Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಂದು ದಶಕದ ಬಳಿಕ ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಪಂದ್ಯ ಸೋತ ಭಾರತ!

South africa

ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಹಂತದಲ್ಲಿ ಟೀಂ ಇಂಡಿಯಾ ಮೊದಲ ಸೋಲಿನ ಕಹಿ ಅನುಭವಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವಿನ ಸಿಹಿ ಅನುಭವಿಸಿದ್ದ ರೋಹಿತ್ ಪಡೆ ಹರಿಣಗಳ ವಿರುದ್ಧ ಮುಗ್ಗರಿಸಿದೆ.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಭಾರತವು ಹರಿಣಗಳ ವಿರುದ್ಧ ಒಂದು ದಶಕದ ಬಳಿಕ ಸೋಲನ್ನ ಕಂಡಿದೆ. ಈ ಹಿಂದೆ 2011ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿತು. ಆದ್ರೆ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಇದೀಗ ಇತಿಹಾಸ ಮರುಕಳಿಸಿದ್ದು, ಭಾರತವು ಸೆಮಿಫೈನಲ್ ತಲುಪಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

T20 ವಿಶ್ವಕಪ್: ಸತತ 8 ಪಂದದಲ್ಲಿ ಕಡಿಮೆ ರನ್‌ಗೆ ಔಟಾದ ಟೆಂಬಾ ಬವುಮಾ, ಗರಿಷ್ಠ 10 ರನ್‌!

2011ರ ಏಕದಿನ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ಸೋತಿದ್ದ ರೀತಿಯಲ್ಲೇ ಈ ಬಾರಿ ಆಂಗ್ಲರು ಮುಗ್ಗರಿಸಿದ್ದಾರೆ. ಅದೇ ರೀತಿಯಲ್ಲಿ ಭಾರತದ ಈ ಸೋಲನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ.

ಪರ್ತ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ದ.ಆಫ್ರಿಕಾ ದಾಳಿಗೆ ತತ್ತರಿಸಿ ಹೋಯಿತು. ರಾಹುಲ್ 14 ಎಸೆತಗಳಲ್ಲಿ 9ರನ್‌ಗೆ ಔಟಾದ್ರೆ, ರೋಹಿತ್ 14 ಎಸೆತಗಳಲ್ಲಿ 15ರನ್ ಸಿಡಿಸುವ ಮೂಲಕ ವಿಕೆಟ್ ಒಪ್ಪಿಸಿದ್ರು.

ದಕ್ಷಿಣ ಆಫ್ರಿಕಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಲುಂಗಿ ಎನ್‌ಗಿಡಿ ತನ್ನ ಮೊದಲ ಓವರ್‌ನಲ್ಲೇ ಎರಡುವ ವಿಕೆಟ್ ಕಬಳಿಸಿದ್ರು. ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ 2 ಬೌಂಡರಿ ಸಿಡಿಸಿ ತಿರುಗೇಟು ನೀಡುವ ಲಕ್ಷಣ ತೋರಿದರು. ಆದ್ರೆ ಮತ್ತೆ ದಾಳಿಗಿಳಿದ ಲುಂಗಿ ಎನ್‌ಗಿಡಿ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ವಿರಾಟ್ 12, ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯ 2ರನ್‌ಗೆ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ನುಂಗಲಾರದ ತುತ್ತಾಯಿತು.

ಭಾರತ 8.3 ಓವರ್‌ಗಳಲ್ಲಿ 49ರನ್‌ಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಈ ವೇಳೆಯಲ್ಲಿ 6ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ ಸೂರ್ಯಕುಮಾರ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ತಂಡದ ಸ್ಕೋರನ್ನು 100ರ ಗಡಿದಾಟಿಸಿದ್ರು. 30 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್ ಸಿಡಿಸಿ ಭಾರತಕ್ಕೆ ಆಧಾರವಾದ್ರು. ಸೂರ್ಯಕುಮಾರ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿತ್ತು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕುವ ಮೂಲಕ ಹರಿಣಗಳಿಗೆ 134ರನ್ ಟಾರ್ಗೆಟ್ ನೀಡಿತು.

ಆದ್ರೆ ಈ ಗುರಿ ಬೆನ್ನತ್ತಿದ ದ.ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 2 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಏಡೆನ್ ಮಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಬೊಂಬಾಟ್ ಬೌಲಿಂಗ್ ಮಾಡಿ 4 ವಿಕೆಟ್ ಕಬಳಿಸಿದ ಲುಂಗಿ ಎನ್‌ಗಿಡಿಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಲಭಿಸಿದೆ.

Story first published: Sunday, October 30, 2022, 23:02 [IST]
Other articles published on Oct 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+