For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆದ್ದ ನಂತರ ಗುಂಪು 1ರ ಅಂಕಪಟ್ಟಿ ಹೀಗಿದೆ

T20 World Cup 2022: Here Group 1 Points Table After New Zealands Win Against Sri Lanka

ಶನಿವಾರ, ಅಕ್ಟೋಬರ್ 29ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಗ್ರೂಪ್ 1ರ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾವನ್ನು 65 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ತಂಡ ಅಜೇಯ ಓಟವನ್ನು ಮುಂದುವರೆಸಿದೆ.

ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ (104) ಅವರು ತಮ್ಮ ಎರಡನೇ ಟಿ20 ಶತಕವನ್ನು ಬಾರಿಸಿದರು ಮತ್ತು ಕಿವೀಸ್ ಪಡೆಯ ಅಗ್ರ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡು ನಿಗದಿತ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 167 ರನ್ ಒಟ್ಟುಗೂಡಿಸಿದರು.

ಗ್ಲೆನ್ ಫಿಲಿಪ್ಸ್ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಅಂತಿಮ ಓವರ್‌ನಲ್ಲಿ 104 ರನ್ ಗಳಿಸಿ ಔಟಾದರು. ನಂತರ ಟ್ರೆಂಟ್ ಬೌಲ್ಟ್ ಅವರ 4-0-13-4 ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವನ್ನು 102 ರನ್‌ಗಳಿಗೆ ಆಲೌಟ್ ಮಾಡಿದರು.

ಪರಿಸ್ಥತಿಗಳು ಹೀಗಿರುವಾಗ, ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳಿಂದ ಎರಡು ಗೆಲುವು ಮತ್ತು ಒಂದು ಪಂದ್ಯ ರದ್ದಾದ ನಂತರ ಐದು ಅಂಕಗಳೊಂದಿಗೆ ಗುಂಪು 1ರ ಅಗ್ರಸ್ಥಾನದಲ್ಲಿ ಉಳಿಯುತ್ತದೆ. ಅಫ್ಘಾನಿಸ್ತಾನದ ವಿರುದ್ಧದ ನ್ಯೂಜಿಲೆಂಡ್ ಪಂದ್ಯವು ಮಳೆಯಿಂದ ರದ್ದಾಗಿತ್ತು.

T20 World Cup 2022: Here Group 1 Points Table After New Zealands Win Against Sri Lanka

ಇನ್ನು ಎರಡನೇ ಸ್ಥಾನದಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನ ಮೂಲಕ ಇಂಗ್ಲೆಂಡ್ ಇದೆ. ಆಸ್ಟ್ರೇಲಿಯಾ ವಿರುದ್ಧದ ಹೈ-ವೋಲ್ಟೇಜ್ ಪಂದ್ಯವು ವಿಪರೀತ ಮಳೆಯಿಂದಾಗಿ ರದ್ದುಗೊಂಡಿತು.

ಸೋಮವಾರ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನ ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ತಲಾ ಮೂರು ಅಂಕಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಮತ್ತೊಂದೆಡೆ, ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀಲಂಕಾ ನಂತರ ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದೆ. ಎರಡೂ ತಂಡಗಳು ತಲಾ ಎರಡು ಅಂಕಗಳನ್ನು ಹೊಂದಿವೆ. ಗ್ರೂಪ್ 1ರ ಮೂರು ಪಂದ್ಯಗಳು ಸೇರಿದಂತೆ ಈವರೆಗೆ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ.

ನ್ಯೂಜಿಲೆಂಡ್ ತಂಡವು ಮುಂದಿನ ಮಂಗಳವಾರ ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯವನ್ನು ಎದುರಿಸಲಿದ್ದರೆ, ಶ್ರೀಲಂಕಾ ತಮ್ಮ ಮುಂದಿನ ಹಂತದ ಭರವಸೆಯನ್ನು ಜೀವಂತವಾಗಿಡಲು ಅದೇ ದಿನ ಅಫ್ಘಾನಿಸ್ತಾನದೊಂದಿಗೆ ಸೆಣಸಾಡಲಿದೆ.

ಗುಂಪು 1ರ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

Story first published: Saturday, October 29, 2022, 20:24 [IST]
Other articles published on Oct 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+