For Quick Alerts
ALLOW NOTIFICATIONS  
For Daily Alerts
 

NZ vs SL: ಕಿವೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ; ನ್ಯೂಜಿಲೆಂಡ್‌ಗೆ ಭರ್ಜರಿ ಜಯ

T20 World Cup 2022: New Zealand Beat Sri Lanka By 65 Runs In Super 12 Match

ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 12ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿಯಾಗಿ ಜಯ ಗಳಿಸಿದ್ದು, ಪ್ರಮುಖ 2 ಅಂಕಗಳನ್ನು ಪಡೆದುಕೊಂಡು ಗುಂಪು 1ರ ಪಾಯಿಂಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ನ್ಯೂಜಿಲೆಂಡ್ ನೀಡಿದ್ದ 168 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಅಂತಿಮವಾಗಿ 19.1 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ನ್ಯೂಜಿಲೆಂಡ್ ತಂಡ 65 ರನ್‌ಗಳ ಬೃಹತ್ ಅಂತರದಿಂದ ಜಯ ದಾಖಲಿಸಿತು.

ಶ್ರೀಲಂಕಾ ಪರ ನಾಯಕ ದಸುನ್ ಶನಕ 32 ಎಸೆತಗಳಲ್ಲಿ 35 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ಭಾನುಕಾ ರಾಜಪಕ್ಸೆ 22 ಎಸೆತಗಳಲ್ಲಿ 34 ರನ್ ಗಳಿಸಿದರು. ಆದರೆ ಸೋಲಿನಿಂದ ಪಾರು ಮಾಡಲಾಗಲಿಲ್ಲ. 102 ರನ್‌ಗಳಿಗೆ ಆಲೌಟ್ ಆಯಿತು.

ಪಾತುಮ್ ನಿಸ್ಸಾಂಕ (0), ಕುಸಲ್ ಮೆಂಡಿಸ್ (4), ಧನಂಜಯ ಡಿ ಸಿಲ್ವಾ (0), ಚರಿತ್ ಅಸಲಂಕಾ (4), ವನಿಂದು ಹಸರಂಗ (4), ಚಮಿಕಾ ಕರುಣಾರತ್ನೆ (3), ಮಹೀಶ್ ತೀಕ್ಷಣ (0), ಲಹಿರು ಕುಮಾರ (4), ಕಸುನ್ ರಜಿತಾ (8) ರನ್ ಗಳಿಸಿದರು ಮತ್ತು ಇಬ್ಬರನ್ನು ಹೊರತುಪಡಿಸಿ ಎರಡಂಕಿ ಮೊತ್ತ ಯಾರೂ ದಾಟಲಿಲ್ಲ.

T20 World Cup 2022: New Zealand Beat Sri Lanka By 65 Runs In Super 12 Match

ನ್ಯೂಜಿಲೆಂಡ್ ಪರ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ 13 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಇನ್ನು ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 21 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರೆ, ಇಶ್ ಸೋಧಿ 3.2 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. ಇದೆ ವೇಳೆ ಟಿಮ್ ಸೌಥಿ 4 ಓವರ್‌ಗಳಲ್ಲಿ 12 ರನ್ ನೀಡಿ 1 ವಿಕೆಟ್ ಪಡೆದರೆ, ಲುಕಿ ಫರ್ಗುಸನ್ ಒಂದು ವಿಕೆಟ್ ತೆಗೆದುಕೊಂಡರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ, ಶ್ರೀಲಂಕಾ ತಂಡಕ್ಕೆ 168 ರನ್‌ಗಳ ಗುರಿ ನೀಡಿತ್ತು.

T20 World Cup 2022: New Zealand Beat Sri Lanka By 65 Runs In Super 12 Match

ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ (104) ಆಕರ್ಷಕ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಸವಾಲಿನ ಮೊತ್ತ ಗಳಿಸಿತು. ಗ್ಲೆನ್ ಫಿಲಿಪ್ಸ್‌ ಅವರಿಗೆ ಡೇರಿಲ್ ಮಿಚೆಲ್ (22), ಮಿಚೆಲ್ ಸ್ಯಾಂಟ್ನರ್(11) ಸಾಥ್ ನೀಡಿದರು.

ಒಂದು ಹಂತದಲ್ಲಿ 3 ವಿಕೆಟ್‌ಗೆ 15 ರನ್‌ಗಳಿಗೆ ಕುಸಿದಿದ್ದರೂ ನಂತರ ಗ್ಲೆನ್ ಫಿಲಿಪ್ಸ್ ಮತ್ತು ಡೆರಿಲ್ ಮಿಚೆಲ್ ಸೇರಿ 64 ಎಸೆತಗಳಲ್ಲಿ 104 ರನ್ ಗಳಿಸಿ 7 ವಿಕೆಟ್‌ಗೆ 167 ರನ್ ಗಳಿಸಿದರು.

ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ಕಸುನ್ ರಜಿತಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ ತಲಾ ಒಂದೊಂದು ವಿಕೆಟ್ ಪಡೆದರು.

Story first published: Saturday, October 29, 2022, 17:03 [IST]
Other articles published on Oct 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+