T20 World Cup 2022: ಪಾಕಿಸ್ತಾನದ ಈ ಇಬ್ಬರು ಬೌಲರ್‌ಗಳು ಎದುರಾಳಿಗಳಿಗೆ ದುಃಸ್ವಪ್ನವಾಗಲಿದ್ದಾರೆ ಎಂದ ಜಯವರ್ಧನೆ
ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ರೀತಿಯ ಆಟಗಾರರು ಬಹಳ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಹೀನ್ ಕಳೆದೆರಡು ಋತುಗಳಲ್ಲಿ ಮೂರು ಸ್ವರೂಪಗಳಲ್ಲಿ ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಆಗಿದ್ದರು. ಜುಲೈನಲ್ಲಿ ನಡೆದ ಶ್ರೀಲಂಕಾ ಪ್ರವಾಸದ ವೇಳೆ ಮೊಣಕಾಲಿನ ಗಾಯದ ನಂತರ ಅವರು ಕೆಲವು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಟಿ20 ವಿಶ್ವಕಪ್ ವೇಳೆಗೆ ಶಾಹೀನ್ ಅಫ್ರಿದಿ ಚೇತರಿಸಿಕೊಳ್ಳಲಿ ಎಂದು ಪಾಕಿಸ್ತಾನ ಕ್ರಿಕೆಟ್ ಆಶಿಸುತ್ತಿದೆ.
ಶಾಹೀನ್ ಅನುಪಸ್ಥಿತಿಯಲ್ಲಿ, ಏಷ್ಯಾ ಕಪ್ ಮತ್ತು ಹಿಂದಿನ ನೆದರ್ಲ್ಯಾಂಡ್ಸ್ ಪ್ರವಾಸದ ಸಮಯದಲ್ಲಿ ನಸೀಮ್ ಶಾ ದೊಡ್ಡ ಪ್ರಭಾವ ಬೀರಿದರು. ಅದರಲ್ಲೂ ಏಷ್ಯಾಕಪ್‌ನಲ್ಲಿ ಶಾಹಿನ್ ಶಾ ಅಫ್ರಿದಿ ಅನುಪಸ್ಥಿತಿಯಲ್ಲಿ ಮಿಂಚಿದ ನಸೀಮ್ ಶಾ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಐಸಿಸಿ ರಿವ್ಯೂ ಶೋನಲ್ಲಿ ಮಾತನಾಡಿದ ಜಯವರ್ಧನೆ, ಟಿ20 ವಿಶ್ವಕಪ್‌ನಲ್ಲಿ ಇವರಿಬ್ಬರು ಮಹತ್ವದ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇವರಿಬ್ಬರೂ ಒಟ್ಟಿಗೆ ಬೌಲಿಂಗ್ ಮಾಡಿದರೆ ಕಷ್ಟ
ಆಸ್ಟ್ರೇಲಿಯನ್ ಪರಿಸ್ಥಿತಿಗಳಲ್ಲಿ, ಆ ರೀತಿಯ ಬೌಲರ್ ಗಳು ಬೆರಳೆಣಿಕೆಯಷ್ಟು ಇರುತ್ತಾರೆ. ವಿಶೇಷವಾಗಿ ಕೆಲವು ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ, ಶಾಹೀನ್ ಮತ್ತು ನಸೀಮ್ ಎರಡೂ ತುದಿಗಳಿಂದ ಒಟ್ಟಿಗೆ ಬೌಲ್ ಮಾಡಿದರೆ ಅದು ದುಃಸ್ವಪ್ನವಾಗಿರುತ್ತದೆ ಎಂದು ಮಹೇಲಾ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಸೀಮ್ ಶಾರ ಈವರೆಗಿನ ಪ್ರದರ್ಶನಗಳನ್ನು ವಿಶ್ಲೇಷಿಸಿದ ಜಯವರ್ಧನೆ ಅವರು ಪ್ರಬುದ್ಧರಾಗಿದ್ದಾರೆ ಎಂದು ಪ್ರತಿಪಾದಿಸಿದರು. "ನಾನು ಸ್ವಲ್ಪ ಸಮಯದಿಂದ ನಸೀಮ್ ಶಾರನ್ನು ಗಮನಿಸುತ್ತಿದ್ದೇನೆ. ನಿಸ್ಸಂಶಯವಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಆತನ ಪ್ರದರ್ಶನ ಉತ್ತಮವಾಗಿದೆ. ಆತನ್ ಬೌಲಿಂಗ್ ಎದುರಿಸಲು ಎದುರಾಳಿ ತಂಡಗಳು ಸಾಕಷ್ಟು ಕಷ್ಟಪಟ್ಟಿವೆ" ಎಂದು ಹೇಳಿದರು.
ಅಕ್ಟೋಬರ್ 1ರಿಂದ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ತಂದ ಐಸಿಸಿ; ಗಮನಿಸಿ

ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ
19 ವರ್ಷದ ನಸೀಮ್ ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಸ್ಟಾರ್ ಪರ್ಫಾರ್ಮರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಐದು ಪಂದ್ಯಗಳಲ್ಲಿ, ನಸೀಮ್ ಶಾ 7.66 ರ ಪ್ರಭಾವಶಾಲಿ ಆರ್ಥಿಕ ದರದಲ್ಲಿ ಏಳು ವಿಕೆಟ್ ಪಡೆದರು.
ಅಫ್ಘಾನಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಎರಡು ಸತತ ಸಿಕ್ಸರ್‌ಗಳನ್ನು ಸಿಡಿಸಿದ ನಸೀಮ್ ಶಾ ಪಾಕಿಸ್ತಾನವು ಒಂದು ವಿಕೆಟ್‌ನಿಂದ ರೋಮಾಂಚಕ ಗೆಲುವು ಸಾಧಿಸಲು ಕಾರಣರಾಗಿದ್ದರು.

ಪಾಕಿಸ್ತಾನದ ಉತ್ತಮ ವೇಗಿಗಳು
ಹೊಸ ಚೆಂಡಿನೊಂದಿಗೆ ನಸೀಂ ಶಾ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ. ಬೌಲಿಂಗ್ ಮೇಲಿನ ನಿಯಂತ್ರಣ, ವಿಕೆಟ್ ಪಡೆಯುವ ಎಸೆತಗಳು ಆತ ಬಹಳ ಅನುಭವಿಯಂತೆ ಆಡುತ್ತಿದ್ದಾನೆ ಎಂದು ಹೇಳಿದರು.
ಹ್ಯಾರಿಸ್ ರೌಫ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ, ಶಾಹೀನ್ ಶಾ ಅಫ್ರಿದಿ ತಂಡಕ್ಕೆ ಮರಳಿದಾಗ ಪಾಕಿಸ್ತಾನದ ದಾಳಿಯು ಇನ್ನೂ ಬಲವಾಗಿ ಕಾಣುತ್ತದೆ ಎಂದು ಜಯವರ್ಧನೆ ಹೇಳಿದರು.

ಬಲಿಷ್ಠವಾಗಿದೆ ಪಾಕಿಸ್ತಾನ ವೇಗದ ಬೌಲಿಂಗ್ ಪಡೆ
"ಇಬ್ಬರು ಯುವಕರೊಂದಿಗೆ, ಅವರು ನಿಜವಾಗಿಯೂ ಉತ್ತಮ ವೇಗದ ಘಟಕವನ್ನು ಹೊಂದಿದ್ದಾರೆ. ನಸೀಮ್ ಅದ್ಭುತವಾಗಿದ್ದಾರೆ, ಆತ ಪ್ರದರ್ಶನ ನೀಡಿದ ರೀತಿಯಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಆತನ ಕೌಶಲ್ಯಗಳು, ವಿಶೇಷವಾಗಿ ಬಲಗೈ ಆಟಗಾರರ ವಿರುದ್ಧ ಬೌಲಿಂಗ್ ಮಾಡುವ ರೀತಿ, ಆ ರೀತಿಯ ವೇಗದಲ್ಲಿ ಚೆಂಡನ್ನು ಸ್ವಿಂಗ್ ಮಾಡಿದ ರೀತಿ ಉತ್ತಮವಾಗಿತ್ತು" ಎಂದು ಹೇಳಿದ್ದಾರೆ.
ನಸೀಮ್ ಶಾ ರೀತಿ ಹ್ಯಾರಿಸ್ ರೌಫ್ ಕೂಡ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆರು ಪಂದ್ಯಗಳಲ್ಲಿ 19.12 ಸರಾಸರಿಯಲ್ಲಿ ಎಂಟು ವಿಕೆಟ್‌ಗಳನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications