For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022; ಭಾರತ ಸೇರಿ ಫೈನಲ್ ತಲುಪುವ ತಂಡಗಳ ಹೆಸರಿಸಿದ ಮಿಥಾಲಿ ರಾಜ್

T20 World Cup 2022; Mithali Raj Predicts The Teams That Will Reach The Final Include India

ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮತ್ತು ಮಹಿಳಾ ಕ್ರಿಕೆಟ್‌ನ ದಿಗ್ಗಜರಲ್ಲಿ ಒಬ್ಬರಾದ ಮಿಥಾಲಿ ರಾಜ್ ಅವರು ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸೂಪರ್ 12ರ ಗುಂಪು 2 ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದರೆ, ನ್ಯೂಜಿಲೆಂಡ್ ತಂಡದ ಜೊತೆಗೆ ಗ್ರೂಪ್ 1ರಿಂದ ಇಂಗ್ಲೆಂಡ್ ಅಥವಾ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪಲಿವೆ ಎಂದು ಮಿಥಾಲಿ ರಾಜ್ ತಿಳಿಸಿದರು.

"ಸೆಮಿಫೈನಲ್ ಸ್ಥಾನಕ್ಕಾಗಿ ನನ್ನ ಸಂಭಾವ್ಯ ತಂಡಗಳು ಹೀಗಿರಲಿವೆ, ಅಂದರೆ ಗ್ರೂಪ್ 2ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮತ್ತು ಗುಂಪು 1ರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಸ್ಪರ್ಧೆ ನಡೆಯುತ್ತದೆ. ಫೈನಲ್ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇರಲೇಬೇಕು, ಇದರಲ್ಲಿ ಯಾವುದೇ ಅನುಮಾನ ಇಲ್ಲ," ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಮ್ಮ ಸಂಭಾವ್ಯ ತಂಡಗಳು ಮಿಥಾಲಿ ರಾಜ್ ಬಹಿರಂಗಪಡಿಸಿದರು.

ಸಮೃದ್ಧ ವೃತ್ತಿಜೀವನದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಮಿಥಾಲಿ ರಾಜ್, ಭಾನುವಾರದಂದು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮುಖಾಮುಖಿಯೊಂದಿಗೆ ಕಾಮೆಂಟರಿಗೆ ಪದಾರ್ಪಣೆ ಮಾಡಿದರು. ಮೂರು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಭಾರತವು ಗ್ರೂಪ್ 2ರಲ್ಲಿ ದಕ್ಷಿಣ ಆಫ್ರಿಕಾದ ನಂತರ ಎರಡನೇ ಸ್ಥಾನದಲ್ಲಿದೆ.

T20 World Cup 2022; Mithali Raj Predicts The Teams That Will Reach The Final Include India

ಭಾರತ ತಂಡವು ಬುಧವಾರ, ನವೆಂಬರ್ 2ರಂದು ಬಾಂಗ್ಲಾದೇಶವನ್ನು ಮತ್ತು ನವೆಂಬರ್ 6ರಂದು ಜಿಂಬಾಬ್ವೆಯನ್ನು ಎದುರಿಸಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇಲ್ಲದಿದ್ದರೆ ಅವರು ಎರಡು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯ ಸೋತರೂ, ನೆಟ್ ರನ್ ರೇಟ್ ಅನ್ನು ಅವಲಂಬಿಸಬೇಕಾಗುತ್ತದೆ. ಭಾರತ ಎರಡು ಪಂದ್ಯಗಳಲ್ಲಿ ಯಾವುದಾದರೂ ಸೋತರೆ ಮತ್ತು ಪಾಕಿಸ್ತಾನವು ತನ್ನ ಉಳಿದ ಪಂದ್ಯಗಳನ್ನು ಗೆದ್ದರೆ, ಅದು ಪಾಕಿಸ್ತಾನಕ್ಕೂ ಸೆಮಿಫೈನಲ್ ಅವಕಾಶವನ್ನು ಸೃಷ್ಟಿಸುತ್ತದೆ.

ಗುಂಪು 2ರಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು 2.772 ನೆಟ್ ರನ್ ರೇಟ್ ಹೊಂದಿದೆ. ಭಾರತವು ನಾಲ್ಕು ಅಂಕಗಳೊಂದಿಗೆ ಮತ್ತು 0.844 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಗುಂಪು 1ರಲ್ಲಿ ನ್ಯೂಜಿಲೆಂಡ್ 5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು 3.850 ನೆಟ್ ರನ್ ರೇಟ್ ಹೊಂದಿದೆ. ಆಸ್ಟ್ರೇಲಿಯಾ 5 ಅಂಕಗಳೊಂದಿಗೆ ಮತ್ತು -0.304 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

Story first published: Tuesday, November 1, 2022, 18:12 [IST]
Other articles published on Nov 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+