ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs IRE: ಐರ್ಲೆಂಡ್ ವಿರುದ್ಧ ಸೋಲಿನ ಹೊರತಾಗಿ ಟಿ20ಯಲ್ಲಿ ದೊಡ್ಡ ಸಾಧನೆ ಮಾಡಿದ ಮೊಯಿನ್ ಅಲಿ

T20 World Cup 2022: Englands Moeen Ali Sets Big Record in T20 Cricket Despite Losing To Ireland

ಬುಧವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ನಂತರ ಐರ್ಲೆಂಡ್ ಡಕ್‌ವರ್ತ್ ಲೂಯಿಸ್ ವಿಧಾನದ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಐದು ರನ್‌ಗಳಿಂದ ಸೋಲಿನ ರುಚಿ ತೋರಿಸಿತು.

158 ರನ್‌ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ ಸೂಪರ್ 12 ಪಂದ್ಯದಲ್ಲಿ ಮತ್ತೆ ಮಳೆ ಸುರಿಯತೊಡಗಿದಾಗ 14.3 ಓವರ್‌ಗಳಲ್ಲಿ 5 ವಿಕೆಟ್‌ಗೆ 105 ರನ್ ಗಳಿಸಿತು, ಇದು ಮಳೆಯ ನಂತರ ಒದ್ದೆಯಾದ ಔಟ್‌ಫೀಲ್ಡ್‌ನಿಂದ ತಡವಾದ ಆರಂಭಕ್ಕೆ ಸಾಕ್ಷಿಯಾಯಿತು.

ಟಿ20 ವಿಶ್ವಕಪ್: ಭಾರತ ವಿರುದ್ಧದ ಸೋಲಿನಿಂದ ಹೃದಯ ಭಗ್ನಗೊಂಡಿದೆ ಎಂದ ಪಾಕ್ ಕ್ರಿಕೆಟಿಗ ಇಫ್ತಿಕರ್ ಅಹ್ಮದ್ಟಿ20 ವಿಶ್ವಕಪ್: ಭಾರತ ವಿರುದ್ಧದ ಸೋಲಿನಿಂದ ಹೃದಯ ಭಗ್ನಗೊಂಡಿದೆ ಎಂದ ಪಾಕ್ ಕ್ರಿಕೆಟಿಗ ಇಫ್ತಿಕರ್ ಅಹ್ಮದ್

ಡಕ್‌ವರ್ತ್ ಲೂಯಿಸ್ ವಿಧಾನದ ಪ್ರಕಾರ, ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದಾಗ, ಇಂಗ್ಲೆಂಡ್‌ ತಂಡಕ್ಕೆ ಐದು ರನ್‌ಗಳ ಕೊರತೆ ಕಂಡುಬಂದಿತು. ಹೀಗಾಗಿ ನೆರೆಯ ಐರ್ಲೆಂಡ್ ವಿರುದ್ಧ ತೀವ್ರ ಸೋಲಿನ ಮುಖಭಂಗ ಅನುಭವಿಸಿತು.

ಟಿ20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ಮೊಯಿನ್ ಅಲಿ

ಟಿ20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ಮೊಯಿನ್ ಅಲಿ

ಇದೇ ವೇಳೆ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಬುಧವಾರ ಟಿ20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದರು. ಎಡಗೈ ಬ್ಯಾಟಿಂಗ್ ಆಲ್‌ರೌಂಡರ್ ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಗ್ರೂಪ್ 1, ಸೂಪರ್ 12 ಪಂದ್ಯದ ವೇಳೆ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಹೆಗ್ಗುರುತನ್ನು ಸಾಧಿಸಿದರು.

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ಮೊಯಿನ್ ಅಲಿ 12 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ ಅಜೇಯ 24 ರನ್ ಗಳಿಸಿದರು. ಇದು ಮಳೆಯಿಂದ ಹಾಳಾಗುವ ಮೊದಲು ಐರ್ಲೆಂಡ್ ನೀಡಿದ 158 ರನ್ನುಗಳ ಗುರಿಯನ್ನು ಬೆನ್ನಟ್ಟುವ ಭರವಸೆಯನ್ನು ನೀಡಿತ್ತು.

ಇದೀಗ 67 ಪಂದ್ಯಗಳು ಮತ್ತು 58 ಇನ್ನಿಂಗ್ಸ್‌ಗಳಲ್ಲಿ, ಮೊಯಿನ್ ಅಲಿ 23.69 ಸರಾಸರಿಯಲ್ಲಿ 1,019 ರನ್ ಗಳಿಸಿದ್ದಾರೆ. ಈ ಆಕ್ರಮಣಕಾರಿ ಆಲ್‌ರೌಂಡರ್‌ನಿಂದ ಏಳು ಅರ್ಧ ಶತಕಗ ಬಂದಿದ್ದು, ಅತ್ಯುತ್ತಮ ಅಜೇಯ 72 ರನ್ ಮತ್ತು ಸ್ಟ್ರೈಕ್ ರೇಟ್ 147.25 ಆಗಿದೆ.

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 3,794 ರನ್

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 3,794 ರನ್

ಮೊಯಿನ್ ಅಲಿ ಇಂಗ್ಲೆಂಡ್‌ನ ಸಾರ್ವಕಾಲಿಕ ಟಿ20 ರನ್ ಸ್ಕೋರರ್‌ಗಳಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಕಡಿಮೆ ಮಾದರಿಯಲ್ಲಿ ಇಂಗ್ಲೆಂಡ್‌ನ ಅಗ್ರ ಐದು ರನ್ ಗಳಿಸಿದವರೆಂದರೆ, ಮಾಜಿ ನಾಯಕ ಇಯಾನ್ ಮಾರ್ಗನ್ (2,458), ಜೋಸ್ ಬಟ್ಲರ್ (2,395), ಅಲೆಕ್ಸ್ ಹೇಲ್ಸ್ (1,888), ಡೇವಿಡ್ ಮಲಾನ್ (1,745) ಮತ್ತು ಜೇಸನ್ ರಾಯ್ (1,522).

ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆಂದರೆ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (3,794), ಭಾರತದ ನಾಯಕ ರೋಹಿತ್ ಶರ್ಮಾ (3,741), ನ್ಯೂಜಿಲೆಂಡ್ ಅನುಭವಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್ (3,531), ಸ್ಟಾರ್ ಪಾಕಿಸ್ತಾನದ ಬ್ಯಾಟರ್ ಬಾಬರ್ ಅಜಂ (3,231) ಮತ್ತು ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ (3,133).

ಐರ್ಲೆಂಡ್ ನಾಯಕ ಬಲ್ಬಿರ್ನಿ 47 ಎಸೆತಗಳಲ್ಲಿ 62 ರನ್

ಐರ್ಲೆಂಡ್ ನಾಯಕ ಬಲ್ಬಿರ್ನಿ 47 ಎಸೆತಗಳಲ್ಲಿ 62 ರನ್

ಡೇವಿಡ್ ಮಲಾನ್ 35, ಮೊಯಿನ್ ಅಲಿ 24 ರನ್ ಗಳಿಸಿ ಅಜೇಯರಾಗುಳಿದರು. ಐರ್ಲೆಂಡ್ ಪರ ಜೋಶ್ ಲಿಟಲ್ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ ಐರ್ಲೆಂಡ್ 157 ರನ್‌ಗಳಿಗೆ ಆಲೌಟ್ ಆಗಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್, ನಾಯಕ ಬಲ್ಬಿರ್ನಿ 47 ಎಸೆತಗಳಲ್ಲಿ 62 ರನ್ ಗಳಿಸಿದರೆ, ಲೋರ್ಕನ್ ಟಕರ್ 34 ರನ್ ಗಳಿಸಿದರು. ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

Story first published: Wednesday, October 26, 2022, 16:37 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X