ನನ್ನ ಪ್ರದರ್ಶನದ ಬಗ್ಗೆ ಚರ್ಚೆ ನಡೆಯಬಹುದು ಎಂಬ ಊಹೆಯೇ ಇರಲಿಲ್ಲ ಎಂದ ಭಾರತದ ವೇಗಿ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳಿಗೆ ಹರ್ಷವನ್ನುಂಟು ಮಾಡಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಕಾರಣ ತಂಡ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಮುಂಬರುವ ಪಂದ್ಯಗಳಲ್ಲಿಯೂ ಭಾರತ ತಂಡ ಇಂಥಾದ್ದೇ ಪ್ರದರ್ಶನ ನೀಡುತ್ತಾ ಟೂರ್ನಿಯಲ್ಲಿ ಮುನ್ನುಗ್ಗಲಿ ಎಂಬುದು ಅಭಿಮಾನಿಗಳ ಹಾರೈಕೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಭುನವೇಶ್ವರ್ ಕುಮಾರ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ವಿಶ್ವಾಸ ಮೂಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 22 ರನ್‌ಗಳನ್ನು ನೀಡಿ ಒಂದು ವಿಕೆಟ್ ಸಂಪಾದಿಸಿದರೆ ನಂತರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 9 ರನ್‌ಗಳನ್ನು ನೀಡಿ 2 ವಿಕೆಟ್ ಕಿತ್ತರು. ಇನ್ನು ಈ ಸದಂರ್ಭದಲ್ಲಿ ಭುವಿ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಸತತವಾಗಿ ಮೇಡನ್ ಓವರ್ ಎಸೆದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಜಾಲತಾಣದಿಂದ ದೂರ
ಇನ್ನು ಈ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನದ ಬಳಿಕ ಭುವನೇಶ್ವರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶ್ವಕಪ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಹೊರಗಡೆ ಚರ್ಚೆ ನಡೆದಿರಬಹುದು ಎಂಬ ಬಗ್ಗೆ ತನಗೆ ಯಾವುದೇ ಮಾಹಿತಿ ಕೂಡ ಇಲ್ಲ ಎಂದಿದ್ದಾರೆ. ಯಾಕೆಂದರೆ ತಾನು ಸಾಮಾಜಿಕ ಜಾಲತಾಣದಿಂದ ಸದ್ಯ ದೂರವಿರುವುದಾಗಿ ಭುವಿ ಹೇಳಿದ್ದಾರೆ.
ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!

ಸಾಕಷ್ಟು ಸಿದ್ಧತೆ ನಡೆಸಲಾಗಿದೆ
"ಈ ಬಗ್ಗೆ ಹೊರಗಡೆ ಏಎಲ್ಲಾ ಚರ್ಚೆಗಳಾಗಿದೆ ಎಂಬ ಬಗ್ಗೆ ನನಗೆ ಯಾವುದೇ ಸುಳಿವಿಲ್ಲ. ಯಾಕೆಂದರೆ ಸಾಮಾಜಿಕ ಜಾತತಾಣದ ಸಂಪರ್ಕದಿಂದ ದೂರವಿದ್ದೇನೆ. ಇಂಥಾ ವಿಚಾರಗಳೆಲ್ಲಾ ಅಲ್ಲಿಂದಲೇ ದೊರೆಯುತ್ತದೆ. ಆದರೆ ನಾವು ಇಲ್ಲಿಗೆ ಆಗಮಿಸುವುದಕ್ಕೆ ಮುನ್ನ ಪರ್ತ್‌ನಲ್ಲಿದ್ದಾಗಲೇ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದು ಹೊಸ ತಾಣಕ್ಕೆ ಅನುಕೂಲಕವಾಗುವಂತೆ ಅಭ್ಯಾಸ ನಡೆಸಿದ್ದೆವು" ಎಂದಿದ್ದಾರೆ ಭುವನೇಶ್ವರ್ ಕುಮಾರ್.

ಏಷ್ಯಾ ಕಪ್ ಹಿನ್ನಡೆ ಬಗ್ಗೆ ಮಾತು
ಇನ್ನು ಈ ಸಂದರ್ಭದಲ್ಲಿ ಏಷ್ಯಾ ಕಪ್‌ನಲ್ಲಿ ಅನುಭವಿಸಿದ ಹಿನ್ನಡೆ ಬಗ್ಗೆಯೂ ಭುವಿ ಮಾತನಾಡಿದ್ದಾರೆ. "ಏಷ್ಯಾ ಕಪ್‌ನಲ್ಲಿ ನಾವು ಡೆತ್ ಓವರ್‌ನ್ಲಲಿ ನಾವು ಕಳಪೆಯಾಗಿ ಬೌಲಿಂಗ್ ನಡೆಸಿದ್ದೆವು. ಅಂಥಾದ್ದು ನಡೆಯುತ್ತದೆ. ಆ ಬಗ್ಗೆ ಮಾಧ್ಯಮಗಳು ಮಾತನಾಡುತ್ತವೆ, ಕಾಮೆಂಟೇಟರ್‌ಗಳು ಅವುಗಳ ಬಗ್ಗೆ ಉಲ್ಲೇಖಿಸುತ್ತಿರುವತ್ತಾರೆ. ಆದರೆ ತಂಡವಾಗಿ ನಮಗೆ ಇಂಥಾ ವಿಚಾರಗಳಲ್ಲಿ ಮೇಲೆ ಕೆಳಗೆ ಆಗುತ್ತಿರುತ್ತದೆ ಎಂಬುದು ಗೊತ್ತಿರುತ್ತದೆ. ಆದರೆ ಅದು ಎಚ್ಚರಿಕೆಯ ಗಂಟೆಯಾಗಿರಲಿಲ್ಲ. ಟಿ20 ಮಾದರಿಯಿರುವುದೇ ಹಾಗೆ ಇಲ್ಲಿ ಬೌಲಿಂಗ್ ನಡೆಸುವುದು ಕಠಿಣ. ವಿಕೆಟ್‌ಗಳು ಸವಾಲಿನಿಂದ ಕೂಡಿದ್ದರೆ ಬ್ಯಾಟಿಂಗ್ ನಡೆಸುವುದು ಕಠಿಣವಾಗಿರುತ್ತದೆ" ಎಂದಿದ್ದಾರೆ ಭುವನೇಶ್ವರ್ ಕುಮಾರ್.

ಮುಂದಿನ ಸೆಣೆಸಾಟಕ್ಕೆ ಸಜ್ಜು
ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದು ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಬಳಿಕ ನೆದರ್ಲೆಂಡ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಇದೀಗ ಟೀಮ್ ಇಂಡಿಯಾ ಈ ವಿಶ್ವಕಪ್‌ನ ಮೂರನೇ ಕದನಕ್ಕೆ ಸಜ್ಜಾಗಿದ್ದು ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಎದುರಾಳಿಯಾಗಿದೆ. ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಎರಡು ಬಲಿಷ್ಠ ತಂಡಗಳ ನಡುವಿನ ಈ ಕದನ ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ ಈ ಪಂದ್ಯ ಟೀಮ್ ಇಂಡಿಯಾದ ಓವರ್ ಆಟಗಾರನ ಪಾಲಿಗೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಲಿದ್ದು ಈ ಪಂದ್ಯದಲ್ಲಿ ಆ ಆಟಗಾರ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications