For Quick Alerts
ALLOW NOTIFICATIONS  
For Daily Alerts
 

ZIM vs NED: ಜಿಂಬಾಬ್ವೆ ವಿರುದ್ಧ ಗೆದ್ದ ನೆದರ್ಲ್ಯಾಂಡ್ಸ್; 2 ತಂಡಗಳ ಸೆಮೀಸ್ ಕನಸು ನುಚ್ಚುನೂರು

T20 World Cup 2022: Netherlands Beat Zimbabwe By 5 Wickets In Super 12

ಬುಧವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 12ರ ಗ್ರೂಪ್ 2 ಪಂದ್ಯದಲ್ಲಿ ಪಾಲ್ ವ್ಯಾನ್ ಮೀಕೆರೆನ್ ಅವರ ಮೂರು ವಿಕೆಟ್ ಗಳಿಕೆ, ನಂತರ ಬ್ಯಾಟಿಂಗ್‌ನಲ್ಲಿ ಮ್ಯಾಕ್ಸ್ ಒ'ಡೌಡ್ (52 ರನ್‌) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನೆದರ್ಲ್ಯಾಂಡ್ಸ್ ತಂಡವು ಜಿಂಬಾಬ್ವೆ ವಿರುದ್ಧ ಐದು ವಿಕೆಟ್‌ ಅಂತರದಿಂದ ಜಯಭೇರಿ ಬಾರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಜಿಂಬಾಬ್ವೆ, ಬಾಸ್ ಡಿ ಲೀಡೆ, ಲೋಗನ್ ವ್ಯಾನ್ ಬೀಕ್, ಬ್ರ್ಯಾಂಡನ್ ಗ್ಲೋವರ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ಅವರ ಬೌಲಿಂಗ್ ದಾಳಿಗೆ 19.2 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.

ನಂತರ ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ ಕೇವಲ 18.0 ಓವರ್‌ಗಳಲ್ಲಿ ಮ್ಯಾಕ್ಸ್ ಒ'ಡೌಡ್ 52 ರನ್‌ಗಳ ನೆರವಿನಿಂದ ಗುರಿಯನ್ನು ಬೆನ್ನಟ್ಟಿ, ಟೂರ್ನಿಯ ಮೊದಲ ಗೆಲುವು ತನ್ನದಾಗಿಸಿಕೊಂಡಿತು.ಜಿಂಬಾಬ್ವೆ ತನ್ನ ನಾಲ್ಕು ಪಂದ್ಯಗಳಿಂದ ಕೇವಲ ಒಂದು ಗೆಲುವನ್ನು ಹೊಂದಿದ್ದು, ಗ್ರೂಪ್ 2ರಲ್ಲಿ ಅಗ್ರ ಎರಡು ತಂಡಗಳಲ್ಲಿ ಒಂದಾಗಿ ಸೆಮಿಫೈನಲ್‌ಗೆ ಪ್ರವೇಶಿಸಲು ದೊಡ್ಡ ಪವಾಡದ ಗೆಲುವಿನ ಅಗತ್ಯವಿದೆ. ಸದ್ಯ ದಕ್ಷಿಣ ಆಫ್ರಿಕಾ ತಂಡವು ಗುರುವಾರ ಪಾಕಿಸ್ತಾನ ವಿರುದ್ಧ ಆಡಲಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಡಿಲೇಡ್ ಡಬಲ್-ಹೆಡರ್‌ನ ಸಂಜೆಯ ಪಂದ್ಯಕ್ಕೆ ಅಭಿಮಾನಿಗಳು ಹರಿದುಬರುತ್ತಿದ್ದಂತೆ, 52 ರನ್ ಗಳಿಸಿದ ಓ'ಡೌಡ್ ಮತ್ತು ಟಾಮ್ ಕೂಪರ್ 73 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿಗೆ ಮಾರ್ಗದರ್ಶನ ಮಾಡಿದರು.

ಸ್ಟೀಫನ್ ಮೈಬರ್ಗ್ ನಾಲ್ಕನೇ ಓವರ್‌ನಲ್ಲಿ ಎಂಟು ರನ್‌ಗಳಿಗೆ ಬ್ಲೆಸ್ಸಿಂಗ್ ಮುಜರಬಾನಿ ಬೌಲಿಂಗ್‌ನಲ್ಲಿ ಔಟಾದರು. ನಂತರ ಓ'ಡೌಡ್ ಮತ್ತು ಕೂಪರ್ 118 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲು ಮುಕ್ತವಾಗಿ ಸ್ಕೋರ್ ಮಾಡಲು ಪ್ರಾರಂಭಿಸಿದರು. ಲ್ಯೂಕ್ ಜೊಂಗ್ವೆ ಅವರು 29 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಒಳಗೊಂಡಂತೆ 32 ರನ್ ಗಳಿಸಿದ್ದ ಟಾಮ್ ಕೂಪರ್ ಅವರನ್ನು ಔಟ್ ಮಡಿದರು.

ಓ'ಡೌಡ್ ಎರಡು ಸತತ ಬೌಂಡರಿಗಳೊಂದಿಗೆ ತಮ್ಮ ಅರ್ಧಶತಕ ಗಳಿಸಿದರು, ಆದರೆ ಶೀಘ್ರದಲ್ಲೇ ಮುಜರಬಾನಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ರಿಚರ್ಡ್ ನಾಗರವ ಅವರು ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಬಾಸ್ ಡಿ ಲೀಡೆ ತಡವಾಗಿ ಗೆಲುವಿನ ನಾಲ್ಕು ಬಾರಿಸಿದರು.

ಇದಕ್ಕೂ ಮೊದಲು ಫಾರ್ಮ್‌ನಲ್ಲಿರುವ ಸಿಕಂದರ್ ರಜಾ ಅವರ 24 ಎಸೆತಗಳಲ್ಲಿ 40 ರನ್‌ಗಳ ಹೊರತಾಗಿಯೂ ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿದ ಜಿಂಬಾಬ್ವೆಯನ್ನು 19.2 ಓವರ್‌ಗಳಲ್ಲಿ ನೆದರ್ಲ್ಯಾಂಡ್ಸ್ ಆಲೌಟ್ ಮಾಡಿತು. ಆರಂಭಿಕ ವ್ಯಾನ್ ಮೀಕೆರೆನ್ ಅವರು ವೆಸ್ಲಿ ಮಾಧೆವೆರೆ ಅವರನ್ನು ಬೌಲ್ಡ್ ಮಾಡಿದರು.

ವಿಲಿಯಮ್ಸ್ ಮತ್ತು ಸಿಕಂದರ್ ರಝಾ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಗಳಿಸಲು ವಿಫಲವಾಗದ ಕಾರಣ ಜಿಂಬಾಬ್ವೆ ತಂಡ 118 ರನ್ ಮಾತ್ರ ಗಳಿಸಿತು.

ಗ್ಲೋವರ್, ಡಿ ಲೀಡೆ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಎರಡು ವಿಕೆಟುಗಳನ್ನು ಕಬಳಿಸಿದರೆ, ವೇಗಿ ಫ್ರೆಡ್ ಕ್ಲಾಸೆನ್ ಅವರ ನಾಲ್ಕು ಓವರ್‌ಗಳಲ್ಲಿ 1 ವಿಕೆಟ್‌ಗೆ 17 ರನ್ ನೀಡಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

Story first published: Wednesday, November 2, 2022, 13:10 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+