T20 World Cup: ಬಾಂಗ್ಲಾ ವಿರುದ್ಧ ಭಾರತ ಗೆದ್ದ ನಂತರವೂ ಪಾಕ್‌ಗಿದೆ ಸೆಮಿಸ್ ತಲುಪುವ 2 ಅವಕಾಶ

ಬುಧವಾರ ನಡೆದ ಟಿ20 ವಿಶ್ವಕಪ್ 2022 ಗ್ರೂಪ್ 2ರ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದ್ದು, ಸೆಮಿಫೈನಲ್‌ಗೆ ಅರ್ಹತೆಯನ್ನು ಖಚಿತಪಡಿಸಿಕೊಂಡಿದೆ. ಭಾರತದ ಮುಂದಿನ ಪಂದ್ಯ ಜಿಂಬಾಬ್ವೆ ವಿರುದ್ಧ ನಡೆಯಲಿದೆ.
ಕೆಲವು ಸ್ಥಾನಪಲ್ಲಟಗಳು ಮತ್ತು ಸಂಯೋಜನೆಗಳು ಉಳಿದಿದ್ದರೂ, ರೋಹಿತ್ ಶರ್ಮಾ ನಾಯಕತ್ವದ ತಂಡ ಸೆಮಿಫೈನಲ್ ತಲುಪುದು ಖಚಿತವಾಗಿದೆ. ಏಕೆಂದರೆ, ಬಾಂಗ್ಲಾದೇಶದ ವಿರುದ್ಧದ ಗೆಲುವು ಅವರ ಆಸೆಗೆ ದೊಡ್ಡ ಉತ್ತೇಜನವನ್ನು ನೀಡಿದೆ.
ಬಾಂಗ್ಲಾದೇಶ ವಿರುದ್ಧ ಭಾರತದ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಅರ್ಹತಾ ಅವಕಾಶಗಳನ್ನು ನಿಜವಾದ ಅಪಾಯಕ್ಕೆ ಸಿಲುಕಿಸಿದೆ. ಆದರೆ, ಪಾಕಿಸ್ತಾನದ ನಿರೀಕ್ಷೆ ಇನ್ನೂ ಕೈಕೊಟ್ಟಿಲ್ಲ. ಪಂದ್ಯಾವಳಿಯಲ್ಲಿ ಬಾಬರ್ ಅಜಂ ನಾಯಕತ್ವದ ತಂಡ ಇನ್ನೂ ಎರಡು ಪಂದ್ಯಗಳನ್ನು ಆಡಲು ಬಾಕಿಯಿದೆ ಮತ್ತು ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಬಂದರೆ, ಅವರು ಅಂತಿಮ ನಾಲ್ಕರ ಘಟ್ಟಕ್ಕೆ ತಮ್ಮ ಟಿಕೆಟ್ ಅನ್ನು ಕಾಯ್ದಿರಿಸಬಹುದು.

ಭಾರತದ ವಿರುದ್ಧದ ಪಂದ್ಯವು ತುಂಬಾ ನಿಕಟವಾಗಿತ್ತು
ಹಾಗೆಯೇ, ಸದ್ಯದ ಪರಿಸ್ಥಿತಿಗೆ ಪಾಕಿಸ್ತಾನ ತಂಡವೇ ಹೊಣೆಯಾಗಬೇಕು. ಭಾರತದ ವಿರುದ್ಧದ ಪಂದ್ಯವು ತುಂಬಾ ನಿಕಟವಾಗಿತ್ತು, ಅದು ಗೆಲ್ಲಬಹುದಾದ ಪಂದ್ಯವಾಗಿತ್ತು, ಆದರೆ, ಅದೃಷ್ಟ ಸರಿಯಿಲ್ಲದ ಕಾರಣ ಅಂತಿಮವಾಗಿ ಭಾರತ ತಂಡ ಗೆಲುವಿನ ನಗೆ ಬೀರಿತು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ಮಟ್ಟದ ಸೋಲನ್ನು ಅನುಭವಿಸಿತು. ನಂತರ ಬಾಬರ್ ಅಜಂ ಅವರ ತಂಡ ತಮ್ಮ ಸೆಮಿಫೈನಲ್‌ನ ಭರವಸೆಯನ್ನು ಜೀವಂತವಾಗಿಡಲು ನೆದರ್‌ಲ್ಯಾಂಡ್ಸ್ ತಂಡವನ್ನು ಸೋಲಿಸಿದರು, ಆದರೆ ಪರಿಸ್ಥಿತಿಯು ಇದೀಗ ಇನ್ನಷ್ಟು ಚಿಂತಾಜನಕವಾಗಿದೆ.

ಸೆಮಿಫೈನಲ್ ತಲುಪಲು ಪಾಕಿಸ್ತಾನಕ್ಕಿರುವ 2 ಅವಕಾಶಗಳು
ಅವಕಾಶ 1: ಪಾಕಿಸ್ತಾನ ತಂಡವು ತನ್ನ ಮುಂದಿನ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳನ್ನು ಗೆಲ್ಲಬೇಕಾಗಿದೆ ಮತ್ತು ದಕ್ಷಿಣ ಆಫ್ರಿಕಾವು ನೆದರ್ಲ್ಯಾಂಡ್ಸ್ ವಿರುದ್ಧ ಸೋಲಬೇಕು. ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೂ ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.
ಅವಕಾಶ 2: ಪಾಕಿಸ್ತಾನ ತಂಡವು ತನ್ನ ಮುಂದಿನ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳನ್ನು ಗೆಲ್ಲಬೇಕು ಮತ್ತು ಭಾರತವು ಜಿಂಬಾಬ್ವೆ ವಿರುದ್ಧ ದೊಡ್ಡ ಅಂತರದಿಂದ ಸೋಲಬೇಕು, ಇದರಿಂದಾಗಿ ಭಾರತ ನೆಟ್ ರನ್‌ರೇಟ್ ಪಾಕಿಸ್ತಾನಕ್ಕಿಂತ ಕಡಿಮೆಯಾಗುತ್ತದೆ.
ಪ್ರಾಯೋಗಿಕವಾಗಿ ನೋಡಿದರೆ, ಮೊದಲನೆಯ ಅವಕಾಶಕ್ಕೆ ಹೋಲಿಸಿದರೆ ಎರಡನೆಯ ಸನ್ನಿವೇಶವು ನಂಬಲಾಗದಷ್ಟು ಕಡಿಮೆ ತೋರಿಕೆಯಂತೆ ಕಾಣುತ್ತದೆ. ಆದರೂ ಎರಡೂ ಸನ್ನಿವೇಶಗಳು ಪಾಕಿಸ್ತಾನಕ್ಕೆ ಸಾಧಿಸುವುದು ಅಷ್ಟು ಸುಲಭವಲ್ಲ.
ಬಾಬರ್ ಅಜಂ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಉಳಿಯುವಂತೆ ಮಾಡಲು ಮೊದಲು ಗುರುವಾರ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಅವರ ಸೆಮಿಫೈನಲ್‌ನ ಎಲ್ಲಾ ಭರವಸೆಗಳು ಕಮರಿಹೋಗಲಿವೆ.

ಪಾಕಿಸ್ತಾನ vs ದಕ್ಷಿಣ ಆಫ್ರಿಕಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಶಾನ್ ಮಸೂದ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ರಿಲೀ ರೊಸೊವ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications