Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಕೆ.ಎಲ್ ರಾಹುಲ್ ಫಾರ್ಮ್ ವೈಫಲ್ಯ, ಕನ್ನಡಿಗನನ್ನ ಬೆಂಬಲಿಸಿದ ವಾಸಿಂ ಜಾಫರ್

KL Rahul

ಟೀ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಫಾರ್ಮ್ ವೈಫಲ್ಯ ಅನುಭವಿಸಿದ್ದಾರೆ. ಸೂಪರ್ 12 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ್ದ ಕೆ.ಎಲ್ ರಾಹುಲ್ ನೆದರ್ಲ್ಯಾಂಡ್ಸ್ ವಿರುದ್ಧವೂ ರನ್‌ ಕಲೆಹಾಕುವಲ್ಲಿ ಎಡವಿದ್ರು. ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ.

ಕೆ.ಎಲ್ ರಾಹುಲ್ ವೈಫಲ್ಯದ ಕುರಿತಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಓಪನರ್ ಬ್ಯಾಟರ್‌ ಅನ್ನು ಬೆಂಬಲಿಸುವ ಮೂಲಕ ಆತ ಕ್ವಾಲಿಟಿ ಪ್ಲೇಯರ್ ಎಂದು ಹೊಗಳಿದ್ದಾರೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ರಾಹುಲ್ 8 ಎಸೆತಗಳಲ್ಲಿ 4ರನ್‌ಗಳಿಸಿ ಔಟಾದ್ರೆ, ನೆದರ್ಲ್ಯಾಂಡ್ಸ್‌ ವಿರುದ್ಧ 12 ಎಸೆತಗಳಲ್ಲಿ 9 ರನ್‌ ಕಲೆಹಾಕಿ ವಿಕೆಟ್ ಒಪ್ಪಿಸಿದರು.

ಎರಡು ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್‌ಗೆ ಔಟಾಗಿರುವ ಕೆ.ಎಲ್ ರಾಹುಲ್ ಫಾರ್ಮ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಆದ್ರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕರ್ನಾಟಕ ಕ್ರಿಕೆಟಿಗನನ್ನು ಬೆಂಬಲಿಸಿದ್ದು, ಆತ ಈಗ ಗಳಿಸಿರುವ ನಂಬರ್‌ಗಳಿಗಿಂತ ಉತ್ತಮ ಪ್ಲೇಯರ್, ಹೇಗೆ ಇಂಜ್ಯುರಿಗಳು ಆಟಗಾರರನನ್ನ ವೀಕ್ ಮಾಡುತ್ತವೆ ಎಂದು ಉದಾಹರಣೆ ನೀಡಿದ್ರು.

'' ನನ್ನ ಪ್ರಕಾರ ಕೆ.ಎಲ್ ರಾಹುಲ್ ನಂಬರ್‌ಗಳಿಗಿಂತ ಉತ್ತಮ ಪ್ಲೇಯರ್ ಆಗಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತ ಉತ್ತಮ ಫಾರ್ಮ್‌ನಲ್ಲಿದ್ದ ಎಂಬುದನ್ನ ನೀವು ನೆನಪಿಸಿಕೊಳ್ಳಬಹುದು. ಆದ್ರೆ ಆತ ಇಂಜ್ಯುರಿ ಆದ ಬಳಿಕ ಮತ್ತೆ ಕಂಬ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ಹಳೆಯ ರಿದಮ್ ಅನ್ನು ಉಳಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ'' ಎಂದು ವಾಸಿಂ ಜಾಫರ್ ಬ್ಯಾಟ್ ಬ್ರಿಕ್ಸ್‌7 ಆಯೋಜನೆಯ ರನ್ ಕೀ ರಣನೀತಿ ಕಾರ್ಯಕ್ರಮಕ್ಕೆ ತಿಳಿಸಿದ್ದಾರೆ.

'' ನಿಮಗೆ ತಿಳಿದಿರುವ ಹಾಗೆ ಆತ ಕೆಲವು ಬಾರಿ ಇಂಜ್ಯುರಿಗಳಿಂದ ಒದೆ ತಿಂದಿದ್ದಾರೆ. ಆ ನೋವುಗಳಿಂದಾಗಿಯೇ ಆತನ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು. ಆದ್ರೆ ತನ್ನ ಸ್ಕೋರ್ ಅನ್ನು ಉತ್ತಮ ಪಡಿಸಿಕೊಳ್ಳಬಹುದು. ಆತ ಅದ್ಭುತ ಅದ್ಭುತ ಆಟಗಾರನಾಗಿದ್ದು, ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಬಲ್ಲರು'' ಎಂದು ಹೇಳಿದ್ದಾರೆ.

ಕೆ.ಎಲ್ ರಾಹುಲ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದು ಎಂದು ಆಶಿಸಿದ್ದಾರೆ.

Story first published: Thursday, October 27, 2022, 19:37 [IST]
Other articles published on Oct 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+