ಲಿ ಅರ್ಜುನ್ ಕೂಡ ಗುರುತಿಕೊಂಡಿದ್ದರು. ಆಲ್ ರೌಂಡರ್ ವಿಭಾಗದಲ್ಲಿದ್ದ ತೆಂಡೂಲ್ಕರ್ ಪುತ್ರನ ಮೂಲಬೆಲೆ 1 ಲಕ್ಷ ರೂ. ಆಗಿತ್ತು.

ಚಾರು ಶರ್ಮಾ ನಡೆಸಿಕೊಟ್ಟ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್‌ಗಾಗಿ ಹಲವಾರು ಫ್ರಾಂಚೈಸಿಗಳು ಬಿಡ್ ನಡೆಸಿದವು. ಹೊಸ ತಂಡಗಳಲ್ಲಿ ಎರಡಾದ ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್ ಸಬರ್ಬ್ ಮತ್ತು ಈಗಲ್ ಥಾನೆ ಸ್ಟ್ರೈಕರ್ಸ್ 5 ಲಕ್ಷ ರೂ. ಬೆಲೆಗೆ ಅರ್ಜುನ್ ಗೆ ಬಿಡ್ ಮಾಡಿದವು. ಅಂತಿಮವಾಗಿ ಲಕ್ಕಿ ಡ್ರಾ ಮೂಲಕ ಅರ್ಜುನ್, ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್ ಸಬರ್ಬ್ ಪಾಲಾದರು.

ಇನ್ನು ಸೂರ್ಯಕುಮಾರ್ ಯಾದವ್, ಆಕಾಶ್ ಪಾರ್ಕರ್ (ಟ್ರೈಂಫ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್), ಶಿವಮ್ ದೂಬೆ, ಸಿದ್ದೇಶ್ ಲಾಡ್ (ಶಿವಾಜಿ ಪಾರ್ಕ್ ಲಯನ್ಸ್), ಪೃಥ್ವಿ ಶಾ (ನಾರ್ತ್ ಮುಂಬೈ ಪ್ಯಾಂಥರ್ಸ್), ಜೇ ಬಿಸ್ತಾ ಮತ್ತು ಧುರ್ಮಿಲ್ ಮಾಟ್ಕರ್ (ಸೊಬೋ ಸೂಪರ್‌ಸಾನಿಕ್ಸ್), ಶುಭಾಮ್ ರಂಜನೆ, ತುಷಾರ್ ದೇಶಪಾಂಡೆ (ಆರ್ಕ್ಸ್ ಅಂಧೇರಿ), ಶ್ರೇಯಸ್ ಅಯ್ಯರ್, ಏಕನಾಥ್ ಕೆರ್ಕರ್ (ನಮೋ ಬಾಂದ್ರಾ ಬ್ಲಾಸ್ಟರ್ಸ್) ಆರು ಫ್ರಾಂಚೈಸಿಗಳು ಉಳಿಸಿಕೊಂಡಿವೆ.

Story first published: Saturday, May 4, 2019, 18:47 [IST]
Other articles published on May 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+