ಕೊಹ್ಲಿ ರನ್‌ಗಳಿಸದಿದ್ದಾಗ ಜನರು ಹೀಯಾಳಿಸಿದ್ರು, ಒಮ್ಮೆ ಆತನ ರೆಕಾರ್ಡ್ ನೋಡಬಾರದಿತ್ತೇ? ಎಂದ ಬ್ರೆಟ್ ಲೀ

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ ಅನ್ನು ಮೆಚ್ಚಿ ಆಸ್ಟ್ರೇಲಿಯಾ ಮಾಜಿ ವೇಗದ ಬೌಲರ್ ಬ್ರೆಲ್ ಲೀ ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿಯನ್ನ ಈ ಹಿಂದೆಯೂ ಬೆಂಬಲಿಸಿದ್ದ ಬ್ರೆಟ್ ಲೀ ಕೊಹ್ಲಿಯ ಕಷ್ಟದ ದಿನಗಳನ್ನ ನೆನೆದಿದ್ದಾರೆ.
ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82ರನ್ ಕಲೆಹಾಕಿದ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ರು. ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಆಟಕ್ಕೆ ಇಡೀ ಕ್ರಿಕೆಟ್ ಲೋಕವೇ ದಿಗ್ಭಮೆಗೊಂಡಿದ್ದು, ಅನೇಕ ಕ್ರಿಕೆಟ್ ದಿಗ್ಗಜರು ಕೊಹ್ಲಿ ಇನ್ನಿಂಗ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಎದುರಿಸಿದ ಟೀಕೆ ಮತ್ಯಾರು ಎದುರಿಸಿರಲಿಲ್ಲ. ವಿರಾಟ್ ಕೊಹ್ಲಿಯನ್ನು ತಂಡದಿಂದ ತೆಗೆದುಹಾಕಬೇಕು ಎಂದು ಹಲವರು ಟೀಕಿಸಿದ್ರು. ವಿರಾಟ್ ಕೊಹ್ಲಿ ಶತಕ ಬಾರಿಸಿ ಎರಡೂವರೆ ವರ್ಷಗಳು ಕಳೆದು ಹೋಗಿತ್ತು. ಭಾರತದ ಲೆಜೆಂಡ್ ಕಪಿಲ್ ದೇವ್ ಕೂಡ , ನಂಬರ್ 2 ರ್ಯಾಂಕಿಂಗ್ ಬೌಲರ್ ರವಿಚಂದ್ರನ್ ಅಶ್ವಿನ್‌ರನ್ನು ಟೆಸ್ಟ್‌ನಿಂದ ಹೊರಗಿಡುವುದೇ ಆದಲ್ಲಿ, ಟಿ20 ಕ್ರಿಕೆಟ್‌ನಿಂದ ವಿರಾಟ್‌ನನ್ನು ಏಕೆ ಕೈಬಿಡಬಾರದು ಎಂದು ಪ್ರಶ್ನಿಸಿದ್ದರು. ಹೀಗಿರುವಾಗ ಆಸ್ಟ್ರೇಲಿಯಾ ಮಾಜಿ ಬೌಲರ್ ಕೊಹ್ಲಿ ಬೆಂಬಲಿಸಿ ಮಾತನಾಡಿದ್ದರು.
ವಿರಾಟ್ ಕೊಹ್ಲಿ ಕುಸಿದಿದ್ದಾಗ ಅನೇಕ ಫ್ಯಾನ್ಸ್ ವಿರಾಟ್ ಕೊಹ್ಲಿ ವಿರುದ್ಧ ಟೀಕಿಸಿದ್ರು. ಆದ್ರೆ ಒಮ್ಮೆ ಆತನ ದಾಖಲೆ ಮತ್ತು ಆತ ಟೀಂ ಇಂಡಿಯಾಗೆ ಯಾವ ಕೊಡುಗೆ ನೀಡಿದ್ದ ಎಂದು ನೋಡಿದ್ರೆ ಆ ರೀತಿಯ ಟೀಕೆ ಮಾಡುತ್ತಿರಲಿಲ್ಲ ಎಂದು ಬ್ರೆಟ್ ಲೀ ಹೇಳಿದ್ದಾರೆ.
'' ನಾನು ವಿರಾಟ್ ಕೊಹ್ಲಿಯನ್ನು ಹೀಯಾಳಿಸಿ ಮಾತನಾಡಿದ್ದನ್ನು ಕಂಡಿದ್ದೇನೆ. ವಿರಾಟ್ ಕೊಹ್ಲಿ ಮೇಲೆ ಟೀಕೆ ಮಾಡಿದ್ದವರು ಒಮ್ಮೆ ಮೂರು ಫಾರ್ಮೆಟ್‌ನಲ್ಲಿ ಆತನ ರೆಕಾರ್ಡ್ ಹಾಗೂ ಪ್ರದರ್ಶನವನ್ನು ನೋಡಬೇಕು'' ಎಂದು ಬ್ರೆಟ್ ಲೀ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
''ಕೆಲವೊಂದು ಸಂದರ್ಭದಲ್ಲಿ ನೀವು ಶತಕವನ್ನೇ ಗಳಿಸಲು ಸಾಧ್ಯವಾಗುವುದಿಲ್ಲ ಅಥವಾ ಅರ್ಧಶತಕವನ್ನ ಗಳಿಸಲು ಆಗಲ್ಲ. ವೃತ್ತಿಪರ ಕ್ರಿಕೆಟ್‌ನಲ್ಲಿ ಹೀಗಾಗುವುದು ಸಾಮಾನ್ಯ. ನಾನು ಹೇಳುವುದೊಂದೆ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಲೆಜೆಂಡ್. ಈತನಂತಹ ಆಟಗಾರರನ್ನು ಹೆಚ್ಚು ಸಮಯ ತಣ್ಣಗಾಗಿರಿಸಲು ಸಾಧ್ಯವಿಲ್ಲ'' ಎಂದು ಬ್ರೆಟ್ ಲೀ ತಮ್ಮ ಮಾತಿಗೆ ಸೇರಿಸಿದ್ದಾರೆ.
ವಿರಾಟ್ ರನ್ ಬರ ಎದುರಿಸಿದ್ದ ಸಂದರ್ಭದಲ್ಲಿ ಬೆಂಬಲಿಸಿದ್ದ ಬ್ರೆಟ್ ಲೀ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ವಿರಾಟ್ ಕೊಹ್ಲಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು. ವಿರಾಟ್ ಕೊಹ್ಲಿಗೆ ಕೇವಲ 33 ವರ್ಷ. ಈಗಾಗಲೇ ವಿರಾಟ್ ಕೊಹ್ಲಿ 70 ಶತಕಗಳನ್ನು ದಾಟಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ ನಾಲ್ಕು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ. ಹೀಗಾಗಿ ಚಿಂತೆಗೊಳಗಾಗುವ ಅವಶ್ಯಕತೆ ಇಲ್ಲ ಎಂದಿದ್ದರು.
ಜೊತೆಗೆ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ನಾವು ಇನ್ನೂ ನೋಡಿಲ್ಲ. ವಿರಾಟ್ ಕೊಹ್ಲಿ ಅವರು ಮೊದಲಿಗಿಂತ ಉತ್ತಮವಾಗಿ ಆಡುತ್ತಾರೆ ಮತ್ತು ಭವಿಷ್ಯದಲ್ಲಿ ರನ್ ಗಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದ್ರೀಗ ಬ್ರೆಟ್ ಲೀ ಹೇಳಿದ್ದು ನಿಜವಾಗಿದೆ. ಪಾಕಿಸ್ತಾನ ವಿರುದ್ಧ ಅತ್ಯಮೋಘ ಇನ್ನಿಂಗ್ಸ್ ಅನ್ನು ಕೊಹ್ಲಿ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications