For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಗೆದ್ದು ಬೀಗಿದ ಪಾಕಿಸ್ತಾನ

T20 world cup: 19th Match, Pakistan won by 5 wickets against New Zealand, Highlights
Pakistan ನಿನ್ನೆ ಗೆದ್ದ ನಂತರ Indiaಗೆ ಉಪಯೋಗವಾಯಿತೇ | Oneindia Kannada

ಪಾಕಿಸ್ತಾನ ಈ ಬಾರಿಯ ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾದ ಪಾಕಿಸ್ತಾನ ಅಂತಿಮವಾಗಿ ಭರ್ಜರಿಯಾಗಿ ಗೆದ್ದು ಬೀಗಿದೆ. ಕಿವೀಸ್ ಪಡೆಯ ವಿರುದ್ಧ ಬಾಬರ್ ಅಜಂ ನೇತೃತ್ವದ ತಂಡ 5 ವಿಕೆಟ್‌ಗಳ ಅಂತರದ ಗೆಲುವು ಪಡೆದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಪಾಕಿಸ್ತಾನದ ವೇಗಿ ಹ್ಯಾರೀಸ್ ರವೂಫ್ ದಾಳಿಗೆ ನಲಿಗಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಯಾರೊಬ್ಬರು ಕೂಡ ಉತ್ತಮ ಮೊತ್ತ ಗಳಿಸಲು ಸಫಲವಾಗಲಿಲ್ಲ. ಆರಂಭಿಕ ಆಟಗಾರ ಡೈರ್ಲ್ ಮಿಚೆಲ್ ಹಾಗೂ ಕಾನ್ವೆ ತಲಾ 27 ರನ್‌ಗಳಿಸಿದರೆ ನಾಯಕ ಕೇನ್ ವಿಲಿಯಮ್ಸನ್ 25 ರನ್‌ಗಳ ಕೊಡುಗೆ ನೀಡಿದರು.

ಪಾಕಿಸ್ತಾನದ ಪರವಾಗಿ ಹ್ಯಾರಿಸ್ ರವೂಫ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. 4 ಓವರ್‌ಗಳಲ್ಲಿ ಹ್ಯಾರಿಸ್ ಕೇವಲ 22 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ಉಳಿದಂತೆ ಶಾಹೀನ್ ಅಫ್ರಿದಿ, ಇಮದ್ ವಾಸಿಂ ಹಾಗೂ ಹಫೀಜ್ ತಲಾ ಒಂದು ವಿಕೆಟ್ ಕಬಳಿಸಲು ಯಶಸ್ವಿಯಾದರು.

ಇನ್ನು 135 ರನ್‌ಗಳ ಗುರಿಯನ್ನು ಪಡೆದ ಪಾಕಿಸ್ತಾನಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಪಾಕಿಸ್ತಾನದ ನಾಯಕ ಬಾಬರ್ ಅಜಂ 9 ರನ್‌ಗಳಿಸಿ ಔಟಾದರು. ನಂತರ ಬಂದ ಫಖರ್ ಜಮಾನ್ 11 ಎನ್‌ಗಳಿಗೆ ಔಟಾದರು. ಮೊಹಮ್ಮದ್ ಹಫೀಜ್ ಕೂಡ 11 ರನ್‌ಗಳಿಗೆ ಔಟಾದರು. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 33 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ಪಾಕಿಸ್ತಾನ 69 ರನ್‌ಗಳಿಗೆ 4 ವಿಕೆಟ್ ಕಳೆದುಕೊಮಡಿ ಸಂಕಷ್ಟದಲ್ಲಿತ್ತು. ಬಳಿಕ ಇಮದ್ ವಾಸಿಂ ತಂಡದ ಮೊತ್ತ 85 ರನ್ ಆಗುವಷ್ಟರಲ್ಲಿ ಔಟಾಗಿ ಪೆವಿಲಿಯನ್ ಸೇರುವ ಮೂಲಕ ಪಾಕಿಸ್ತಾನದ ಸೋಲು ಖಚಿತ ಎಂಬಂತಾ ಸ್ಥಿತಿಯಿತ್ತು.

ಆದರೆ ಈ ಸಂದರ್ಭದಲ್ಲಿ ಅನುಭವಿ ಶೋಯೆಬ್ ಮಲಿಕ್‌ಗೆ ಜೊತೆಯಾದ ಆಸಿಫ್ ಅಲಿ ನ್ಯೂಜಿಲೆಂಡ್ ಬೌಲರ್‌ಗಳನ್ನು ಹಿನ್ನೆಟ್ಟಿಸಿದರು. ಶೋಯೆನ್ ಮಲಿಕ್ ಎಚ್ಚರಿಕೆಯ ಆಟವಾಡುತ್ತಿದ್ದರೆ ಆಸಿಫ್ ಆರ್ಭಟಿಸಲು ಆರಂಭಿಸಿದರು. 12 ಎಸೆತಗಳಲ್ಲಿ 27 ರನ್‌ ಸಿಡಿಸಿದ ಆಸಿಫ್ ಪಾಕಿಸ್ತಾನಕ್ಕೆ ಗೆಲುವು ಖಚಿತ ಪಡಿಸಿದರು. ಅಂತಿಮವಾಗಿ ಪಾಕಿಸ್ತಾನ ಇನ್ನೂ 8 ಎಸೆತಗಳು ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿದೆ. ಅನುಭವಿ ಶೋಯೆಬ್ ಮಲಿಕ್ 26 ರನ್‌ಗಳಿಸಿ ಅಜೇಯವಾಗುಳಿದರು.

ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ಹಾರಿಸ್ ರೌಫ್, ಶಾಹೀನ್ ಅಫ್ರಿದಿ
ಬೆಂಚ್: ಹೈದರ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಸರ್ಫರಾಜ್ ಅಹ್ಮದ್

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್, ಆಡಮ್ ಮಿಲ್ನೆ

Story first published: Wednesday, October 27, 2021, 9:58 [IST]
Other articles published on Oct 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+