For Quick Alerts
ALLOW NOTIFICATIONS  
For Daily Alerts
 

T20 World Cup 2021: 15 ಮಂದಿಯ ತಂಡ ಪ್ರಕಟಿಸಿದ ಪಾಕಿಸ್ತಾನ

T20 World Cup 2021: Pakistan Announces Squad, Babar Azam Captain

ಕರಾಚಿ: ಮುಂಬರಲಿರುವ ಟಿ20 ವಿಶ್ವಕಪ್‌ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್‌ ತಂಡ ಪ್ರಕಟವಾಗಿದೆ. ಸೋಮವಾರ (ಸೆಪ್ಟೆಂಬರ್‌ 6) ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಂಡ ಪ್ರಕಟಿಸಿದೆ. ಪಾಕ್ ಎಂದಿನ ನಾಯಕ ಬಾಬರ್ ಅಝಾಮ್ ತಂಡ ಮುನ್ನಡೆಸಲಿದ್ದಾರೆ. ಇದೇ ತಂಡ ಮುಂಬರಲಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲೂ ಆಡಲಿದೆ.

ಬಾಬರ್ ಅಝಾಮ್‌ ಜೊತೆ ಉಪನಾಯಕರಾಗಿ ಶದಬ್ ಖಾನ್ ತಂಡದ ಜವಾಬ್ದಾರಿ ಹೊರಲಿದ್ದಾರೆ. ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಟಿ20 ವಿಶ್ವಕಪ್‌ 2021ರ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಮತ್ತು ಓಮನ್ ದೇಶಗಳಲ್ಲಿ ನಡೆಯಲಿದೆ.

ಸುದೀರ್ಘ ಸಮಯದ ಬಳಿಕ ಬದ್ಧ ಎದುರಾಳಿ ತಂಡಗಳು ಮುಖಾಮುಖಿ

ಸುದೀರ್ಘ ಸಮಯದ ಬಳಿಕ ಬದ್ಧ ಎದುರಾಳಿ ತಂಡಗಳು ಮುಖಾಮುಖಿ

ಅಕ್ಟೋಬರ್‌ 24ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್‌ನಲ್ಲಿ ಕಾದಾಡಿ ಬಹಳ ದಿನಗಳಾಗಿವೆ. 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಕಡೇಯ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಬಳಿಕ ಟಿ20 ವಿಶ್ವಕಪ್‌ನಲ್ಲೇ ಇತ್ತಂಡಗಳು ಕಾದಾಡಲಿವೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ರಾಜಕೀಯ ಅಡ್ಡಗಾಲಿನಿಂದಾಗಿ ಪಂದ್ಯಗಳು ನಡೆಯುತ್ತಿಲ್ಲ. ಆದರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೂರ್ನಿಗಳಿದ್ದಾಗ ಇತ್ತಂಡಗಳು ಅನಿವಾರ್ಯವಾಗಿ ಮುಖಾಮುಖಿಯಾಗುತ್ತಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಭಾರತ-ಪಾಕ್ ಮಧ್ಯೆ ಒಟ್ಟು 8 ಟಿ20ಐ ಪಂದ್ಯಗಳು ನಡೆದಿದ್ದು ಇದರಲ್ಲಿ 6 ಪಂದ್ಯ ಭಾರತ ಗೆದ್ದಿದೆ, 1 ಪಂದ್ಯದಲ್ಲಿ ಪಾಕ್ ಗೆದ್ದಿದೆ, 1 ಪಂದ್ಯ ಡ್ರಾ ಆಗಿದೆ.

ಭಾರತ vs ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್‌ ಪಂದ್ಯದ ಬಳಿಕ ಭಾರತ ತಂಡ ಪ್ರಕಟ

ಭಾರತ vs ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್‌ ಪಂದ್ಯದ ಬಳಿಕ ಭಾರತ ತಂಡ ಪ್ರಕಟ

ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಯ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಮೂಲವೊಂದು ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಬಳಿಕ ತಂಡ ಆರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. "ಮುಂದಿನ ಸೋಮವಾರ ಅಥವಾ ಮಂಗಳವಾರ ಟಿ20 ವಿಶ್ವಕಪ್‌ ಭಾರತ ತಂಡ ಪ್ರಕಟಿಸಲು ನಾವು ಎದುರು ನೋಡುತ್ತಿದ್ದೇವೆ. ಆದರೆ ದಿನಾಂಕ ಇನ್ನೂ ಖಾತರಿಯಾಗಿಲ್ಲ. ಆದರೆ ಮುಂದಿನ ಶುಕ್ರವಾರದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಸೆಪ್ಟೆಂಬರ್‌ 10 ತಂಡಗಳನ್ನು ಪ್ರಕಟಿಸಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮ ದಿನವೆಂದು ಘೋಷಿಸಿದೆ," ಎಂದು ಮೂಲ ತಿಳಿಸಿದೆ. ಜಾಗತಿಕ ಮಟ್ಟದ ಕುತೂಹಲಕಾರಿ ಟೂರ್ನಿ ಟಿ20 ವಿಶ್ವಕಪ್‌ಗಾಗಿ ಸದ್ಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಮ್ಮ ತಂಡ ಪ್ರಕಟಿಸಿವೆ. ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಕೊನೇ ಹಂತದಲ್ಲಿದ್ದು, ಈ ಪಂದ್ಯದ ಬಳಿಕ ಭಾರತೀಯ ವಿಶ್ವಕಪ್‌ ತಂಡ ಪ್ರಕಟವಾಗಲಿದೆ.

ಟಿ20 ವಿಶ್ವಕಪ್‌ ಗ್ರೂಪ್‌ ವಿಭಾಗಗಳ ಪ್ರಮುಖ ಮಾಹಿತಿ

ಟಿ20 ವಿಶ್ವಕಪ್‌ ಗ್ರೂಪ್‌ ವಿಭಾಗಗಳ ಪ್ರಮುಖ ಮಾಹಿತಿ

ಅಕ್ಟೋಬರ್‌ 17ರಂದು ಗ್ರೂಪ್‌ 'ಬಿ'ಯ ರೌಂಡ್‌ 1ರಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ಗ್ರೂಪ್‌ ಬಿಯಲ್ಲಿರುವ ಇನ್ನುಳಿದ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ಸಂಜೆ ಕಾದಾಡಲಿವೆ. ಗ್ರೂಪ್‌ 'ಎ'ಯಲ್ಲಿರುವ ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಂದಿನ ದಿನ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿವೆ. ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಎರಡು ಕ್ವಾಲಿಫೈಯರ್ (A1, B2) ತಂಡಗಳಿದ್ದರೆ, ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಎರಡು ಕ್ವಾಲಿಫೈಯರ್ ತಂಡಗಳು (A2, B1) ತಂಡಗಳು ಇವೆ. ಫೈನಲ್‌ ಪಂದ್ಯ ನವೆಂಬರ್‌ 14ರಂದು ದುಬೈನಲ್ಲಿ ನಡೆಯಲಿದೆ.

ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಟಿ20 ವಿಶ್ವಕಪ್‌ಗಾಗಿ ಪಾಕ್ ತಂಡ

ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಟಿ20 ವಿಶ್ವಕಪ್‌ಗಾಗಿ ಪಾಕ್ ತಂಡ

ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಟಿ20ಐ ಸರಣಿ ಆಡಲಿದೆ. ಪಾಕಿಸ್ತಾನಕ್ಕೆ ಪ್ರವಾಸ ಬರಲಿರುವ ನ್ಯೂಜಿಲೆಂಡ್ ತಂಡ ಅಲ್ಲಿ ಪಾಕ್ ವಿರುದ್ಧ ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 3ರ ವರೆಗೆ ಐದು ಟಿ20ಐ ಪಂದ್ಯ ಆಡಲಿದೆ. ಅದಾದ ಬಳಿಕ ಅಕ್ಟೋಬರ್‌ 13 ಮತ್ತು 14ರಂದು ಪಾಕ್ ಮತ್ತು ಇಂಗ್ಲೆಂಡ್ ಮಧ್ಯೆ ಎರಡು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ.
ಪಾಕಿಸ್ತಾನ 15 ಜನರ ತಂಡ: ಬಾಬರ್ ಅಝಾಮ್ (ಸಿ), ಮೊಹ್ಮದ್ ರಿಜ್ವಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಸೊಹೈಬ್ ಮಕ್ಸೂದ್, ಅಝಾಮ್ ಖಾನ್, ಇಮಾದ್ ವಾಸಿಮ್, ಮೊಹಮದ್ ನವಾಜ್, ಮೊಹಮ್ಮದ್ ವಾಸಿಂ, ಶಹಾದಬ್ ಖಾನ್, ಹಸನ್ ಅಲಿ, ಹ್ಯಾರಿಸ್ ರೌಫ್, ಮೊಹಮದ್ ಹಸ್ನೈನ್, ಶಾಹೀನ್ ಅಫ್ರಿದಿ.
ಮೀಸಲು ಆಟಗಾರರು: ಫಖರ್ ಜಮಾನ್, ಉಸ್ಮಾನ್ ಖಾದಿರ್, ಶಹನವಾಜ್ ಧನಿ.

ಭಾರತ ಮತ್ತು ಪಾಕಿಸ್ತಾನ ಕೊನೇಯ ಬಾರಿ ಮುಖಾಮುಖಿಯಾಗಿದ್ದು
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದು 2016ರರಲ್ಲಿ ನಡೆದ ವಿಶ್ವಕಪ್‌ನಲ್ಲಿ. ಅಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 10 ಹಂತದಲ್ಲಿ ಮುಖಾಮುಖಿಯಾಗಿದ್ದವು. ಮಳೆಯಿಂದಾಗಿ 18 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 118 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಪಾಕಿಸ್ತಾನದ ಪರವಾಗಿ ಅಂದು ಯಾವ ಬ್ಯಾಟ್ಸ್‌ಮನ್‌ ಕೂಡ 30ರ ಗಡಿಯನ್ನು ಕೂಡ ದಾಟಿರಲಿಲ್ಲ. 26 ರನ್‌ಗಳಿಸಿದ್ದ ಶೋಯೆಬ್ ಮಲಿಕ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು. ಪಾಕಿಸ್ತಾನ ನೀಡಿದ ಈ ಗುರಿಯನ್ನು ಭಾರತ ಇನ್ನೂ 13 ಎಸೆತಗಳು ಬಾಕಿಯಿರುವಂತೆ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆದ್ದು ಬೀಗಿತ್ತು. ಭಾರತದ ಪರವಾಗಿ ವಿರಾಟ್ ಕೊಹ್ಲಿ 55 ರನ್ ಬಾರಿಸಿ ಮಿಂಚಿದ್ದರು. ಅದಾದ ಬಳಿಕ ಮತ್ತೆ ಈ ಬಾರಿಯ ಟಿ20 ವಿಶ್ವಕಪ್‌ ವೇಳೆ ಭಾರತ-ಪಾಕ್ ಕಾದಾಡಲು ಸಜ್ಜಾಗಿವೆ.

ಕೊಹ್ಲಿಯ ಈ ನಿರ್ಧಾರದಿಂದ 4ನೇ ಟೆಸ್ಟ್ ನಲ್ಲಿ ಭಾರತ ಸೋಲೋದು ಗ್ಯಾರೆಂಟಿ | Oneindia Kannada

Story first published: Monday, September 6, 2021, 14:28 [IST]
Other articles published on Sep 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+