Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್

Ravi bishnoi and yuzvendra chahal

ಅಡಿಲೇಡ್ ಓವಲ್‌ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲನ್ನ ಅನುಭವಿಸಿತು. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಇಂತಹದ್ದೇ ಸೋಲನ್ನ ಕಂಡಿದ್ದ ಭಾರತ, ಇತಿಹಾಸ ಮರುಕಳಿಸುವಂತೆ ನಾಕೌಟ್ ಪಂದ್ಯದಲ್ಲಿ ಮುಗ್ಗರಿಸಿದೆ.

168 ರನ್ ಕಲೆಹಾಕಿ, ಎದುರಾಳಿಯ ಒಂದು ವಿಕೆಟ್ ಕಬಳಿಸಲು ಹೆಣಗಾಡಿದ ಭಾರತದ ಬೌಲರ್‌ಗಳು ಭಾರೀ ಟೀಕೆಗೆ ಗುರಿಯಾದರು. ಒಟ್ಟಾರೆ ತಂಡದ ಪ್ರದರ್ಶನ ಮೇಲೆ ಟೀಕಾಕಾರರು ಮುಗಿಬಿದ್ದಿದ್ದು, ಭಾರೀ ಬದಲಾವಣೆಗೆ ಎದುರು ನೋಡುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರ ಫಾರೂಕ್ ಎಂಜಿನಿಯರ್ ಕೂಡ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಸ್ಪಿನ್ನರ್ ಕುರಿತಾಗಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು ಪ್ಲೇಯಿಂಗ್ ಇಲೆವೆನ್‌ನಲ್ಲಿ ಲೆಗ್ ಸ್ಪಿನ್ನರ್ ಹೊಂದಬೇಕಿತ್ತು ಎಂದು ಫಾರೂಕ್ ಎಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆ. ಅದ್ರಲ್ಲೂ ವಿಕೆಟ್ ಪಡೆಯುವ ಸ್ಪಿನ್ನರ್‌ಗಳಾದ ಯುಜವೇಂದ್ರ ಚಹಾಲ್ ಮತ್ತು ರವಿ ಬಿಷ್ಣೋಯಿ ಬಿಟ್ಟು ರವಿಚಂದ್ರನ್ ಆಯ್ಕೆಗೆ ನನ್ನ ಸಮ್ಮತಿಯಿಲ್ಲ ಎಂದು ಹೇಳಿದ್ದಾರೆ.

32 ವರ್ಷದ ಸ್ಪಿನ್ನರ್ ಚಹಾಲ್‌ಗೆ ಐಸಿಸಿ ಮಹತ್ತರ ಟೂರ್ನಿಯಲ್ಲಿ ಒಂದು ಅವಕಾಶವನ್ನು ನೀಡಿ ಆತನ ಪ್ರದರ್ಶನವನ್ನ ಗಮನಿಸಬೇಕಿತ್ತು. ಆದ್ರೆ ಅಭ್ಯಾಸ ಪಂದ್ಯದಲ್ಲಿ ಮಾತ್ರ ಯುಜಿಗೆ ಅವಕಾಶ ನೀಡಲಾಗಿತ್ತು.

ಯುಜವೇಂದ್ರ ಚಹಾಲ್ ಅಥವಾ ರವಿ ಬಿಷ್ಣೋಯಿ ಈ ವಿಶ್ವಕಪ್‌ನಲ್ಲಿ ಆಡಿದ್ದರೆ ಬೇರೆ ಫಲಿತಾಂಶವನ್ನು ನಿರೀಕ್ಷಿಸಬಹುದಿತ್ತು. ಏಕೆಂದರೆ ಇಂತಹ ಟರ್ನಿಂಗ್ ಟ್ರ್ಯಾಕ್‌ಗಳಿಗೆ ಲೆಗ್ ಸ್ಪಿನ್ನರ್ ಅವಶ್ಯಕತೆಯಿದೆ ಎಂದಿದ್ದಾರೆ.

ಟೀಂ ಇಂಡಿಯಾ ಇಡೀ ಟೂರ್ನಮೆಂಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮೇಲೆ ಹೆಚ್ಚು ನಂಬಿಕೆಯಿಟ್ಟು ಆಡಿಸಿತು. ಅದ್ರಲ್ಲೂ ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ತಂಡದ ಕೈ ಹಿಡಿಯುವಲ್ಲಿ ವಿಫಲಗೊಂಡರು.

Story first published: Friday, November 11, 2022, 6:01 [IST]
Other articles published on Nov 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+