T20 World Cup 2022: ನೆದರ್ಲ್ಯಾಂಡ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

ಸೋಮವಾರ, ಅಕ್ಟೋಬರ್ 24ರಂದು 2022ರ ಟಿ20 ವಿಶ್ವಕಪ್‌ನ ಸೂಪರ್ 12 ಹಂತದ 5ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಈ ಪಂದ್ಯವು ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿದೆ.
ನೆದರ್ಲ್ಯಾಂಡ್ಸ್ ತಂಡದ ಪ್ರಭಾವಿ ಬೌಲಿಂಗ್ ದಾಳಿಯ ಹೊರತಾಗಿಯೂ ಬಾಂಗ್ಲಾದೇಶ ತಂಡದ ಬ್ಯಾಟರ್‌ಗಳು ಪ್ರತಿರೋಧ ಒಡ್ಡಿದರು. ಬಾಸ್ ಡಿ ಲೀಡೆ ಮತ್ತು ಪಾಲ್ ವ್ಯಾನ್ ಮೀಕೆರೆನ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಡುವೆ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡವು ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲ್ಯಾಂಡ್ಸ್ ತಂಡದ ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು. 5 ಓವರ್‌ಗಳಲ್ಲಿ 43 ರನ್ ಗಳಿಸಿದ್ದಾಗ ಸೌಮ್ಯ ಸರ್ಕಾರ್ (14) ವಿಕೆಟ್ ಕಳೆದುಕೊಂಡಿತು. ನಂತರ ಅಲ್ಲಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಇನ್ನೊಬ್ಬ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೊ (25) ರನ್ ಗಳಿಸಿದರು.

ನಂತರ ಬಂದ ಲಿಟ್ಟನ್ ದಾಸ್ (9), ನಾಯಕ ಶಕೀಬ್ ಅಲ್ ಹಸನ್ (7), ಅಫೀಫ್ ಹೊಸೈನ್ (38), ಯಾಸಿರ್ ಅಲಿ (3), ನೂರುಲ್ ಹಸನ್ (13), ಮೊಸದ್ದೆಕ್ ಹೊಸೈನ್ (ಅಜೇಯ 20) ರನ್ ಗಳಿಸಿದರು.
ನೆದರ್ಲ್ಯಾಂಡ್ಸ್ ತಂಡದ ಪರ ಬಾಸ್ ಡಿ ಲೀಡೆ 3 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಪಾಲ್ ವ್ಯಾನ್ ಮೀಕೆರೆನ್ 4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಿತ್ತರು. ಇನ್ನುಳಿದಂತೆ ಫ್ರೆಡ್ ಕ್ಲಾಸೆನ್, ಟಿಮ್ ಪ್ರಿಂಗಲ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್ ಆಡುವ 11ರ ಬಳಗ
ಬಾಂಗ್ಲಾದೇಶ ಆಡುವ 11ರ ಬಳಗ: ಸೌಮ್ಯ ಸರ್ಕಾರ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್.
ನೆದರ್ಲ್ಯಾಂಡ್ಸ್ ಆಡುವ 11ರ ಬಳಗ: ಮ್ಯಾಕ್ಸ್ ಒ'ಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications