ಟಿ20 ವಿಶ್ವಕಪ್: 5 ವರ್ಷಗಳಿಂದ ಮುರಿಯಲಾಗದಿದ್ದ ಅತಿಹೆಚ್ಚು ವೀಕ್ಷಣೆಯ ದಾಖಲೆ ಮುರಿದಿದೆ ಈ ಒಂದು ಪಂದ್ಯ

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ಎಂದರೆ ಕೇವಲ ಭಾರತ ಮತ್ತು ಪಾಕಿಸ್ತಾನ ತಂಡಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ತಮ್ಮ ಪಾಲಿನ ಕೆಲಸಗಳನ್ನು ಬದಿಗಿಟ್ಟು ವೀಕ್ಷಿಸುತ್ತಾರೆ. ಹೀಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಪಂದ್ಯಗಳನ್ನು ದೊಡ್ಡ ಮಟ್ಟದಲ್ಲಿ ವೀಕ್ಷಿಸುತ್ತಾರೆ.
ಹೀಗೆ ಜಗತ್ತಿನಾದ್ಯಂತ ವೀಕ್ಷಕರನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈ ಹಿಂದೆ ಸಾಕಷ್ಟು ದಾಖಲೆಗಳಿಗೆ ಕಾರಣವಾಗಿದೆ. ಅದೇ ರೀತಿ ಈ ಬಾರಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ ಟ್ವೆಂಟಿ ವಿಶ್ವಕಪ್‌ನ ಪಂದ್ಯ ಕೂಡ ನೂತನ ದಾಖಲೆಯೊಂದನ್ನು ಬರೆದಿದ್ದು ಬರೋಬ್ಬರಿ 5 ವರ್ಷಗಳಿಂದ ಯಾವ ಪಂದ್ಯಗಳು ಸಹ ಮುರಿಯಲಾಗದ ದಾಖಲೆಯೊಂದನ್ನು ಮುರಿದು ಹಾಕಿದೆ.
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಬರೋಬ್ಬರಿ 167 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಪಂದ್ಯವೆನಿಸಿಕೊಂಡಿದೆ.ಈ ಹಿಂದಿನ ಹಣಾಹಣಿಗೆ ಹೋಲಿಸಿದರೆ ಈ ಬಾರಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ದೊಡ್ಡ ಮಟ್ಟದ ರನ್ ಹೊಳೆ ಹರಿದಿರಲಿಲ್ಲ, ಪಂದ್ಯದುದ್ದಕ್ಕೂ ದೊಡ್ಡ ಮಟ್ಟದ ಪೈಪೋಟಿ ಕೂಡ ಇರಲಿಲ್ಲ, ಆದರೂ ಸಹ ಇಷ್ಟು ದೊಡ್ಡ ಮಟ್ಟದ ವೀಕ್ಷಕರಿಂದ ಈ ಪಂದ್ಯ ವೀಕ್ಷಿಸಲ್ಪಟ್ಟಿರುವುದು ಇತ್ತಂಡಗಳ ನಡುವಿನ ಪಂದ್ಯದ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಇರುವ ಕುತೂಹಲ ಎಂತಹದ್ದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿರುವ ಪಂದ್ಯಗಳ ವಿವರ ಮುಂದೆ ಇದೆ ಓದಿ..

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೇ ನಂಬರ್ ಒನ್
ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತಮ್ಮ ಚೊಚ್ಚಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವೊಂದರಲ್ಲಿ ಭಾರತ ತಂಡವನ್ನು ಸೋಲಿಸಿದ ಸಾಧನೆಯನ್ನು ಪಾಕಿಸ್ತಾನ ತಂಡ ಮಾಡಿತು. ಹೀಗೆ ಪಾಕಿಸ್ತಾನದ ಅತಿದೊಡ್ಡ ಮೈಲಿಗಲ್ಲಿಗೆ ಸಾಕ್ಷಿಯಾದ ಈ ಪಂದ್ಯ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ಹೆಚ್ಚು ವೀಕ್ಷಕರಿಂದ ವೀಕ್ಷಿಸಲ್ಪಟ್ಟ ಪಂದ್ಯ ಎಂಬ ಸಾಧನೆಗೂ ಕೂಡ ಭಾಜನವಾಗಿದೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಈ ಪಂದ್ಯವನ್ನು ಒಟ್ಟು 167 ಮಿಲಿಯನ್ ಜನ ವೀಕ್ಷಿಸಿದ್ದು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಎನಿಸಿಕೊಂಡಿದೆ.

5 ವರ್ಷಗಳ ಹಿಂದೆ ಸೃಷ್ಟಿಯಾಗಿತ್ತು ದಾಖಲೆ
ಈ ಹಿಂದೆ 2016ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯವೊಂದರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಟ ನಡೆಸಿದ್ದವು. ಈ ಪಂದ್ಯವನ್ನು ಬರೋಬ್ಬರಿ 136 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದರು. ಆಗಿನ ಸಮಯಕ್ಕೆ ಈ ಪಂದ್ಯ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದ ಪಂದ್ಯ ಎಂಬ ದಾಖಲೆಯನ್ನು ನಿರ್ಮಿಸಿತ್ತು. ಈ ದಾಖಲೆಯನ್ನು ನಂತರ ನಡೆದ ಯಾವುದೇ ಟಿ ಟ್ವೆಂಟಿ ಪಂದ್ಯಗಳು ಕೂಡ ಮುರಿಯುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ 5 ವರ್ಷಗಳ ನಂತರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮರಳಿ ಬಂದಿದ್ದು ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಪಂದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದಿದ್ದ ಪಂದ್ಯದ ವೀಕ್ಷಣೆಯ ದಾಖಲೆಯನ್ನು ಮುರಿದು ಹಾಕಿದೆ.

273 ಮಿಲಿಯನ್ ವೀಕ್ಷಣೆ ಪಡೆದಿತ್ತು ಭಾರತ vs ಪಾಕ್ 2019ರ ಏಕದಿನ ವಿಶ್ವಕಪ್ ಪಂದ್ಯ
ಭಾರತ ಮತ್ತು ಪಾಕ್ ನಡುವಿನ ವಿಶ್ವಕಪ್ ಹಣಾಹಣಿ ದಾಖಲೆಯನ್ನು ನಿರ್ಮಿಸಿರುವುದು ಇದೇ ಮೊದಲೇನಲ್ಲ. 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬರೋಬ್ಬರಿ 273 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications