For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2021: ವಾರ್ನರ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದರ ಕುರಿತು ತುಟಿಬಿಚ್ಚಿದ ಇರ್ಫಾನ್ ಪಠಾಣ್

T20 World Cup 2021: David Warner is the right choice for player of the tournament says Irfan Pathan

ಸುಮಾರು 5 ವರ್ಷಗಳ ಅಂತರದ ನಂತರ ಮರಳಿ ಬಂದಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಧಿಕೃತವಾಗಿ ತೆರೆಬಿದ್ದಿದೆ. ಹೌದು, ಅಕ್ಟೋಬರ್ 17ರಂದು ಆರಂಭವಾಗಿದ್ದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ನವೆಂಬರ್‌ 14ರಂದು ನಡೆದ ಫೈನಲ್ ಪಂದ್ಯದ ಮೂಲಕ ಕೊನೆಗೊಂಡಿದೆ. ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‍ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಹೌದು, ದುಬೈ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಇನ್ನು ನ್ಯೂಜಿಲೆಂಡ್ ತಂಡ ನೀಡಿದ 173 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 53 ರನ್ ಬಾರಿಸುವುದರ ಮೂಲಕ ಮತ್ತೊಮ್ಮೆ ಟೂರ್ನಿಯಲ್ಲಿ ಮಿಂಚು ಹರಿಸಿದರು. ನಂತರ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಭರ್ಜರಿ ಅಜೇಯ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ 18.5 ಓವರ್‌ಗಳಲ್ಲಿಯೇ ಗೆಲುವಿನ ಕೇಕೆ ಹಾಕಿತು. ಇನ್ನು ಈ ಪಂದ್ಯದಲ್ಲಿ ಅಬ್ಬರಿಸಿದ ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಡೇವಿಡ್ ವಾರ್ನರ್ ಸರಣಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಡೇವಿಡ್ ವಾರ್ನರ್ ಅವರು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 289 ರನ್ ಬಾರಿಸಿದ್ದಾರೆ. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಡೇವಿಡ್ ವಾರ್ನರ್ ಅವರಿಗೆ ಐಸಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದರ ಕುರಿತು ಇತ್ತೀಚಿಗಷ್ಟೆ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲಿಯೂ ಡೇವಿಡ್ ವಾರ್ನರ್ ಅವರಿಗಿಂತ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಉತ್ತಮ ಆಟವನ್ನಾಡಿದ್ದಾರೆ, ಹೀಗಾಗಿ ಸರಣಿಶ್ರೇಷ್ಠ ಪ್ರಶಸ್ತಿ ಬಾಬರ್ ಅಜಮ್ ಅವರಿಗೆ ಲಭಿಸಬೇಕಿತ್ತು ಎಂದು ಹಲವರು ವಾದಿಸಿದ್ದರು.

ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಮುಗಿದ ನಂತರ ಡೇವಿಡ್ ವಾರ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿದ್ದು ಭಾರಿ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ವಿಷಯದ ಕುರಿತಾಗಿ ಟ್ವೀಟ್ ಒಂದನ್ನು ಮಾಡಿ ಡೇವಿಡ್ ವಾರ್ನರ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡುವುದೇ ಬೇರೆ, ಆಟಗಾರ ತನ್ನ ತಂಡಕ್ಕೊಸ್ಕರ ಅತ್ಯುತ್ತಮ ಪ್ರದರ್ಶನ ನೀಡುವುದೇ ಬೇರೆ. ಎರಡನ್ನೂ ಬೆರೆಸುವ ಕೆಲಸ ಮಾಡಬೇಡಿ. ಆಟಗಾರನೋರ್ವನಿಗೆ ತನ್ನ ತಂಡವೇ ಯಾವಾಗಲೂ ಮೊದಲನೇ ಆದ್ಯತೆಯಾಗಿರುತ್ತದೆ" ಎಂದು ಟ್ವೀಟ್ ಮಾಡುವ ಮೂಲಕ ಇರ್ಫಾನ್ ಪಠಾಣ್ ಡೇವಿಡ್ ವಾರ್ನರ್ ಅವರು ತಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಬೆಂಬಲಿಸಿದ್ದಾರೆ.

ಐಸಿಸಿ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ. ಇದರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವ ಡೇವಿಡ್ ವಾರ್ನರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ (289 ರನ್), ಜೋಸ್ ಬಟ್ಲರ್ ( ವಿಕೆಟ್ ಕೀಪರ್‌) - ಇಂಗ್ಲೆಂಡ್ (269 ರನ್), ಬಾಬರ್ ಅಜಮ್ ( ನಾಯಕ ) - ಪಾಕಿಸ್ತಾನ (303 ರನ್), ಚರಿತ ಅಸಲಂಕಾ -ಶ್ರೀಲಂಕಾ ( 231 ರನ್ ), ಏಡನ್ ಮಾರ್ಕ್ರಮ್ - ದಕ್ಷಿಣ ಆಫ್ರಿಕಾ ( 162 ರನ್ ), ಮೊಯಿನ್ ಅಲಿ - ಇಂಗ್ಲೆಂಡ್ ( 92 ರನ್‌ ಮತ್ತು 7 ವಿಕೆಟ್), ವನಿಂದು ಹಸರಂಗ - ಶ್ರೀಲಂಕಾ ( 16 ವಿಕೆಟ್ ), ಆ್ಯಡಮ್ ಜಂಪಾ - ಆಸ್ಟ್ರೇಲಿಯಾ ( 13 ವಿಕೆಟ್ ), ಜೋಶ್ ಹೇಜಲ್ ವುಡ್ - ಆಸ್ಟ್ರೇಲಿಯಾ ( 11 ವಿಕೆಟ್‌ ), ಟ್ರೆಂಟ್ ಬೌಲ್ಟ್ - ನ್ಯೂಜಿಲೆಂಡ್‌ ( 13 ವಿಕೆಟ್ ), ಅನ್ರಿಚ್ ನಾರ್ಕಿಯಾ - ದಕ್ಷಿಣ ಆಫ್ರಿಕಾ ( 9 ವಿಕೆಟ್)

Story first published: Monday, November 15, 2021, 18:02 [IST]
Other articles published on Nov 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+