Aus vs SL: ಆಸ್ಟ್ರೇಲಿಯಾ ಗೆಲುವಿಗೆ 158ರನ್ ಟಾರ್ಗೆಟ್ ನೀಡಿದ ಶ್ರೀಲಂಕಾ

ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆಸ್ಟ್ರೇಲಿಯಾಗೆ 158ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆ್ಯರೋನ್ ಫಿಂಚ್ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ರು. ಉಭಯ ತಂಡಗಳು ತಲಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದವು. ಆದ್ರೆ ಅಂದುಕೊಂಡಂತೆ ಶ್ರೀಲಂಕಾದ ಯೋಜನೆಗಳು ಆರಂಭದಲ್ಲಿ ಕೈ ಹಿಡಿಯಲಿಲ್ಲ. ಓಪನರ್ ಕುಸಾಲ್ ಮೆಂಡೀಸ್ ಕೇವಲ 5ರನ್‌ಗೆ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಘಾತದಿಂದಾಗಿ ಶ್ರೀಲಂಕಾ ಪವರ್‌ಪ್ಲೇ ಓವರ್‌ಗಳಲ್ಲಿ ಸ್ಫೋಟಕ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. 6 ಒವರ್‌ಗಳ ಪವರ್‌ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಕಲೆಹಾಕಿತು. ಪವರ್ ಪ್ಲೇ ಬಳಿಕ ಪಥುಮಾ ನಿಸ್ಸಾಂಕ ಹಾಗೂ ಧನಂಜಯ ಡಿಸಿಲ್ವಾ ರನ್‌ಗೆ ಕೊಂಚ ವೇಗ ನೀಡಿದರು. ಪರಿಣಾಮ ಶ್ರೀಲಂಕಾ 10 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 63ರನ್ ಕಲೆಹಾಕಿತು.
ಮುಂದಿನ 10 ಓವರ್‌ಗಳಲ್ಲಿ ಹೆಚ್ಚು ರನ್ ಕಲೆಹಾಕುವ ಲಂಕಾದ ಯೋಜನೆಗೆ ಆಸಿಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಉತ್ತಮವಾಗಿ ಆಡ್ತಿದ್ದ ಧನಂಜಯ ಡಿ ಸಿಲ್ವಾ 26ರನ್‌ಗಳಿಸಿ ಆಸ್ಟರ್ ಅಗರ್‌ಗೆ ವಿಕೆಟ್ ಒಪ್ಪಿಸಿದ್ರು.
ಎರಡನೇ ವಿಕೆಟ್ ಪತನದ ಬಳಿಕ ಶ್ರೀಲಂಕಾ ಸತತ ವಿಕೆಟ್ ಕಳೆದುಕೊಂಡಿತು. ತಂಡಕ್ಕೆ ಆಧಾರವಾಗಿದ್ದ ಪಥುಮ್ ನಿಸ್ಸಾಂಕಾ 40 ರನ್‌ಗಳಿಸಿದ್ದಾಗ ರನೌಟ್‌ಗೆ ಬಲಿಯಾದರು. ಹೀಗಿರುವಾಗ 15 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 106ರನ್ ಕಲೆಹಾಕಿತು. ಆದ್ರೆ ಕೊನೆಯ ಐದು ಓವರ್‌ಗಳಲ್ಲಿ ಲಂಕಾದ ಸ್ಕೋರನ್ನು 150ಗಡಿ ದಾಟಿಸಿದ ಕೀರ್ತಿ ಚರಿತ್ ಅಸಲಂಕಾಗೆ ಸಲ್ಲುತ್ತದೆ.
25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಅಜೇಯ 38 ರನ್ ಕಲೆಹಾಕಿದರು. ಕೊನೆಯಲ್ಲಿ ಕರುಣರತ್ನೆ ಅಜೇಯ 14ರನ್ ಸಿಡಿಸಿದ್ರು. ಅದ್ರಲ್ಲೂ ಆಸ್ಟ್ರೇಲಿಯಾ 23 ಹೆಚ್ಚುವರಿ ರನ್‌ಗಳನ್ನೇ ಬಿಟ್ಟುಕೊಟ್ಟ ಪರಿಣಾಮ ಅಂತಿಮವಾಗಿ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿದ್ದು, ಆಸ್ಟ್ರೇಲಿಯಾ ಗೆಲುವಿಗೆ 158 ರನ್ ಟಾರ್ಗೆಟ್ ನೀಡಿದೆ.
ಆಸ್ಟ್ರೇಲಿಯಾ ಪರ ಹೇಜಲ್‌ವುಡ್, ಪ್ಯಾಟ್ ಕಮಿನ್ಸ್, ಸ್ಟಾರ್ಕ್, ಅಗರ್, ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೋ, ಲಹಿರು ಕುಮಾರ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications