IND vs ENG: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟಿ20ಯಲ್ಲಿ ಭಾರತ-ಇಂಗ್ಲೆಂಡ್ ಬಲಾಬಲ ಹೀಗಿದೆ

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ಈ ಹಣಾಹಣಿಯಲ್ಲಿನ ವಿಜೇತ ತಂಡವು ಭಾನುವಾರ (ನವೆಂಬರ್ 13) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಪಾಕಿಸ್ತಾನದ ವಿರುದ್ಧ ವಿಶ್ವ ಚಾಂಪಿಯನ್ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.
ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳು ಆಡುವ 11ರ ಬಳಗದಲ್ಲಿ ಸ್ಟಾರ್ ಪರ್ಫಾರ್ಮರ್‌ಗಳೊಂದಿಗೆ ಅತ್ಯಂತ ಬಲಿಷ್ಠ ತಂಡವನ್ನು ಹೊಂದಿವೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಭಾರತ ಮತ್ತು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಪರಸ್ಪರರ ವಿರುದ್ಧ ತಮಡದ ಸಂಯೋಜನೆ ಹೇಗಿರಲಿದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಭಾರತ vs ಇಂಗ್ಲೆಂಡ್ ಮುಖಾಮುಖಿ
ಈ ಮಹತ್ವದ ಪಂದ್ಯದಲ್ಲಿ ಯಾವ ತಂಡ ಗೆದ್ದು ಪಾಕಿಸ್ತಾನ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ ಎಂಬುದನ್ನು ನೋಡುವುದಕ್ಕೂ ಮುನ್ನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು ಟಿ20 ವಿಶ್ವಕಪ್‌ಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಬಲಾಬಲ ಈ ಕೆಳಗಿನಂತಿದೆ.
ಒಟ್ಟು ಪಂದ್ಯಗಳು - 22
ಭಾರತ ತಂಡದ ಗೆಲುವು- 12
ಇಂಗ್ಲೆಂಡ್ ತಂಡದ ಗೆಲುವು - 10

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಬಲಾಬಲ
ಎರಡು ಬಲಿಷ್ಠ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. 2007, 2009 ಮತ್ತು 2012ರಲ್ಲಿ ಪರಸ್ಪರ ವಿರುದ್ಧ ಆಡಿವೆ. ಗುರುವಾರ ಆಡಿದರೆ ನಾಲ್ಕು ಬಾರಿ ಮುಖಾಮುಖಿಯಾದಂತಾಗುತ್ತದೆ. ಈವರೆಗಿನ ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಎರಡು ಬಾರಿ ಜಯ ಸಾಧಿಸಿದೆ ಮತ್ತು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಒಂದು ಬಾರಿ ಗೆಲುವು ಕಂಡಿದೆ.
ಬುಧವಾರ, ನವೆಂಬರ್ 9ರಂದು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದಾಗ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್‌ನ ನಿರಾಶಾದಾಯಕ ದಾಖಲೆಯ ಇತಿಹಾಸವು ಪುನರಾವರ್ತನೆಯಾಯಿತು. ಸೆಮಿಫೈನಲ್‌ಗೆ ಮೊದಲು, ಪಾಕಿಸ್ತಾನವು ವಿಶ್ವಕಪ್‌ನ ನಾಕ್-ಔಟ್ ಹಂತಗಳಲ್ಲಿ ಮೂರು ಬಾರಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿತ್ತು ಮತ್ತು ಎಲ್ಲಾ ಮೂರು ಸಂದರ್ಭಗಳಲ್ಲಿ ವಿಜಯಶಾಲಿಯಾಗಿದೆ. ಈ ಬಾರಿಯೂ ಪಾಕಿಸ್ತಾನವು ತಮ್ಮ ದಾಖಲೆಯನ್ನು ಅಜೇಯವಾಗಿಟ್ಟುಕೊಂಡಿದೆ ಮತ್ತು ವಿಶ್ವಕಪ್‌ನ ನಾಕ್-ಔಟ್ ಹಂತಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ಬಾರಿ ಸೋಲಿಸಿದೆ.

ಭಾರತ ಮತ್ತು ಇಂಗ್ಲೆಂಡ್ ಸಂಭಾವ್ಯ ಆಡುವ 11ರ ಬಳಗ
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್/ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications