T20 ವಿಶ್ವಕಪ್: ನಮೀಬಿಯಾಗೆ ಸೋಲು, ಡ್ರೆಸ್ಸಿಂಗ್ ರೂಂನಲ್ಲಿ ಕುಣಿದು ಕುಪ್ಪಳಿಸಿದ ನೆದರ್ಲೆಂಡ್ಸ್

ಟಿ20 ವಿಶ್ವಕಪ್‌ನ 10ನೇ ಪಂದ್ಯದ ಗ್ರೂಪ್ A ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತಂಡ ಗೆಲ್ಲುತ್ತಿದ್ದಂತೆ, ನೆದರ್ಲೆಂಡ್ಸ್ ತಂಡದ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ವಿಶ್ವಕಪ್ ಗೆದ್ದಷ್ಟೇ ಸಂತೋಷದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದಕ್ಕೆ ಕಾರಣ ನಮೀಬಿಯಾ ಸೋಲು ನೆದರ್ಲೆಂಡ್ಸ್ ತಂಡಕ್ಕೆ ವರದಾನವಾಗಿ ಪರಿಣಮಿಸಿದೆ.
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 163ರನ್ ಗುರಿ ಮುಟ್ಟಲು ವಿಫಲಗೊಂಡ ನೆದರ್ಲೆಂಡ್ಸ್ ತಂಡವು 16ರನ್‌ಗಳಿಂದ ಸೋಲನ್ನ ಅನುಭವಿಸಿತು. ಇದರಿಂದಾಗಿ ತಂಡವು ಸೂಪರ್ 12 ಹಂತವನ್ನು ತಲುಪುವುದು ಯುಎಇ ಮತ್ತು ನಮೀಬಿಯಾ ನಡುವಿನ ಫಲಿತಾಂಶದ ಮೇಲೆ ಆಧಾರವಾಗಿತ್ತು.
ವಿಶ್ವಕಪ್‌ನ 10ನೇ ಪಂದ್ಯದ ಗ್ರೂಪ್ A ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿತು. ನಮೀಬಿಯಾ ಗೆಲುವಿಗೆ 149ರನ್ ಗುರಿ ನೀಡಿತು. ಆದ್ರೆ ಈ ಗುರಿ ಬೆನ್ನತ್ತಿದ ನಮೀಬಿಯಾ ಗುರಿ ತಲುಪಲಾಗದೆ ಸೋಲುವ ಮೂಲಕ ಟಿ20 ವಿಶ್ವಕಪ್ ಸೂಪರ್ 12 ತಲುಪಲು ವಿಫಲಗೊಂಡಿದೆ.
10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ ಕಲೆಹಾಕಿದ್ದ ಯುಎಇ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ್ದು ಡೇವಿಡ್ ವೀಸ್. 36 ಎಸೆತಗಳಲ್ಲಿ 55 ರನ್ ಸಿಡಿಸಿದ ಡೇವಿಡ್ 3 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದ್ರು. ಆದ್ರೆ ತಂಡವನ್ನು ಗೆಲುವಿನ ದಡ ತಲುಪಿಸಲು ಇವರಿಗೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಸಾಥ್ ನೀಡದ ಪರಿಣಾಮ ನಮೀಬಿಯಾ 7ರನ್‌ಗಳಿಸಿ ಸೋಲನ್ನ ಒಪ್ಪಿಕೊಂಡಿತು.
ಗ್ರೂಪ್ ಎ ನಿಂದ ಸೂಪರ್ 12 ಹಂತಕ್ಕೆ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಲುಪಿದೆ. ಒಂದು ವೇಳೆ ನಮೀಬಿಯಾ ಈ ಪಂದ್ಯ ಜಯಿಸಿದ್ರೆ, ನೆದರ್ಲೆಂಡ್ಸ್ ಹಿಂದಿಕ್ಕಿ ಮುಂದಿನ ಹಂತವನ್ನ ತಲುಪುತ್ತಿದ್ದರು. ಆದ್ರೆ ಇದು ಸಾಧ್ಯವಾಗಲಿಲ್ಲ. ಹೀಗಾಗಿಯೇ ನಮೀಬಿಯಾ ಸೋಲುತ್ತಿದ್ದಂತೆ ನೆದರ್ಲೆಂಡ್ಸ್ ತಂಡದ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications