ಕೊಹ್ಲಿ ನಾಯಕನಿದ್ದಾಗ ಇದ್ದ ತಂಡ ಈಗಿಲ್ಲ; ರೋಹಿತ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಹೇಳಿಕೆ

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಗೆಲುವುಗಳ ನಂತರ ಟೀಂ ಇಂಡಿಯಾ ಸೂಪರ್ 12ರ ಗ್ರೂಪ್ 2 ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿತು. ದಕ್ಷಿಣ ಆಫ್ರಿಕಾದ ಪ್ರಭಾವಶಾಲಿ ಬೌಲಿಂಗ್ ಪ್ರದರ್ಶನವು ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್‌ಗಳಿಗೆ ನಿಯಂತ್ರಿಸಿತು.
ನಂತರ, ಅರ್ಶ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ಆರಂಭಿಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಆದರೆ, ಏಡನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ 19.4 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ಆ ರೋಚಕ ಸೆಣಸಾಟದಲ್ಲಿ, ಟೀಂ ಇಂಡಿಯಾ ತನ್ನ ಫೀಲ್ಡಿಂಗ್ ವಿಷಯದಲ್ಲಿ ಕಳಪೆ ಪ್ರದರ್ಶನ ನೀಡಿತು.

ಏಡನ್ ಮಾರ್ಕ್ರಾಮ್‌ಗೆ ಜೀವದಾನ ನೀಡಿದ ಕೊಹ್ಲಿ
ಮೊದಲಿಗೆ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು, ಇದು ಏಡನ್ ಮಾರ್ಕ್ರಾಮ್‌ಗೆ ಜೀವದಾನ ನೀಡಿತು. ಅದರ ನಂತರ ನಾಯಕ ರೋಹಿತ್ ಅದೇ ಬ್ಯಾಟರ್‌ನ ರನ್ ಔಟ್ ಅವಕಾಶವನ್ನು ಕಳೆದುಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧದ ಕಳಪೆ ಫೀಲ್ಡಿಂಗ್‌ಗಾಗಿ ಭಾರತ ತಂಡವು ಅಭಿಮಾನಿಗಳು ಮತ್ತು ಕ್ರಿಕೆಟ್ ಪರಿಣತರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕೂಡ ಇದೇ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ ಅವರ ನಾಯಕತ್ವದ ಅವಧಿ ಮುಗಿದ ನಂತರ ಟೀಂ ಇಂಡಿಯಾ ತಮ್ಮ ಫೀಲ್ಡಿಂಗ್ ಮೇಲೆ ಕೇಂದ್ರೀಕರಿಸುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಹೊಸ ನಾಯಕ ಫೀಲ್ಡಿಂಗ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ
"ಏಷ್ಯಾದ ತಂಡಗಳು ಫೀಲ್ಡಿಂಗ್‌ಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ಬಾರಿ ಫೀಲ್ಡಿಂಗ್‌ಗೆ ಪ್ರಾಮುಖ್ಯತೆ ನೀಡುವ ಬಗ್ಗೆ ನಾನು ಕೇಳಿದ್ದು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾದ್ದಾಗ ಮಾತ್ರ. ಅವರು ಉತ್ತಮ ಫೀಲ್ಡರ್‌ಗಳಾದ ಆಟಗಾರರನ್ನು ಮಾತ್ರ ಸೇರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದೀಗ ನಾಯಕ ಮತ್ತು ಕೋಚ್ ಕೂಡ ಬದಲಾಗಿದ್ದಾರೆ. ಹೊಸ ನಾಯಕ ಫೀಲ್ಡಿಂಗ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಹೀಗಾಗಿ ನಮ್ಮಲ್ಲಿರುವ ಈಗಿನ ತಂಡ ಹೆಚ್ಚು ಅಥ್ಲೆಟಿಕ್ ಅಲ್ಲ," ಎಂದು ಅಜಯ್ ಜಡೇಜಾ Cricbuzzನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ತಂಡ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ
ಇನ್ನು ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರ ಫೀಲ್ಡಿಂಗ್ ಸಾಮರ್ಥ್ಯವನ್ನು ಅಜಯ್ ಜಡೇಜಾ ಟೀಕಿಸಿದರು. "ನಮ್ಮಲ್ಲಿರುವ ಫೀಲ್ಡರ್‌ಗಳು ಯಾರು? ನಮ್ಮಲ್ಲಿ ಅಶ್ವಿನ್ ಮತ್ತು ಶಮಿ ಇದ್ದಾರೆ. ಬೌಲಿಂಗ್ ವಿಷಯದಲ್ಲಿ ಇವರಿಬ್ಬರು ಶ್ರೇಷ್ಠರು, ಆದರೆ ನೀವು ಅವರಿಂದ ಉತ್ತಮ ಫೀಲ್ಡಿಂಗ್ ಅನ್ನು ನಿರೀಕ್ಷಿಸಲಾಗುವುದಿಲ್ಲ. ನೀವು ತಂಡವನ್ನು ಆಯ್ಕೆ ಮಾಡಿದಾಗ, ನಿಮಗೆ ಏನು ಬೇಕು ಎಂದು ನಿಮಗೆ ತಿಳಿದಿರಬೇಕು. ಅವರ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ," ಎಂದು ಅಭಿಪ್ರಾಯಪಟ್ಟರು.
ಬುಧವಾರ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಸೂಪರ್ 12ರ ಗ್ರೂಪ್ 2 ಪಂದ್ಯದಲ್ಲಿ ಭಾರತ ತಂಡ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications