For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ vs ಅಫ್ಘಾನಿಸ್ತಾನ, ಪಿಚ್ ರಿಪೋರ್ಟ್, ಹವಾಮಾನ ವರದಿ

T20 World Cup 2021: India vs Afghanistan Preview, Abu Dhabi Pitch Report and Weather Forecast

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಇಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಬುದಾಭಿಯ ಶೇಕ್ ಜಾಯೇಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಅದರಲ್ಲೀ ಭಾರತ ಸೆಮಿಫೈನಲ್ ಹಂತಕ್ಕೇರಲು ಈ ಪಂದ್ಯದ ಜೊತೆಗೆ ಮುಂದಿನ ಎರಡು ಪಂದ್ಯಗಳನ್ನು ಕೂಡ ಗೆಲ್ಲೇಬೇಕಾದ ಅನಿವಾರ್ಯತೆಯಿದೆ. ಅಷ್ಟಾದರೂ ಭಾರತ ತಂಡಕ್ಕೆ ಇತರ ತಂಡಗಳ ಫಲಿತಾಂಶದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ಮತ್ತೊಂದೆಡೆ ಅಫ್ಘಾನಿಸ್ತಾನ ಕೂಡ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಭಾರತದ ವಿರುದ್ಧ ಗೆದ್ದು ನಾವು ಸೆಮಿಫಯನಲ್ ಹಾದಿಯನ್ನು ಸರಾಗಗೊಳಿಸಲಿದ್ದೇವೆ ಎಂಬ ಮಾತನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ನಸೀಬ್ ಖಾನ್ ಹೇಳಿದ್ದಾರೆ.

ಭಾರತ ತನ್ನ ಮೊದಲ ಎರಡು ಪಂದ್ಯಗಳನ್ನು ಕೂಡ ದುಬೈ ಕ್ರೀಡಾಂಗಣದಲ್ಲಿ ಆಡಿತ್ತು. ಇದೀಗ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತನ್ನ ಪಂದ್ಯದ ತಾಣವನ್ನು ಬದಲಾಯಿಸಿಕೊಂಡಿದೆ. ಅಬಿದಾಬಿಯ ಶೇಕ್ ಆಜಯೇದ್ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಿದೆ.

ಅಬುದಾಬಿ ಪಿಚ್‌ ರಿಪೋರ್ಟ್: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಯುಎಇಯ ಎಲ್ಲಾ ಮೈದಾನದ ಪಿಚ್‌ಗಳು ಬೌಲರ್‌ಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದು ಅಬುದಾಬಿ ಪಿಚ್ ಕೂಡ ಇದಕ್ಕಿಂತ ಹೊರತಾಗಿಲ್ಲ. ಹಾಗಾಗಿ ಟಾಸ್ ಗೆದ್ದ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡು ರನ್ ಬೆನ್ನಟ್ಟುವ ನಿರ್ಧಾರ ತೆಗೆದುಕೊಳ್ಳಲಿದೆ. ಇಬ್ಬನಿ ಎರಡನೇ ಬ್ಯಾಟಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ನೀಡಲಿದೆ.

ಅಬುದಾಬಿ ಹವಾಮಾನ: ಅಬುದಾಬಿಯ ವಾತಾವರಣ ಎಂದಿನಂತೆಯೇ ಅಧಿಕ ಉಷ್ಣಾಂಶದಿಂದ ಕೂಡಿರಲಿದೆ. ಸುಮಾರು 32 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದ್ದು ರಾತ್ರಿಯಾಗುತ್ತಲೇ ಇಬ್ಬನಿ ಹೆಚ್ಚಾಗಿರಲಿದೆ.
ಅಬುದಾಬಿ ಟಿ20 ಅಂಕಿಅಂಶ: ಈ ಕ್ರೀಡಾಂಗಣದಲ್ಲಿ ಈವರೆಗೆ ಒಟ್ಟು 56 ಪಂದ್ಯಗಳು ನಡೆದಿದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ 24 ಬಾರಿ ಗೆಲುವು ಸಾಧಿಸಿದರೆ ರನ್ ಬೆನ್ನಟ್ಟಿದ ತಂಡ 32 ಬಾರಿ ಗೆಲುವು ಸಾಧಿಸಿದೆ.
ಇನ್ನು ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 140 ಆಗಿದ್ದರೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 128 ರನ್.
ಇನ್ನು ಅಬುದಾಬಿಯ ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ತಂಡವೊಂದು ಗಳಿಸಿದ ಅತಿ ಹೆಚ್ಚಿನ ಸ್ಕೋರ್ ಎಂದರೆ ಅದು 225/7. ಅಫ್ಘಾನಿಸ್ತಾನದ ವಿರುದ್ಧ ಐರ್ಲೆಂಡ್ ಈ ಬೃಹತ್ ಸ್ಕೋರ್ ದಾಖಲಸಿದೆ. ಈ ಮೈದಾನದಲ್ಲಿ ದಾಖಲಾದ ಕನಿಷ್ಠ ಸ್ಕೋರ್ ಹಾಂಕ್‌ಕಾಂಗ್ ಹೆಸರಿಸನಲ್ಲಿದ್ದು ಒಮಾನ್ ತಂಡದ ವಿರುದ್ಧ 87 ರನ್‌ಗೆ ಆಲೌಟ್ ಆಗಿತ್ತು.

ಇನ್ನು ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಬೆನ್ನಟ್ಟಿದ ದಾಖಲೆ ನಮೀಬಿಯಾ ಹೆಸರಿನಲ್ಲಿದ್ದು ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಇಲ್ಲಿ 166/4 ರನ್‌ಗಳನ್ನು ಬೆನ್ನಟ್ಟಿತ್ತು. ಇನ್ನು ಕನಿಷ್ಠ ಮೊತ್ತವನ್ನು ರಕ್ಷಣೆ ಮಾಡಿದ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದ್ದು ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ 129 ರನ್‌ಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಭಾರತದ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಇಶಾನ್ ಕಿಶನ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಸೂರ್ಯಕುಮಾರ್ ಯಾದವ್ , ರಾಹುಲ್ ಚಹರ್

ಅಫ್ಘಾನಿಸ್ತಾನ ಸಂಪೂರ್ಣ ಸ್ಕ್ವಾಡ್: ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಂ ಜನತ್, ಹಮೀದ್ ಹಸನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಉಸ್ಮಾನ್ ಘನಿ, ಹಶ್ಮತುಲ್ಲಾ ಶಾಹಿದಿ, ಫರೀದ್ ಅಹ್ಮದ್, ಶರಫುದ್ದೀನ್ ಅಶ್ರಫ್

Story first published: Wednesday, November 3, 2021, 16:37 [IST]
Other articles published on Nov 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+