T20 World Cup 2021: ಅಭ್ಯಾಸ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ಕೊನೇ ಕ್ಷಣದತ್ತ ಬರುತ್ತಿದೆ. ಅಕ್ಟೋಬರ್ 15ರಂದು ಫೈನಲ್‌ನೊಂದಿಗೆ ಐಪಿಎಲ್ 14ನೇ ಆವೃತ್ತಿ ಕೊನೆಗೊಳ್ಳಲಿದೆ. ಐಪಿಎಲ್ ಮುಗಿದು ಎರಡೇ ದಿನದಲ್ಲಿ ಅಂದರೆ ಅಕ್ಟೋಬರ್ 17ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ.
ಅಕ್ಟೋಬರ್ 17ಕ್ಕೆ ಆರಂಭಗೊಳ್ಳುವ ಟಿ20 ವಿಶ್ವಕಪ್ ಟೂರ್ನಿ ನವೆಂಬರ್ 14ರಂದು ಕೊನೆಗೊಳ್ಳಲಿದೆ. ಹೆಚ್ಚಿನ ತಂಡಗಳಿಗೆ ಸ್ಪರ್ಧೆಗಳು ನಡೆಯುವುದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಭಾರತಕ್ಕೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯುವುದರಲ್ಲಿದೆ.
ಅಕ್ಟೋಬರ್ 18ರಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ. ಅಕ್ಟೋಬರ್ 20ರಂದು ಮತ್ತೆ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಅಭ್ಯಾಸ ಪಂದ್ಯಗಳು ನಡೆಯಲಿವೆ. ಟೂರ್ನಿಯ ಆರಂಭಿಕ ಪಂದ್ಯವಾಗಿ ಭಾರತ ತಂಡ ಪಾಕಿಸ್ತಾನದ ಸವಾಲು ಸ್ವೀಕರಿಸಲಿದೆ. ಅಕ್ಟೋಬರ್ 24ಕ್ಕೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ.
ಅಸಲಿ ಪಂದ್ಯಗಳಿಗೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
* ಅಕ್ಟೋಬರ್ 18ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು
- ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (3.30 pm)
- ಪಾಕಿಸ್ತಾನ vs ವೆಸ್ಟ್ ಇಂಡೀಸ್ (3.30 pm)
- ಆಸ್ಟ್ರೇಲಿಯಾ vs ನ್ಯೂಜಿಲೆಂಡ್ (7.30 pm)
- ಭಾರತ vs ಇಂಗ್ಲೆಂಡ್ (7.30 pm)
* ಅಕ್ಟೋಬರ್ 20ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು
- ಇಂಗ್ಲೆಂಡ್ vs ನ್ಯೂಜಿಲೆಂಡ್ (3.30 pm)
- ಭಾರತ vs ಆಸ್ಟ್ರೇಲಿಯಾ (3.30 pm)
- ದಕ್ಷಿಣ ಆಫ್ರಿಕಾ vs ಪಾಕಿಸ್ತಾನ (7.30 pm)
- ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ (7.30 pm)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications