ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಮತ್ತೊಂದು ಸೋಲು!

T20 world cup: 18th Match, South Africa won against West Indies by 8 wickets Highlights

ಈ ಬಾರಿಯ ಟಿ20 ವಿಶ್ವಕಪ್‌ಗೆ ಹಾಲಿ ಚಾಂಪಿಯನ್ನರಾಗಿ ಕಾಲಿಟ್ಟ ವೆಸ್ಟ್ ಇಂಡೀಸ್ ತಂಡ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧವೂ ವೆಸ್ಟ್ ಇಮಡೀಸ್ ತಮಡ ಸೋಲು ಕಂಡಿದ್ದು ಸತತ ಎರಡನೇ ಸೋಲು ಅನುಭವಿಸಿದಂತಾಗಿದೆ.

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಟಗಾರ ಎವಿನ್ ಲೂಯಿಸ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. 35 ಎಸೆತ ಎದುರಿಸಿದ ಲೂಯೀಸ್ 56 ರನ್‌ ಸಿಡಿಸಿದರು. ನಾಯಕ ಕಿರಾನ್ ಪೊಲಾರ್ಡ್ 26 ರನ್‌ಗಳ ಕೊಡುಗೆ ಸಲ್ಲಿಸಿದರು. ಅಂತಿಮವಾಗಿ ವೆಸ್ಟ್ ಇಂಡಿಸ್ ನಿಗದಿತ 20 ಓವರ್‌ಗಳಲ್ಲಿ 144 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು.

ಇನ್ನು ವೆಸ್ಟ್ ಇಂಡೀಸ್ ನೀಡಿದ ಈ ಸವಾಲನ್ನು ಪಡೆದ ದಕ್ಷಿಣ ಆಫ್ರಿಕಾ ತಂಡ ನಾಯಕ ಬವುಮಾ ವಿಕೆಟ್‌ಅನ್ನು ಶೀಘ್ರವಾಗಿಯೇ ಕಳೆದುಕೊಂಡಿತು. ಆದರೆ ನಂತರ ವಿಂಡೀಸ್ ಬೌಲರ್‌ಗಳ ದಾಳಿ ದಕ್ಷಿಣ ಆಫ್ರಿಕಾ ದಾಮಡಿಗರ ಮುಂದೆ ಪರಿಣಾಮಕಾರಿಯಾಗಲಿಲ್ಲ. ರೀಜಾ ಹೆಂಡ್ರಿಕ್ಸ್, ರಸೀ ವಾನ್‌ ಡರ್ ಡಸನ್ ಹಾಗೂ ಏಡಿನ್ ಮಾರ್ಕ್ರಮ್ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು. ವೆಸ್ಟ್ ಇಮಡಿಸ್ ನೀಡಿದ ಗುರಿಯನ್ನು ಇನ್ನೂ 19 ಎಸೆತ ಬಾಕಿಯಿರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು ಗೆದ್ದುಕೊಂಡಿತು. ದಕ್ಷಿಣ ಆಫ್ರಿಕಾ ಪರವಾಗಿ ಮಾರ್ಕ್ರಮ್ ಕೇವಲ 26 ಎಸೆತಗಳಲ್ಲಿ 51 ರನ್‌ಗಳಿಸಿ ಈ ಗೆಲುವನ್ನು ಮತ್ತಷ್ಟು ಸುಲಭವಾಗಿಸಿದರು.

ವೆಸ್ಟ್ ಇಂಡೀಸ್ ಆಡುವ ಬಳಗ: ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಕೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್
ಬೆಂಚ್: ಒಬೆಡ್ ಮೆಕಾಯ್, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಓಶೇನ್ ಥಾಮಸ್

Sachin Tendulkar ಅವರು Shami ವಿಚಾರವಾಗಿ ಹೇಳಿದ್ದೇನು | Oneindia Kannada

ದಕ್ಷಿಣ ಆಫ್ರಿಕಾ ಆಡುವ ಬಳಗ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡರ್ ಡಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ
ಬೆಂಚ್: ಕ್ವಿಂಟನ್ ಡಿ ಕಾಕ್, ಲುಂಗಿ ಎನ್‌ಗಿಡಿ, ಜಾರ್ನ್ ಫಾರ್ಟುಯಿನ್, ವಿಯಾನ್ ಮುಲ್ಡರ್

Story first published: Wednesday, October 27, 2021, 9:57 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X