Aus vs Afg : ಗೆಲ್ಲಲೇಬೇಕಾದ ಒತ್ತಡದಲ್ಲಿ ಆಸ್ಟ್ರೇಲಿಯಾ, ರನ್ ರೇಟ್ ಕೂಡ ಮುಖ್ಯ, ಫಿಂಚ್ ಆಡುವುದು ಅನುಮಾನ

ಶುಕ್ರವಾರ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ, ಅಫ್ಘಾನಿಸ್ತಾನದ ವಿರುದ್ಧ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಬೇಕಿದೆ.
ಆಸ್ಟ್ರೇಲಿಯಾ ಇದುವರೆಗೂ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಅವರು ಸೆಮಿಫೈನಲ್ ತಲುಪಬೇಕಾದರೆ, ಅಫ್ಘಾನಿಸ್ತಾನದ ವಿರುದ್ಧ ಗೆಲ್ಲಲೇಬೇಕಿದೆ, ಗೆಲುವಿನ ಜೊತೆಯಲ್ಲಿ ರನ್ ರೇಟ್ ಕೂಡ ಆಸ್ಟ್ರೇಲಿಯಾದ ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ.
ಆಸ್ಟ್ರೇಲಿಯಾ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಉತ್ತಮ ಅರ್ಧಶತಕ ಮತ್ತು ಮಾರ್ಕಸ್ ಸ್ಟೊಯಿನಿಸ್ 20 ಎಸೆತಗಳಲ್ಲಿ 35 ರನ್ ಗಳಿಸಿದರು. ಇವರಿಬ್ಬರ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. 180 ರನ್‌ಗಳ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ನಲುಗಿತು, 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ 35 ರನ್‌ಗಳಿಂದ ಸೋಲನುಭವಿಸಿತು.
ಅಫ್ಘಾನಿಸ್ತಾನವು 2022 ರ ಟಿ20 ವಿಶ್ವಕಪ್‌ನಿಂದ ಈಗಾಗಲೇ ಹೊರಬಿದ್ದಿದೆ. ಅವರ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾದವು, ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲನುಭವಿಸುವ ಮೂಲಕ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದರು.

ಬ್ಯಾಟಿಂಗ್‌ಗೆ ಸಹಕಾರಿಯಾದ ಪಿಚ್
ಅಡಿಲೇಡ್ ಓವಲ್‌ನಲ್ಲಿನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಆಸ್ಟ್ರೇಲಿಯಾದಲ್ಲಿ ಸಣ್ಣ ಬೌಂಡರಿಗಳನ್ನು ಹೊಂದಿದೆ. ಹೆಚ್ಚಿನ ರನ್ ಗಳಿಸುವ ಅವಕಾಶವಿದೆ. ಅಡಿಲೇಡ್‌ನಲ್ಲಿ ತಾಪಮಾನವು 12 ರಿಂದ 19 ಡಿಗ್ರಿ ಸೆಲ್ಸಿಯಸ್‌ನ ಇರಲಿದ್ದು, ಪಂದ್ಯಕ್ಕೆ ಮಳೆಯ ಆತಂಕ ಎದುರಾಗಲ್ಲ ಎನ್ನಲಾಗಿದೆ.
ಕೊನೆಯ ಪಂದ್ಯದಲ್ಲಿ ಒಂದೆರಡು ಗಾಯಗಳನ್ನು ಅನುಭವಿಸಿದ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ನಾಳಿನ ಪಂದ್ಯದ ವೇಳೆಗೆ ಅವರು ಫಿಟ್ ಆಗದಿದ್ದರೆ, ಕ್ಯಾಮರೂನ್ ಗ್ರೀನ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರನ್ ಫಿಂಚ್/ಕ್ಯಾಮರೂನ್ ಗ್ರೀನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಅಫ್ಘಾನಿಸ್ತಾನ : ರಹಮಾನುಲ್ಲಾ ಗುರ್ಬಾಜ್, ಉಸ್ಮಾನ್ ಘನಿ, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್/ನವೀನ್-ಉಲ್-ಹಕ್, ಎಫ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications