ಟಿ20 ವಿಶ್ವಕಪ್: ಪಾಕ್ vs ನಮೀಬಿಯಾ ಸಂಭಾವ್ಯ ಆಡುವ ಬಳಗ, ಪಿಚ್ ರಿಪೋರ್ಟ್, ನೇರಪ್ರಸಾರದ ಮಾಹಿತಿ

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 31ನೇ ಪಂದ್ಯ ಇಂದು ( ನವೆಂಬರ್ 2 ) ಬಲಿಷ್ಠ ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯವು ಅಬುಧಾಬಿಯ ಶೈಖ್ ಝಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ.
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಈ ಗುಂಪಿನ ಅಂಕ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆದುಕೊಂಡಿದ್ದರೆ, ನಮೀಬಿಯಾ ತಂಡ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಮೂರರಲ್ಲಿಯೂ ಜಯಗಳಿಸುವುದರ ಮೂಲಕ 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ನಮೀಬಿಯಾ ಪ್ರಸ್ತುತ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿ 1 ಪಂದ್ಯದಲ್ಲಿ ಗೆದ್ದು, ಮತ್ತೊಂದರಲ್ಲಿ ಸೋಲುವುದರ ಮೂಲಕ 2 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ಗ್ರೂಪ್ 1 ತಂಡಗಳಾದ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಅಮೋಘ ಜಯವನ್ನು ಸಾಧಿಸುವುದರ ಮೂಲಕ 8 ಅಂಕಗಳನ್ನು ಪಡೆದುಕೊಂಡು ಸೆಮಿಫೈನಲ್ ಪ್ರವೇಶವನ್ನು ಮಾಡಿತು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಅಧಿಕೃತವಾಗಿ ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಂಡ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡರೆ, ಇಂದು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶಿಸಲಿರುವ ಎರಡನೇ ತಂಡ ಪಾಕಿಸ್ತಾನವಾಗಲಿದೆ. ಹಾಗೆ ನೋಡಿದರೆ ಭಾರತ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನಗಳಂತಹ ತಂಡಗಳಿಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿರುವ ಪಾಕಿಸ್ತಾನ ತಂಡಕ್ಕೆ ನಮೀಬಿಯಾ ತಂಡವನ್ನು ಸೋಲಿಸುವುದೇನು ತೀರಾ ಕಷ್ಟದ ಕೆಲಸವಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಪಾಕಿಸ್ತಾನ ಜಯ ಗಳಿಸಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡುವುದು ಬಹುತೇಕ ಖಚಿತ ಎನ್ನಬಹುದು.
ಇನ್ನು ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳು ಇದುವರೆಗೂ ಯಾವುದೇ ರೀತಿಯ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯದಲ್ಲಿಯೂ ಕೂಡ ಮುಖಾಮುಖಿಯಾಗಿಲ್ಲ. ಹೀಗಾಗಿ ಇಂದು ಇತ್ತಂಡಗಳ ನಡುವೆ ನಡೆಯಲಿರುವ ಪಂದ್ಯವೇ ಮೊದಲ ಮುಖಾಮುಖಿಯಾಗಲಿದೆ.
ಪಂದ್ಯದ ವಿವರ: ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಲಿರುವ ಇಂದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಈ ಪಂದ್ಯ ಅಬುಧಾಬಿಯ ಶೈಖ್ ಝಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಿಚ್ ವರದಿ: ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ಮಂಗಳವಾರ (ನವೆಂಬರ್ 2) ಐಸಿಸಿ ಟಿ20 ವಿಶ್ವಕಪ್ 2021ರ 31 ನೇ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಪಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ನೀಡುತ್ತದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಸರಾಸರಿ 143 ರನ್ ಗಳಿಸಬಹುದು ಮತ್ತು ದ್ವಿತೀಯ ಇನ್ನಿಂಗ್ಸ್ ಆಡುವ ತಂಡ ಸರಾಸರಿ 122 ರನ್ ಕಲೆಹಾಕಬಹುದು.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ನೇರ ಪ್ರಸಾರ ಮಾಡುತ್ತಿದೆ. ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಈ ಪಂದ್ಯಕ್ಕೆ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತಿದೆ.
ಸಂಭಾವ್ಯ ತಂಡಗಳು:
ಪಾಕಿಸ್ತಾನ ಸಂಭಾವ್ಯ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ ಮತ್ತು ಹಾರಿಸ್ ರೌಫ್
ನಮೀಬಿಯಾ ಸಂಭಾವ್ಯ ತಂಡ: ಸ್ಟೀಫನ್ ಬಾರ್ಡ್, ಝೇನ್ ಗ್ರೀನ್ (ವಿಕೆಟ್ ಕೀಪರ್), ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಜೆಜೆ ಸ್ಮಿಟ್, ಮೈಕೆಲ್ ವ್ಯಾನ್ ಲಿಂಗೆನ್, ಜಾನ್ ಫ್ರಿಲಿಂಕ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications