ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SA vs NED: ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್‌ಗೆ ಭರ್ಜರಿ ಜಯ; ಭಾರತ ಸೆಮಿಫೈನಲ್‌ಗೆ ಎಂಟ್ರಿ!

T20 World cup 2022: Netherlands Won By 13 Runs Against South Africa In Super 12

ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌ 12ರ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್ ಅಚ್ಚರಿ ಗೆಲುವು ಸಾಧಿಸಿದೆ. ಇದೀಗ ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಹಾದಿ ದುರ್ಗಮವಾಗಿದೆ.

ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ನೆದರ್ಲ್ಯಾಂಡ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. 159 ರನ್‌ಗಳ ಸುಲಭ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 145 ರನ್ ಗಳಿಸಿ, 13 ರನ್‌ಗಳಿಂದ ಸೋಲು ಕಂಡಿತು.

PAK vs BAN: ಪಾಕಿಸ್ತಾನ vs ಬಾಂಗ್ಲಾದೇಶ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್PAK vs BAN: ಪಾಕಿಸ್ತಾನ vs ಬಾಂಗ್ಲಾದೇಶ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್

ದಕ್ಷಿಣ ಆಫ್ರಿಕಾವು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳಿಂದ ಸೋತಿದ್ದರಿಂದ ಜಿಂಬಾಬ್ವೆ ವಿರುದ್ಧ ಆಡುವ ಮೊದಲೇ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.

ಒಂದು ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಉತ್ತಮ ನಿವ್ವಳ ರನ್ ರೇಟ್ ಆಧಾರದ ಮೇಲೆ ಮುನ್ನಡೆಯಲ್ಲಿರಲಿದೆ. ಆದರೆ ಉಭಯ ತಂಡಗಳಲ್ಲಿ ಯಾವುದಾದರೂ ಒಂದು ತಂಡ ಗೆದ್ದರೆ, ಆ ತಂಡ ಸೆಮಿಫೈನಲ್‌ನಲ್ಲಿ ಭಾರತದ ಜೊತೆ ಸೆಮಿಫೈನಲ್ ಪ್ರವೇಶಿಸಲಿದೆ.

ನೆದರ್ಲ್ಯಾಂಡ್ಸ್ ತಂಡವನ್ನು 4 ವಿಕೆಟ್‌ಗೆ 158 ರನ್‌

ನೆದರ್ಲ್ಯಾಂಡ್ಸ್ ತಂಡವನ್ನು 4 ವಿಕೆಟ್‌ಗೆ 158 ರನ್‌

ದಕ್ಷಿಣ ಆಫ್ರಿಕಾ ಮತ್ತು ನೆದರ್ಲ್ಯಾಂಡ್ಸ್ ಪಂದ್ಯದ ಕುರಿತು ಹೇಳುವುದಾದರೆ, ಕಾಲಿನ್ ಅಕರ್‌ಮನ್ ಅವರು ಕೊನೆಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ಸ್ ತಂಡವನ್ನು 4 ವಿಕೆಟ್‌ಗೆ 158 ರನ್‌ಗಳಿಗೆ ಕೊಂಡೊಯ್ದರು. ಆರಂಭಿಕರಾದ ಸ್ಟೀಫನ್ ಮೈಬರ್ಗ್ ಮತ್ತು ಮ್ಯಾಕ್ಸ್ ಒ'ಡೌಡ್ ಮೊದಲ ವಿಕೆಟ್‌ಗೆ 58 ರನ್ ಸೇರಿಸುವುದರೊಂದಿಗೆ ನೆದರ್ಲ್ಯಾಂಡ್ಸ್ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ದಕ್ಷಿಣ ಆಪ್ರಿಕಾ ಸ್ಪಿನ್ನರ್ ಏಡೆನ್ ಮಾರ್ಕ್ರಾಮ್ ಅವರು ಮೈಬರ್ಗ್ ಅವರನ್ನು 37 ರನ್‌ಗಳಿಗೆ ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ಮೊದಲ ಯಶಸ್ಸು ತಂದುಕೊಟ್ಟರು. ನಂತರ ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಮ್ಯಾಕ್ಸ್ ಒ'ಡೌಡ್ (29) ವಿಕೆಟ್ ಒಪ್ಪಿಸಿದರು. ಆಗ ದಕ್ಷಿಣ ಆಫ್ರಿಕಾದ ಬೌಲಿಂಗ್ ಪಡೆ ನೆದರ್ಲ್ಯಾಂಡ್ಸ್ ತಂಡವನ್ನು 12.4 ಓವರ್‌ಗಳಲ್ಲಿ 97/2 ಗೆ ತಗ್ಗಿಸಿತು.

ಕಾಲಿನ್ ಅಕರ್‌ಮನ್ 26 ಎಸೆತಗಳಲ್ಲಿ 41 ರನ್

ಕಾಲಿನ್ ಅಕರ್‌ಮನ್ 26 ಎಸೆತಗಳಲ್ಲಿ 41 ರನ್

ಟಾಮ್ ಕೂಪರ್ ಮತ್ತು ಕಾಲಿನ್ ಅಕರ್‌ಮನ್ ತಮ್ಮ ಅದ್ಭುತ ಸ್ಟ್ರೋಕ್‌ಪ್ಲೇ ಮೂಲಕ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಎದುರಿಸಲು ಪ್ರಾರಂಭಿಸಿದಾಗ, ಇದ್ದಕ್ಕಿದ್ದಂತೆ ನೆದರ್ಲ್ಯಾಂಡ್ಸ್ ತಮ್ಮ ವೇಗವನ್ನು ಕಂಡುಕೊಂಡರು. ಕೇಶವ್ ಮಹಾರಾಜ್‌ಗೆ ವಿಕೆಟ್ ನೀಡುವ ಮೊದಲು ಟಾಮ್ ಕೂಪರ್ ಕೇವಲ 19 ಎಸೆತಗಳಲ್ಲಿ 35 ರನ್ ಗಳಿಸಿದರು.

ಆದಾಗ್ಯೂ, ಕಾಲಿನ್ ಅಕರ್‌ಮನ್ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿದರು. ಬಲಗೈ ಆಟಗಾರ 26 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ 145 ರನ್‌ಗಳಿಗೆ ಸೀಮಿತ

ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ 145 ರನ್‌ಗಳಿಗೆ ಸೀಮಿತ

ಪ್ರತ್ಯುತ್ತರವಾಗಿ 159 ರನ್‌ಗಳ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪವರ್‌ಪ್ಲೇ ಓವರ್‌ಗಳಲ್ಲಿ ತಮ್ಮ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಟೆಂಬಾ ಬವುಮಾ ಅವರ ವಿಕೆಟ್ ಕಳೆದುಕೊಂಡಿದ್ದರಿಂದ ದಕ್ಷಿಣ ಆಫ್ರಿಕಾ ಕಳಪೆ ಆರಂಭವನ್ನು ಹೊಂದಿತ್ತು. ದಕ್ಷಿಣ ಆಫ್ರಿಕಾ ತನ್ನ ಕೈಯಲ್ಲಿ ಸಾಕಷ್ಟು ವಿಕೆಟ್ ಹೊಂದಿದ್ದರೂ, ಸ್ಕೋರ್ ಬೋರ್ಡ್‌ನಲ್ಲಿ ರನ್ ಹೆಚ್ಚಿಸಲು ಒದ್ದಾಡಿದರು ಮತ್ತು ರನ್ ಚೇಸ್ ಅನ್ನು ಗೊಂದಲಗೊಳಿಸಿದರು.

ಬ್ರಾಂಡನ್ ಗ್ಲೋವರ್ ತನ್ನ ಎರಡು ಓವರ್‌ಗಳಲ್ಲಿ 9 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು. ಅವರು ರಿಲೀ ರೊಸ್ಸೌ (25) ಮತ್ತು ಡೇವಿಡ್ ಮಿಲ್ಲರ್ (17) ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವುದನ್ನು ಮುಂದುವರಿಸಿದ್ದರಿಂದ ಫ್ರೆಡ್ ಕ್ಲಾಸೆನ್ ಕೂಡ ಗೆಲುವಿನ ದಡ ಸೇರಿಸುವ ಮುನ್ನ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ 145 ರನ್‌ಗಳಿಗೆ ಸೀಮಿತವಾಯಿತು. ನೆದರ್ಲ್ಯಾಂಡ್ಸ್ ತಂಡ ತಾನು ಮನೆಗೆ ಹೋಗುವುದಲ್ಲದೇ ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಆಸೆಯನ್ನು ಚಿವುಟಿ ಹಾಕಿತು.

Story first published: Sunday, November 6, 2022, 8:52 [IST]
Other articles published on Nov 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X