ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವ ಬಿಸಿಸಿಐ ಆಸೆಗೆ ದೊಡ್ಡ ಹಿನ್ನಡೆ!

ನವದೆಹಲಿ: ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯುವ ಸಾಧ್ಯತೆ ತೀರಾ ಕಡಿಮೆ. ಭಾರತದಲ್ಲಿ ಸದ್ಯ ಕೋವಿಡ್-19 ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ 16 ತಂಡಗಳ ಕ್ರಿಕೆಟ್ ಟೂರ್ನಿ ಭಾರತಕ್ಕೆ ಬದಲು ವಿದೇಶದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ)ಗೆ ಈ ಬಗ್ಗೆ ಮಾಹಿತಿ ನೀಡಿದೆ.
ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬದಲು ವಿದೇಶದಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಐಸಿಸಿಗೆ ತಿಳಿಸಿದೆ. ಅಧಿಕೃತ ಘೋಷಣೆ ಆಗಿಲ್ಲ. ಆದರೆ ವಿದೇಶದಲ್ಲಿ ಟಿ20 ವಿಶ್ವಕಪ್ ನಡೆಸಲು ತಯಾರಿ ನಡೆಸುವಂತೆ ಐಸಿಸಿಗೆ ಬಿಸಿಸಿಐ ಈಗಾಗಲೇ ತಿಳಿಸಿದೆ ಎಂದು ತಿಳಿದು ಬಂದಿದೆ.

ಯಾವಾಗ ಟಿ20 ವಿಶ್ವಕಪ್ ಆರಂಭ?
ಟಿ20 ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಭಾರತಕ್ಕೆ ಬದಲು ವಿದೇಶದಲ್ಲಿ ನಡೆಸಲು ಐಸಿಸಿ ಮತ್ತು ಬಿಸಿಸಿಐ ಸಿದ್ಧತೆಗಳನ್ನು ನಡೆಸುತ್ತಿದೆ. ಟೂರ್ನಿ ಎಂದಿನಂತೆ ಅಕ್ಟೋಬರ್‌ನಲ್ಲಿ ಆರಂಭಗೊಂಡು ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ.

ಎಲ್ಲಿ ನಡೆಯಲಿದೆ ಟಿ20 ವಿಶ್ವಕಪ್?
ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಿ ಟಿ20 ವಿಶ್ವಕಪ್ ಅನ್ನು ಯಶಸ್ವಿಯಾಗಿ ನಡೆಸಲು ಯುನೈಟೆಡ್ ಅರಬ್ ಮತ್ತು ಓಮನ್ ಶಕ್ತವಾಗಿದೆ. ಈ ಎರಡು ತಾಣಗಳನ್ನು ಐಸಿಸಿ ಗಮನದಲ್ಲಿಟ್ಟುಕೊಂಡಿದೆ. ಅದರಲ್ಲೂ ತಟಸ್ಥ ತಾಣ ಯುಎಇಯಲ್ಲಿ ಮತ್ತು ಓಮನ್‌ನಲ್ಲಿ ಕುತೂಹಲಕಾರಿ ಟೂರ್ನಿ ನಡೆಯಲಿದೆ.

ಬಿಸಿಸಿಐ ಅಧಿಕಾರಿ ಹೇಳಿಕೆ
'ಹೌದು, ಐಸಿಸಿ ಸಭೆಯ ವೇಳೆ ಬಿಸಿಸಿಐಯು ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ನಾಲ್ಕು ವಾರಗಳ ಕಾಲಾವಕಾಶ ಕೇಳಿತ್ತು. ಆದರೆ ಟೂರ್ನಿ ಆಯೋಜನೆಯ ಹಕ್ಕನ್ನು ತಮ್ಮಲ್ಲೇ ಉಳಿಸಿಕೊಂಡು ಟೂರ್ನಿಯನ್ನು ಯುಎಇಯಲ್ಲಿ ಮತ್ತು ಓಮನ್‌ನಲ್ಲಿ ನಡೆಸಲು ಆಂತರಿಕವಾಗಿ ಬಿಸಿಸಿಐ ನಿರ್ಧರಿಸಿದೆ,' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications