ಟಿ20 ವಿಶ್ವಕಪ್: ಭಾರತ-ಜಿಂಬಾಬ್ವೆ ಅಂತಿಮ ಪಂದ್ಯಕ್ಕೆ ಮಳೆ ಕಾಟವೇ? ಹವಾಮಾನ ವರದಿಯಲ್ಲಿ ಏನಿದೆ?

ಐಸಿಸಿ ಟಿ20 ವಿಶ್ವಕಪ್ ಸೂಪರ್ 12ನ ತನ್ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆಲ್ಲುವುದು ಬಹಳ ಮುಖ್ಯವಾಗಿದೆ. ನವೆಂಬರ್ 6 ರ ಭಾನುವಾರದಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಹವಾಮಾನ ಹೇಗಿರಲಿದೆ? ಭಾರತ-ಜಿಂಬಾಬ್ವೆ ಪಂದ್ಯಕ್ಕೆ ಮಳೆ ಕಾಟ ಇದೆಯೇ? ಎಂಬೆಲ್ಲಾ ಪ್ರಶ್ನೆಗಳು ಸದ್ಯ ಎದುರಾಗಿವೆ.
ಮೆಲ್ಬರ್ನ್‌ನ ಮೆಲ್ಬರ್ನ್ ಕ್ರಿಕೆಟ್ ಮೈದಾನದ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ಎಲ್ಲರ ಕಣ್ಣುಗಳು ಹವಾಮಾನದ ಮೇಲೆ ನೆಟ್ಟಿದೆ. ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಶತಾಯಗತಾ ಗೆಲ್ಲಲು ಪ್ರಯತ್ನಿಸುತ್ತದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ 8 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಉಳಿಯಲಿದ್ದು, ಅತಿ ಹೆಚ್ಚು ಪಾಯಿಂಟ್ಸ್‌ನೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ ಭಾರತ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದು ಪಂದ್ಯವನ್ನು ಸೋತಿದೆ. ಭಾರತ ಸೆಮಿಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಕಳೆದ ವಾರ, ಮೆಲ್ಬೋರ್ನ್‌ನಲ್ಲಿ ಮಳೆಯಿಂದಾಗಿ ಮೂರು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ನವೆಂಬರ್ 6 ರ ಭಾನುವಾರದಂದು ಹವಾಮಾನವು ಸ್ಪಷ್ಟವಾದೆ. ರಾತ್ರಿಯಲ್ಲಿ ಮೆಲ್ಬೋರ್ನ್‌ನಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಜಿಂಬಾಬ್ವೆ ವಿರುದ್ಧದ ಭಾರತದ ಪಂದ್ಯದ ವೇಳೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ಭಾರತ-ಜಿಂಬಾಬ್ವೆ ನಡುವಿನ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದು.
ಮಳೆಯಿಂದಾಗಿ ಕಳೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಕೆಲಕಾಲ ನಿಲ್ಲಿಸಬೇಕಾಯಿತು. ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಪಂದ್ಯವು ಇದರ ಪರಿಣಾಮಕ್ಕೆ ಒಳಗಾಗಿತ್ತು.
ಟಿ20 ವಿಶ್ವಕಪ್‌ನ ಸೂಪರ್ 12 ಪಾಯಿಂಟ್ಸ್ ಟೇಬಲ್‌ನಲ್ಲಿ ಸದ್ಯ ಭಾರತ 6 ಅಂಕಗಳನ್ನು ಹೊಂದಿದೆ. ಜಿಂಬಾಬ್ವೆ ವಿರುದ್ಧ ಗೆದ್ದರೆ ಭಾರತಕ್ಕೆ ಎರಡು ಅಂಕಗಳು ಲಭಿಸಲಿದ್ದು, 8 ಅಂಕಗಳಿಗೆ ತಲುಪಲಿದೆ. ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ಈಗಾಗಲೇ ಸೆಮಿ-ಫೈನಲ್‌ನ ರೇಸ್‌ನಿಂದ ಹೊರಗುಳಿದಿವೆ. ಗ್ರೂಪ್ 2 ರಲ್ಲಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತದ ನಂತರ ದಕ್ಷಿಣ ಆಫ್ರಿಕಾ ಮಾತ್ರ ಸೆಮಿಫೈನಲ್ ತಲುಪಲು ದೊಡ್ಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆಲ್ಲಲೇಬೇಕಾಗಿದೆ.
ಒಂದು ವೇಳೆ ಹರಿಣಗಳಿಗೆ ಇದು ಸಾಧ್ಯವಾಗದಿದ್ದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications