For Quick Alerts
ALLOW NOTIFICATIONS  
For Daily Alerts
 

IND vs BAN: ವಿರಾಟ್ ಕೊಹ್ಲಿ ಮತ್ತೊಂದು ಅರ್ಧಶತಕ; ಆಶ್ಚರ್ಯವೇನಿಲ್ಲ ಎಂದ ರೋಹಿತ್ ಶರ್ಮಾ

T20 World Cup 2022: Captain Rohit Sharma Reacts To Virat Kohlis 64 Runs Against Bangladesh

ಬುಧವಾರ (ನವೆಂಬರ್ 2)ರಂದು ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್ 2022 ಸೂಪರ್ 12ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ 64 ರನ್ ಗಳಿಸಿ ಮಿಂಚಿದರು. ಹೀಗಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮನಸಾರೆ ಹೊಗಳಿದರು.

ಈ ಟೂರ್ನಿಯಲ್ಲಿ ಅತ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 64 ರನ್ ಗಳಿಸಿ ಭಾರತ ಪರ ಗರಿಷ್ಠ ಸ್ಕೋರ್ ಮಾಡಿದರು. ಭಾರತ ಕಠಿಣ ಹೋರಾಟದ ಥ್ರಿಲ್ಲರ್ ಪಂದ್ಯವನ್ನು ಗೆದ್ದು ಗ್ರೂಪ್ 2 ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಅವರ ಸೆಮಿಫೈನಲ್ ಭರವಸೆಯನ್ನು ಮತ್ತಷ್ಟು ಬಲಗೊಳಿಸಿತು.

ಭಾರತ ತಂಡ 2 ನಿರ್ಣಾಯಕ ಅಂಕಗಳನ್ನು ಗೆದ್ದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ ಎಂದು ಯಾವಾಗಲೂ ನಂಬಿದ್ದೇನೆ ಮತ್ತು ಅವರ ಕೆಲಸವನ್ನು ಮಾಡಲು ತಮ್ಮ ಸಹ ಆಟಗಾರನನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು. 2022ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಯ ಫಾರ್ಮ್‌ನಿಂದ ನನಗೆ ಆಶ್ಚರ್ಯವಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್

ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್

ವಿರಾಟ್ ಕೊಹ್ಲಿ ಪಂದ್ಯಾವಳಿಯಲ್ಲಿ 3ನೇ ಅರ್ಧಶತಕ ಬಾರಿಸಿದರು ಮತ್ತು 4 ಪಂದ್ಯಗಳಿಂದ 220 ರನ್ ಗಳಿಸಿದರು. ಅವರು ನೆದರ್ಲ್ಯಾಂಡ್ಸ್ ತಂಡದ ಮ್ಯಾಕ್ಸ್ ಒ'ಡೌಡ್ ಅವರ 213 ರನ್‌ಗಳ ಮೊತ್ತವನ್ನು ಹಿಂದಿಕ್ಕಿದರು. ಮಾಜಿ ನಾಯಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಅವರ ವೃತ್ತಿಜೀವನದಲ್ಲಿ ಇದು ಐತಿಹಾಸಿಕ ಪ್ರದರ್ಶನವಾಗಿದೆ.

ವಿರಾಟ್ ಕೊಹ್ಲಿಯ 64 ರನ್‌ಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್ ಗಳಿಸಿತು. ನಂತರ ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಉತ್ತಮ ಬೌಲಿಂಗ್ ಪ್ರಯತ್ನದ ಮೂಲಕ ಅಡಿಲೇಡ್‌ನಲ್ಲಿ ಮಳೆ-ಬಾಧಿತ ಪಂದ್ಯದಲ್ಲಿ ಭಾರತ 5 ರನ್‌ಗಳ ಗೆಲುವು ಸಾಧಿಸಲು ಸಹಾಯ ಮಾಡಿದರು.

ಈ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ಅದ್ಭುತವಾಗಿದೆ

ಈ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ಅದ್ಭುತವಾಗಿದೆ

"ನನ್ನ ಅಭಿಪ್ರಾಯದಲ್ಲಿ, ವಿರಾಟ್ ಕೊಹ್ಲಿ ಯಾವಾಗಲೂ ಫಾರ್ಮ್‌ನಲ್ಲಿದ್ದರು, ಇದು ಅಲ್ಲಿ ಮತ್ತು ಇಲ್ಲಿ ಕೆಲವು ಇನ್ನಿಂಗ್ಸ್‌ನ ವಿಷಯವಾಗಿದೆ. ಅವರು ಏಷ್ಯಾ ಕಪ್‌ನಲ್ಲಿ ಅತ್ಯುತ್ತಮವಾಗಿ ಆಡಿದರು. ಹೀಗಾಗಿ ನಮಗೆ ಯಾವುದೇ ಅನುಮಾನವಿರಲಿಲ್ಲ ಮತ್ತು ಈ ವಿಶ್ವಕಪ್‌ನಲ್ಲಿ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ಅದ್ಭುತವಾಗಿದೆ," ಎಂದು ರೋಹಿತ್ ಶರ್ಮಾ ಹೇಳಿದರು.

ಇನ್ನು ಉಪನಾಯಕ ಕೆಎಲ್ ರಾಹುಲ್ ಅವರ ಅರ್ಧಶತಕವು ಅವರಿಗೆ ಮತ್ತು ತಂಡಕ್ಕೆ ಪ್ರಮುಖವಾಗಿದೆ ಎಂದು ರೋಹಿತ್ ಶರ್ಮಾ ಪ್ರಶಂಸೆ ವ್ಯಕ್ತಪಡಿಸಿದರು. ಕೆಎಲ್ ರಾಹುಲ್ ಕಳಪೆ ಫಾರ್ಮ್‌ನಲ್ಲಿ ಆಡುತ್ತಿದ್ದರು ಮತ್ತು ಅವರು ಟಿ20 ವಿಶ್ವಕಪ್‌ನ ಮೊದಲ 3 ಪಂದ್ಯಗಳಲ್ಲಿ ಕೇವಲ 22 ರನ್ ಗಳಿಸಿದ ನಂತರ ತಂಡದಲ್ಲಿ ಅವರ ಸ್ಥಾನವನ್ನು ಪ್ರಶ್ನಿಸಲಾಗಿತ್ತು. ಫೀಲ್ಡಿಂಗ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ಲಿಟ್ಟನ್ ದಾಸ್ ಅವರನ್ನು ರನೌಟ್ ಬಲೆಗೆ ಬೀಳಿಸಿದರು.

ದ್ರಾವಿಡ್ ನಂಬಿಕೆಯನ್ನು ಉಳಿಸಿಕೊಂಡ ರಾಹುಲ್

ದ್ರಾವಿಡ್ ನಂಬಿಕೆಯನ್ನು ಉಳಿಸಿಕೊಂಡ ರಾಹುಲ್

ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ 31 ಎಸೆತಗಳಲ್ಲಿ 4 ಸಿಕ್ಸರ್‌ಗಳು ಸೇರಿದಂತೆ 50 ರನ್ ಗಳಿಸಿ ಟೀಕೆಗಳಿಗೆ ಬ್ಯಾಟ್‌ನಿಂದ ಉತ್ತರಿಸಿದರು ಮತ್ತು ಭಾರತಕ್ಕೆ ವಿರಾಟ್ ಕೊಹ್ಲಿಯೊಂದಿಗೆ ಭದ್ರ ಬುನಾದಿ ಹಾಕಿದರು. ಪಂದ್ಯಕ್ಕೂ ಮುನ್ನ ಮಂಗಳವಾರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ರಾಹುಲ್ ಬೆಂಬಲವನ್ನು ಪಡೆದರು ಮತ್ತು ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾದರು.

"ಇಂದು ಕೆಎಲ್ ರಾಹುಲ್ ಹೇಗೆ ಆಡಿದರು ಎಂಬುದನ್ನು ನೋಡಿದ್ದೇವೆ ಮತ್ತು ಅವರ ಆಟವನ್ನು ಇಷ್ಟಪಟ್ಟಿದ್ದೇವೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆ ತಿಳಿದಿದೆ, ಅವರು ತಮ್ಮ ಸಾಮರ್ಥ್ಯದ ರೀತಿಯಲ್ಲಿ ಬ್ಯಾಟ್ ಮಾಡಿದರೆ, ಅವರು ತಂಡವನ್ನು ಬೇರೆ ಸ್ಥಾನದಲ್ಲಿ ಇರಿಸುತ್ತಾರೆ," ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.

ಲಿಟ್ಟನ್ ದಾಸ್ ಅವರನ್ನು ರಾಹುಲ್ ರನೌಟ್ ಮಾಡಿದರು

ಲಿಟ್ಟನ್ ದಾಸ್ ಅವರನ್ನು ರಾಹುಲ್ ರನೌಟ್ ಮಾಡಿದರು

ತಸ್ಕಿನ್ ಅಹ್ಮದ್ ಮತ್ತು ನುರುಲ್ ಹಸನ್ ಕೊನೆಯಲ್ಲಿ ತಮ್ಮ ದೊಡ್ಡ ಹೊಡೆತಗಳೊಂದಿಗೆ ಆಟವನ್ನು ಕೊನೆಯ ಓವರ್‌ಗೆ ಕೊಂಡೊಯ್ದ ಕಾರಣ ಚೇಸಿಂಗ್‌ನ ಅಂತಿಮ ಕ್ಷಣಗಳಲ್ಲಿ ತಾನು ಆತಂಕಗೊಂಡಿದ್ದೇನೆ ಎಂದು ರೋಹಿತ್ ಒಪ್ಪಿಕೊಂಡರು.

ಚೇಸಿಂಗ್‌ನ 7ನೇ ಓವರ್‌ನ ಕೊನೆಯಲ್ಲಿ ಮಳೆ ಅಡ್ಡಿಪಡಿಸಿದಾಗ ಲಿಟ್ಟನ್ ದಾಸ್ 21 ಎಸೆತಗಳಲ್ಲಿ 50 ರನ್ ಗಳಿಸಿ ಬಾಂಗ್ಲಾದೇಶವನ್ನು DLS ಸಮಾನ ಸ್ಕೋರ್‌ಗಿಂತ 17 ರನ್ ಮುಂದಿಟ್ಟರು. ಆದರೆ, 4 ಓವರ್‌ಗಳ ಕಡಿತದೊಂದಿಗೆ ಪಂದ್ಯ ಪುನರಾರಂಭಗೊಂಡ ನಂತರ ಲಿಟ್ಟನ್ ದಾಸ್ ಅವರನ್ನು ರಾಹುಲ್ ರನ್ ಔಟ್ ಮಾಡಿದರು.

ದಕ್ಷಿಣ ಆಫ್ರಿಕಾದ ವಿರುದ್ಧ ಪಂದ್ಯದಿಂದ ಪಾಠ ಕಲಿತ ಭಾರತ ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿತು. ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವ ಮೂಲಕ ಭಾರತವು ಕ್ಷೇತ್ರರಕ್ಷಣೆಯಲ್ಲಿ ಚುರುಕಾಗಿತ್ತು.

Story first published: Thursday, November 3, 2022, 5:39 [IST]
Other articles published on Nov 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+