For Quick Alerts
ALLOW NOTIFICATIONS  
For Daily Alerts
 

T20 WC 2024: ಟಿ20 ಕ್ರಿಕೆಟ್‌ನಲ್ಲಿ ಯೂನಿವರ್ಸಲ್ ಬಾಸ್ ದಾಖಲೆ ಹಿಂದಿಕ್ಕಿದ ನಿಕೋಲಸ್ ಪೂರನ್

ವೆಸ್ಟ್ ಇಂಡೀಸ್ ಕ್ರಿಕೆಟ್‌ ಐತಿಹಾಸಿಕ ಕ್ಷಣದಲ್ಲಿ ಮಾಜಿ ಲೆಜೆಂಡ್ ಕ್ರಿಕೆಟಿಗ ಹಾಗೂ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ ಟಿ20 ದಾಖಲೆಯನ್ನು ಹಿಂದಿಕ್ಕುವ ಮೂಲಕ ಅಪರೂಪದ ಸಾಧನೆ ಮಾಡಿದರು.

ಟ್ರಿನಿಡಾಡ್‌ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ 2024ರ ಟಿ20 ವಿಶ್ವಕಪ್ ಪಂದ್ಯದ ವೇಳೆ ನಿಕೋಲಸ್ ಪೂರನ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

T20 WC 2024 Nicholas Pooran Surpasses Chris Gayle s Record for West Indies in T20 Cricket

28 ವರ್ಷದ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಅವರ 1,899 ರನ್‌ಗಳ ದಾಖಲೆಯನ್ನು ಮೀರಿಸಲು ಕೇವಲ 3 ರನ್‌ಗಳ ಅಗತ್ಯವಿತ್ತು.

ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡಿದ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿಯೊಂದಿಗೆ ನಿಕೋಲಸ್ ಪೂರನ್ ಈ ಮೈಲಿಗಲ್ಲನ್ನು ಸಾಧಿಸಿದರು. ತಲುಪಿದರು.

ಅವರ ಈ ಶಾಟ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಹಿಂದಿಕ್ಕಿದ್ದು ಮಾತ್ರವಲ್ಲದೆ, ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್‌ ಪರ ರನ್ ಗಳಿಸಿದವರ ಪಟ್ಟಿಯಲ್ಲಿ ನಿಕೋಲಸ್ ಪೂರನ್ ಹೆಸರನ್ನು ಅಗ್ರಸ್ಥಾನದಲ್ಲಿ ಇರಿಸಿತು.

ಪಂದ್ಯಕ್ಕೂ ಮುನ್ನ ನಿಕೋಲಸ್ ಪೂರನ್ 90 ಟಿ20 ಪಂದ್ಯಗಳಲ್ಲಿ 1,897 ರನ್ ಗಳಿಸಿದ್ದರು. ಪಂದ್ಯದ ಅಂತ್ಯದ ವೇಳೆಗೆ, ಅವರು 12 ಎಸೆತಗಳಲ್ಲಿ 3 ಬೌಂಡರಿಗಳನ್ನು ಒಳಗೊಂಡಂತೆ 17 ರನ್‌ ಕಲೆಹಾಕಿದರು.

ಈ ನಿಕೋಲಸ್ ಪೂರನ್ ತಮ್ಮ ಒಟ್ಟಾರೆ 91 ಟಿ20 ಪಂದ್ಯಗಳಲ್ಲಿ 25.52ರ ಸರಾಸರಿ ಮತ್ತು 134.03ರ ಸ್ಟ್ರೈಕ್ ರೇಟ್‌ನೊಂದಿಗೆ 1,914 ರನ್‌ ಗಳಿಸಿದ್ದಾರೆ.

ನಿಕೋಲಸ್ ಪೂರನ್ ಅವರ ಇತ್ತೀಚಿನ ಬ್ಯಾಟಿಂಗ್ ಫಾರ್ಮ್ ಅತ್ಯುತ್ತಮವಾಗಿದ್ದು, ಐಪಿಎಲ್ 2024ರ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ 499 ರನ್ ಗಳಿಸಿದರು ಮತ್ತು ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ತಮ್ಮ ಪ್ರಭಾವಶಾಲಿ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದರು.

ವೆಸ್ಟ್ ಇಂಡೀಶ್ ತಂಡದ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 25 ಎಸೆತಗಳಲ್ಲಿ 75 ರನ್ ಗಳಿಸಿದರು. ನಂತರ ಪಪುವಾ ನ್ಯೂ ಗಿನಿಯಾ ವಿರುದ್ಧ 27 ರನ್ ಮತ್ತು ಉಗಾಂಡಾ ವಿರುದ್ಧ 22 ರನ್ ಬಾರಿಸಿದರು.

ವಿಕೆಟ್ ಕೀಪರ್-ಬ್ಯಾಟರ್ ಆಗಿ ನಿಕೋಲಸ್ ಪೂರನ್ ತಮ್ಮ ತಂಡಕ್ಕೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಕ್ರಿಸ್ ಗೇಲ್ ಅವರ ರನ್ ದಾಖಲೆಯನ್ನು ಮುರಿಯುವುದರ ಜೊತೆಗೆ, ನಿಕೋಲಸ್ ಪೂರನ್ ಟಿ20 ಪಂದ್ಯಗಳಲ್ಲಿ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರ 124 ಸಿಕ್ಸರ್‌ಗಳ ಸಂಖ್ಯೆಯನ್ನು ಮೀರಿಸುವ ಅಂಚಿನಲ್ಲಿದ್ದಾರೆ.

ನಿಕೋಲಸ್ ಪೂರನ್ ಪ್ರಸ್ತುತ 120 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ಮತ್ತು ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ನಿಂದ ಅತಿ ಹೆಚ್ಚು ಸಿಕ್ಸರ್‌ಗಳ ಅಗ್ರಸ್ಥಾನವನ್ನು ಏರಲು ಕೇವಲ ಐದು ಸಿಕ್ಸರ್‌ಗಳು ಮಾತ್ರ ಅಗತ್ಯವಿದೆ.

Story first published: Thursday, June 13, 2024, 17:29 [IST]
Other articles published on Jun 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+