Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಲು ಇಂಗ್ಲೆಂಡ್‌ಗೆ ಸಾಧಾರಣ ಗುರಿ ನೀಡಿದ ಪಾಕಿಸ್ತಾನ

T20 world cup 2022: England need 138 runs to win in Final match against Pakistan

ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಬೌಲಿಂಗ್ ಪಡೆ ಭರ್ಜರಿ ಯಶಸ್ಸು ಸಾಧಿಸಿದೆ. ಪಾಕಿಸ್ತಾನದ ಪ್ರಮುಖ ದಾಂಡಿಗರು ಈ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದು ಇಂಗ್ಲೆಂಡ್‌ಗೆ 138 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವ ಸವಾಲು ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಪಾಕಿಸ್ತಾನದ ಸ್ಟಾರ್ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ ವಿರುದ್ಧ ಇಂಗ್ಲೆಂಡ್ ಆರಂಭದಲ್ಲೇ ಯಶಸ್ಸು ಸಾಧಿಸಿತ್ತು. ಮೊಹಮ್ಮದ್ ರಿಜ್ವಾನ್ ಕೇವಲ 15 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಭರವಸೆಯ ಯುವ ಆಟಗಾರ ಮೊಹಮ್ಮದ್ ಹ್ಯಾರಿಸ್ ಕೂಡ 8 ರನ್‌ ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಕಳೆದ ಪಂದ್ಯದಲ್ಲಿ ಫಾರ್ಮ್‌ಗೆ ಬಂದಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಕೂಡ ಈ ಪಂದ್ಯದಲ್ಲಿ 32 ರನ್‌ಗಳ ಕೊಡುಗೆಯನ್ನು ಮಾತ್ರವೇ ನೀಡಲು ಸಾಧ್ಯವಾಯಿತು.

ಇನ್ನು ಪಾಕಿಸ್ತಾನದ ಪರವಾಗಿ ಶಾನ್ ಮಸೂದ್ ಹಾಗೂ ಶದಬ್ ಖಾನ್ ಮಧ್ಯೆ ಸಾಧಾರಣ ಜೊತೆಯಾಟ ಬಂದ ಕಾರಣ ಪಾಕ್ ತಂಡ ಕನಿಷ್ಠ ಮೊತ್ತಕ್ಕೆ ಹೋರಾಟ ಅಂತ್ಯಗೊಳಿಸುವುದನ್ನು ತಪ್ಪಿಸಿಕೊಂಡಿದೆ. ಶಾನ್ ಮಸೂದ್ 38 ರನ್‌ಗಳ ಕೊಡುಗೆ ನೀಡಿ ಮಿಂಚಿದರು. ಉಳಿದಂತೆ ಯಾವ ಆಟಗಾರರಿಂದಲೂ ಪಾಕಿಸ್ತಾನ ತಂಡಕ್ಕೆ ನೆರವು ದೊರೆಯಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಪಾಕಿಸ್ತಾನ ತಂಡ 137 ರನ್‌ಗಳನ್ನು ಗಳಿಸಷ್ಟೇ ಶಕ್ತವಾಯಿತು.

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿತ್ತು. ಅದರಲ್ಲೂ ಸ್ಯಾಮ್ ಕರನ್ 4 ಓವರ್‌ಗಳಲ್ಲಿ ಕೇವಲ 12 ರನ್‌ಗಳಿಗೆ 3 ವಿಕೆಟ್ ಪಡೆದು ಪಾಕ್ ಪಡೆಗೆ ಆಘಾತ ನೀಡಿದರು. ಇನ್ನು ಆದಿಲ್ ರಶೀದ್ ಹಾಗೂ ಕ್ರಿಸ್ ಜೋರ್ಡನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಒಂದು ವಿಕೆಟ್ ಬೆನ್ ಸ್ಟೋಕ್ಸ್ ಪಾಲಾಯಿತು.

ಪಾಕಿಸ್ತಾನ ಆಡುವ ಬಳಗ ಹೀಗಿದೆ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

ಬೆಂಚ್: ಖುಶ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಹೈದರ್ ಅಲಿ, ಆಸಿಫ್ ಅಲಿ

ಇಂಗ್ಲೆಂಡ್ ಆಡುವ ಬಳಗ: ಜೋಸ್ ಬಟ್ಲರ್(ವಿಕೆಟ್ ಕೀಪರ್/ ನಾಯಕ), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್
ಬೆಂಚ್: ಡೇವಿಡ್ ವಿಲ್ಲಿ, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಮಾರ್ಕ್ ವುಡ್

Story first published: Sunday, November 13, 2022, 15:20 [IST]
Other articles published on Nov 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+