Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್: ಅಫ್ಘಾನಿಸ್ತಾನ vs ನಮೀಬಿಯಾ ಸಂಭಾವ್ಯ ಆಡುವ ಬಳಗ, ಪಿಚ್ ವರದಿ, ನೇರಪ್ರಸಾರ

T20 World Cup 2021: Afghanistan vs Namibia Pitch report, probable playing XI and live streaming details

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯವೊಂದರಲ್ಲಿ ಇಂದು ( ಅಕ್ಟೋಬರ್ 31 ) ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳು ಸೆಣಸಾಟ ನಡೆಸಲಿವೆ. ಗ್ರೂಪ್ 2ರ ತಂಡಗಳಾಗಿರುವ ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 27ನೇ ಪಂದ್ಯವಾಗಿದೆ. ಈ ಪಂದ್ಯವು ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನ 1 ಪಂದ್ಯದಲ್ಲಿ ಗೆದ್ದಿದ್ದು ಮತ್ತೊಂದು ಪಂದ್ಯದಲ್ಲಿ ಸೋಲನುಭವಿಸಿ 2 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ನಮೀಬಿಯಾ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ 1 ಪಂದ್ಯವನ್ನಾಡಿ ಗೆದ್ದಿದ್ದು 2 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ. ಹೀಗೆ ಗೆಲುವಿನಲ್ಲಿ ಸಮಬಲವನ್ನು ಸಾಧಿಸಿರುವ ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವಿನ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ.

ಇನ್ನು ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಯಾವುದೇ ಪಂದ್ಯದಲ್ಲಿ ಕೂಡ ಮುಖಾಮುಖಿಯಾಗಿಲ್ಲ.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯವನ್ನು ಸ್ಕಾಟ್ಲೆಂಡ್ ವಿರುದ್ಧ ಆಡಿದ ನಮೀಬಿಯಾ 4 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಅತ್ತ ಅಫ್ಘಾನಿಸ್ತಾನ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಅಮೋಘ ಜಯವನ್ನು ಸಾಧಿಸಿತ್ತು ಹಾಗೂ ತನ್ನ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಿದ ಆಫ್ಘಾನಿಸ್ತಾನ ಸೋಲು ಕಂಡಿತ್ತು.

ಸಂಭಾವ್ಯ ಆಡುವ ಬಳಗಗಳು:

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್: ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ಅಸ್ಗರ್ ಅಫ್ಘಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಂ ಜನತ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್

ನಮೀಬಿಯಾ ಪ್ಲೇಯಿಂಗ್ ಇಲೆವೆನ್: ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಜೇನ್ ಗ್ರೀನ್ (ವಿಕೆಟ್ ಕೀಪರ್), ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಲ್ಲಿ ನೇರ ಪ್ರಸಾರ ಮಾಡುತ್ತಿದೆ. ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಈ ಪಂದ್ಯಕ್ಕೆ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತಿದೆ.

ಪಿಚ್ ವರದಿ:

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ಭಾನುವಾರ ಐಸಿಸಿ ಟಿ20 ವಿಶ್ವಕಪ್ 2021ರ 27 ನೇ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಪಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ನೀಡುತ್ತದೆ. ಮುಜೀಬ್ ಉರ್ ರೆಹಮಾನ್, ಎಂ ನಬಿ ಮತ್ತು ರಶೀದ್ ಖಾನ್ ಅವರಂತಹವರಿಗೆ ಈ ಪಿಚ್ ಹೆಚ್ಚು ಸಹಕಾರಿಯಾಗಲಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಸರಾಸರಿ 143 ರನ್ ಗಳಿಸಬಹುದು ಮತ್ತು ದ್ವಿತೀಯ ಇನ್ನಿಂಗ್ಸ್ ಆಡುವ ತಂಡ ಸರಾಸರಿ 122 ರನ್ ಕಲೆಹಾಕಬಹುದು.

Story first published: Sunday, October 31, 2021, 13:23 [IST]
Other articles published on Oct 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+