Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪವರ್‌ಫುಲ್ ತಂಡವನ್ನ ಫೈನಲ್‌ನಲ್ಲಿ ಕಣಕ್ಕಿಳಿಸಲು ಯೋಜಿಸಿದೆ ನ್ಯೂಜಿಲೆಂಡ್: ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ

New zealand team

ಮೊಟ್ಟಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿರುವ ನ್ಯೂಜಿಲೆಂಡ್ ತಂಡ ಭಾನುವಾರ (ನ. 14) ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇದುವರೆಗೂ ಒಂದೂ ಐಸಿಸಿ ಟ್ರೋಫಿ ಗೆಲ್ಲದ ಕಿವೀಸ್ ಪಡೆ ಹೇಗಾದರೂ ಮಾಡಿ ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕು ಎಂದು ಪಣತೊಟ್ಟಿದೆ.

ಐಸಿಸಿ ಟ್ರೋಫಿ ಫೈನಲ್‌ಗಳಲ್ಲಿ ಆಡಿದ ಸಾಕಷ್ಟು ಅನುಭವ ಹಾಗೂ ಮನಸ್ಥೈರ್ಯವನ್ನ ಹೊಂದಿರುವ ಕಾಂಗರೂ ಪಡೆಗೆ ಕಿವೀಸ್ ದೊಡ್ಡ ಸವಾಲೊಡ್ಡಲಿದೆ ಎಂಬುದು ತಿಳಿದಿದೆ. ಮೊದಲೇ ಬದ್ಧ ವೈರಿಗಳಾದ ಉಭಯ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್‌ ಅತ್ಯಂತ ಲೆಕ್ಕಾಚಾರದಿಂದ ಆಯ್ಕೆ ಮಾಡಿ ಕಣಕ್ಕಿಳಿಸಲು ಯೋಜಿಸಿವೆ.

ಚುಟುಕು ಕ್ರಿಕೆಟ್‌ನ ಬಲಿಷ್ಠ ತಂಡ ಪಾಕಿಸ್ತಾನವನ್ನೇ ಸೆಮಿಫೈನಲ್‌ನಲ್ಲಿ ಮಣಿಸಿ ಫೈನಲ್‌ಗೇರಿರುವ ಆಸ್ಟ್ರೇಲಿಯಾ, ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಅಖಾಡಕ್ಕಿಳಿಯಲಿದೆ. ಇದೇ ರೀತಿಯಲ್ಲಿ ನ್ಯೂಜಿಲೆಂಡ್ ಟೀಮ್ ಕೂಡ ಸೂಕ್ಷ್ಮವಾಗಿ ತಂಡದ ಆಯ್ಕೆ ನಡೆಸಲಿದೆ.

2016ರಲ್ಲಿ ಕೊನೆಯ ಬಾರಿ ಮುಖಾಮುಖಿ

2016ರಲ್ಲಿ ಕೊನೆಯ ಬಾರಿ ಮುಖಾಮುಖಿ

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕೊನೆಯ ಬಾರಿಗೆ 2016ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಅದಾಗಿ ಐದು ವರ್ಷಗಳ ಬಳಿಕ ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಅದ್ರಲ್ಲೂ ಫೈನಲ್‌ನಲ್ಲಿ ಎದುರಾಗುತ್ತಿವೆ.

ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ 2019ರ 50 ಓವರ್‌ಗಳ ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ಪಂದ್ಯ ಟೈ ಆಗಿ, ಸೂಪರ್‌ ಓವರ್‌ನಲ್ಲೂ ಟೈ ಆದ್ರೂ, ಬೌಂಡರಿ ಆಧಾರದ ಮೇಲೆ ಸೋಲನ್ನ ಅನುಭವಿಸಿದನ್ನ ಮರೆತಿಲ್ಲ. ಹೀಗಾಗಿ ಫೈನಲ್‌ನಲ್ಲಿ ಎಚ್ಚರಿಕೆಯಿಂದ ಆಡಲು ಯೋಜನೆ ರೂಪಿಸಿದೆ.

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದಿತ್ತು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದಿತ್ತು

ಇದೇ ವರ್ಷ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ, ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿದ್ದ ಟೀಮ್ ಇಂಡಿಯಾವನ್ನ ಸೋಲಿಸಿ ಮೊದಲ ಐಸಿಸಿ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತ್ತು. ಕೇನ್ ವಿಲಿಯಮ್ಸನ್‌ರ ಚಾಣಾಕ್ಯ ನಾಯಕತ್ವದಿಂದ ಕಿವೀಸ್ ಪಡೆ ಇದೀಗ ಮತ್ತೆ ಐಸಿಸಿ ಟ್ರೋಫಿಯ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿದೆ.

''ಅಪ್ಪ, ನಾನು ಭಾರತದ ಪರ ಆಡ್ಬೇಕು'' : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ

ಮಾರ್ಟಿನ್ ಗಪ್ಟಿಲ್ ಮತ್ತು ಮಿಚೆಲ್ ಓಪನಿಂಗ್

ಮಾರ್ಟಿನ್ ಗಪ್ಟಿಲ್ ಮತ್ತು ಮಿಚೆಲ್ ಓಪನಿಂಗ್

ಮಾರ್ಟಿನ್ ಗಪ್ಟಿಲ್ ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಕೆಲವು ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ ಅವರ 93ರನ್‌ಗಳು ಪ್ರಮುಖ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಇದುವರೆಗೂ ಅವರು ಒಟ್ಟಾರೆಯಾಗಿ 180 ರನ್‌ಗಳಿಸಿದ್ದಾರೆ. ಯುಎಪಿ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಿಲ್ಲ, ಸೆಮಿಫೈನಲ್‌ನಲ್ಲಿ ಸ್ವಲ್ಪ ಬೇಗನೆ ಔಟಾಗಿದ್ರೂ, ಆಸ್ಟ್ರೇಲಿಯಾ ವಿರುದ್ಧ ಅವರ ದಾಖಲೆ ಉತ್ತಮವಾಗೇ ಇದೆ.

ಮತ್ತೊಂದೆಡೆ, ಡೆರಿಲ್ ಮಿಚೆಲ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಲು ತಮ್ಮ ಜೀವನದ ಪ್ರಮುಖ ಇನ್ನಿಂಗ್ಸ್ ಆಡಿದ್ರು. 40 ಎಸೆತಗಳಲ್ಲಿ 46 ರನ್ ದಾಖಲಿಸಿದ ಮಿಚೆಲ್ ಅವರು ತಮ್ಮ ಕೊನೆಯ ಏಳು ಎಸೆತಗಳಲ್ಲಿ 26 ರನ್ ಗಳಿಸಿ ಡೆತ್‌ ಓವರ್‌ಗಲಲ್ಲಿ ಅಬ್ಬರಿಸಿದ್ರು. ಈತ ಪ್ರಸ್ತುತ 193 ರನ್‌ಗಳೊಂದಿಗೆ ತಮ್ಮ ತಂಡಕ್ಕೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಮಿಡಲ್ ಆರ್ಡರ್ ಬಲಿಷ್ಠವಾಗಿದೆ

ಮಿಡಲ್ ಆರ್ಡರ್ ಬಲಿಷ್ಠವಾಗಿದೆ

ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಗ್ಲೆನ್ ಫಿಲಿಪ್ಸ್ ಜೊತೆಗೆ ಟಿಮ್ ಸೀಫರ್ಟ್ ಕಿವೀಸ್ ಮಿಡಲ್ ಆರ್ಡರ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಉತ್ತಮವಾಗಿ ಆಡ್ತಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಬಲಗೈ ಗಾಯಕ್ಕೆ ತುತ್ತಾಗಿರುವ ಕಾರಣ ಭಾನುವಾರ ನಡೆಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇಷ್ಟಕ್ಕೆ ಮಾತ್ರವಲ್ಲದೆ ಭಾರತದ ವಿರುದ್ಧ ಟಿ20 ಸರಣಿಗೂ ಡೆವೊನ್ ಅಲಭ್ಯರಾಗಿದ್ದಾರೆ.

ಹೀಗಾಗಿ ಇವರ ಬದಲಿಗೆ ಟಿಮ್ ಸೀಫರ್ಟ್ ಅವರನ್ನು ನೇಮಿಸುವ ಸಾಧ್ಯತೆಯಿದೆ. ಗ್ಲೆನ್ ಫಿಲಿಪ್ಸ್ ನಂ.4ನಲ್ಲಿ ಬ್ಯಾಟಿಂಗ್ ಮಾಡಬೇಕು. ಆದರೆ ಸೀಫರ್ಟ್ ಅನ್ನು ನಂ. 6 , ಜೇಮ್ಸ್ ನೀಶಮ್‌ಗೂ ಮೊದಲು ಬ್ಯಾಟಿಂಗ್‌ಗೆ ಕಳುಹಿಸುವ ಸಾಧ್ಯತೆಯಿದೆ.

ತಂಡಕ್ಕಿದೆ ಆಲ್‌ರೌಂಡರ್‌ಗಳ ಬಲ

ತಂಡಕ್ಕಿದೆ ಆಲ್‌ರೌಂಡರ್‌ಗಳ ಬಲ

ಜೇಮ್ಸ್ ನೀಶಮ್ ಸೆಮಿಫೈನಲ್‌ನಲ್ಲಿ 11 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇದೇ ರೀತಿಯಲ್ಲಿ ಫೈನಲ್‌ನಲ್ಲೂ ಜೇಮ್ಸ್ ನೀಶಮ್ ಮಿಂಚುವ ಸಾಧ್ಯತೆಯಿದೆ. ಇವರ ಜೊತೆಗೆ ಮಿಚೆಲ್ ಸ್ಯಾಂಟ್ನರ್‌ ಬೌಲ್ ಹಾಗೂ ಬ್ಯಾಟ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.

ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ

ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ

ಟ್ರೆಂಟ್ ಬೌಲ್ಟ್‌ ಸೆಮಿಫೈನಲ್‌ನಲ್ಲಿ ಸ್ವಲ್ಪ ದುಬಾರಿಯಾದ್ರೂ ಸಹ ಫೈನಲ್‌ನಲ್ಲಿ ಪರಿಣಾಮಕಾರಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಬೌಲ್ಟ್ ಜೊತೆಗೆ ಟಿಮ್ ಸೌಥಿ, ಆ್ಯಡಮ್ ಮಿಲ್ನೆ, ಲೆಗ್ ಸ್ಪಿನ್ನರ್ ಇಶ್ ಸೋಧಿ ಉತ್ತಮ ಫಾರ್ಮ್ ಅನ್ನು ಮುಂದುವರಿಸಲಿದ್ದಾರೆ. ಜೊತೆಗೆ ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಅಸ್ತ್ರವೂ ಹೆಚ್ಚು ಬಲ ನೀಡಲಿದೆ.

Story first published: Saturday, November 13, 2021, 18:45 [IST]
Other articles published on Nov 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+