ಐರ್ಲೆಂಡ್ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆದ್ದಾಗ ಭಾರತ ವಿಶ್ವಕಪ್ ಗೆದ್ದಿತ್ತು: ಇತಿಹಾಸ ಮರುಕಳಿಸುವುದೇ..?

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಪಂದ್ಯದಲ್ಲಿ ಐರ್ಲೆಂಡ್ ತಂಡವು ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ್ದು 5ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 11 ವರ್ಷಗಳ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದೆ.
ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆಲ್ಲುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐರ್ಲೆಂಡ್ ಕೊನೆಯ ಬಾರಿಗೆ ವಿಶ್ವಕಪ್‌ನಲ್ಲಿ ಆಂಗ್ಲರನ್ನು ಮಣಿಸಿದಾಗ ಭಾರತ ಐಸಿಸಿ ವಿಶ್ವಕಪ್ ಗೆದ್ದಿತ್ತು ಎಂಬ ವಿಚಾರವು ಸಾಕಷ್ಟು ಸುದ್ದಿ ಮಾಡಿದೆ.
ಎಂಸಿಜಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪಂದ್ಯದಲ್ಲಿ ಕೊನೆಯ ಐದು ಓವರ್‌ಗಳಿರುವಂತೆ ವರುಣ ತಡೆಯೊಡ್ಡಿತು. 158 ರನ್ ಗುರಿ ಮುಟ್ಟಿದ ಇಂಗ್ಲೆಂಡ್ ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು 14.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105ರನ್ ಕಲೆಹಾಕಿತು. ಆದ್ರೆ ದುರಾದೃಷ್ಟವಶಾತ್ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಇಂಗ್ಲೆಂಡ್ 5ರನ್‌ಗಳಿಂದ ಹಿಂದಿತ್ತು. ಪರಿಣಾಮ ಮಳೆ ನಿಲ್ಲದ ಕಾರಣ ಐರ್ಲೆಂಡ್‌ಗೆ 5ರನ್‌ಗಳ ಗೆಲುವು ಸಂಪಾದಿಸಿದೆ.
ಐರ್ಲೆಂಡ್ ಆಟಗಾರರು ಆಂಗ್ಲರನ್ನ ಮಣಿಸಿ ಸಂಭ್ರಮದಿಂದ ತೇಲಾಡ್ಡಿದ್ದಾರೆ. ಸ್ಟೇಡಿಯಂನಲ್ಲಿದ್ದ ತಮ್ಮ ಆತ್ಮೀಯರನ್ನ ಆಲಂಗಿಸಿ ವಿಶ್ವಕಪ್ ಗೆದ್ದಷ್ಟೇ ಸಂತೋಷ ವ್ಯಕ್ತಪಡಿಸಿದ್ದಾರೆ. ಅತ್ತ ಟ್ವಿಟ್ಟರ್‌ನಲ್ಲಿ ಐರ್ಲೆಂಡ್ ಗೆಲುವನ್ನ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿರುವ ಭಾರತೀಯ ಅಭಿಮಾನಿಗಳು ತರಹವೇರಿ ಕಾಮೆಂಟ್ ಮಾಡುವ ಮೂಲಕ ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬಹುದು ಎಂದು ಅಂದಾಜಿಸಿದ್ದಾರೆ.
2011ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆರಂಭಿಕ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆದ್ದು ಬೀಗಿತ್ತು. ಅಂದು ಐರ್ಲೆಂಡ್ ತಂಡದಲ್ಲಿದ್ದ ಪೌಲ್ ಸ್ಟಿರ್ಲಿಂಗ್ ಹಾಗೂ ಜಾರ್ಜ್ ಡಕ್ರೆಲ್ ಈಗಲೂ ಸಹ ಐರ್ಲೆಂಡ್ ತಂಡಲ್ಲಿರುವ ಇಬ್ಬರು ಆಟಗಾರರಾಗಿದ್ದಾರೆ. ಈ ಗೆಲುವನ್ನು 2022 ಟಿ20 ವಿಶ್ವಕಪ್‌ಗೆ ಹೋಲಿಸಿರುವ ಟೀಂ ಇಂಡಿಯಾ ಅಭಿಮಾನಿಗಳು ಭಾರತ ವಿಶ್ವಕಪ್ ಗೆಲುವಿನ ಲೆಕ್ಕಾಚಾರವನ್ನು ಹಾಕಿದ್ದಾರೆ.
ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಗೆದ್ದು ಬೀಗಿದ ಐರ್ಲೆಂಡ್ ತಂಡಕ್ಕೆ ಶುಭಾಶಯ ಕೋರುವ ಜೊತೆಗೆ ಇಂಗ್ಲೆಂಡ್‌ಗಿಂತ ಐರ್ಲೆಂಡ್ ಅತ್ಯುತ್ತಮವಾಗಿ ಆಡಿದೆ ಎಂದು ಹೊಗಳಿದ್ದಾರೆ.
ಈ ಪಂದ್ಯದ ನಂತರ ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲನ್ನ ಕಾಣುವ ಮೂಲಕ 2 ಪಾಯಿಂಟ್ ಗಳಿಸಿದ್ದು, ಗ್ರೂಪ್ 1ರ ಪಾಯಿಂಟ್ಸ್ ಟೇಬಲ್‌ನಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನ ಅಲಂಕರಿಸಿವೆ. ಮೊದಲೆರಡು ಸ್ಥಾನವನ್ನ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಅಲಂಕರಿಸಿವೆ.
ಅಕ್ಟೋಬರ್ 27ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಪಂದ್ಯ ಪ್ರಾರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications