Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೈನಲ್ ಪಂದ್ಯಕ್ಕೆ ಮೆಲ್ಬರ್ನ್ ತಲುಪಿದ ಪಾಕಿಸ್ತಾನ: ಶುಕ್ರವಾರ ಫೈನಲ್‌ಗೆ ಅಭ್ಯಾಸ ಆರಂಭ

T20 World Cup 2022: Pakistan reach Melbourne to final on Sunday, practice start from Friday

ಸಿಡ್ನಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿ ಮಣಿಸಿರುವ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇದೀಗ ಫೈನಲ್‌ನಲ್ಲಿ ಆಡಲು ಬಾಬರ್ ಅಜಂ ಪಡೆ ಮೆಲ್ಬರ್ನ್‌ಗೆ ತಲುಪಿದ್ದು ಭಾನುವಾರದ ಪಂದ್ಯಕ್ಕೆ ಎದುರು ನೋಡುತ್ತಿದೆ. ಪಾಕಿಸ್ತಾನ ತನ್ನ ಅಭ್ಯಾಸವನ್ನು ಶುಕ್ರವಾರದಿಂದ ಆರಂಭಿಸಲಿದೆ.

ಸಿಡ್ನಿಯಿಂದ ಮೆಲ್ಬರ್ನ್‌ಗೆ ಪ್ರಯಾಣಿಸಿರುವ ಕಾರಣ ಪಾಕಿಸ್ತಾನ ಆಟಗಾರರು ಗುರುವಾರ ವಿಶ್ರಾಂತಿ ಪಡೆಯಲಿದ್ದಾರೆ. ಶುಕ್ರವಾರದಿಂದ ನೆಟ್ ಅಭ್ಯಾಸವನ್ನು ಆರಂಬಿಸಲಿದ್ದು ಫೈನಲ್ ಪಂದ್ಯಕ್ಕೆ ಸಿದ್ಧತೆ ನಡೆಸಲಿದ್ದಾರೆ. ಮುಂದಿನ ಭಾನುವಾರ ಈ ಟೂರ್ನಿಯ ಅಂತಿಮ ಪಂದ್ಯ ಮೆಲ್ಬರ್ನ್‌ನಲ್ಲಿ ನಡೆಯಲಿದ್ದು ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದು ಈಗ ಕುತೂಹಲ ಕೆರಳಿಸಿ.

ಪಾಕಿಸ್ತಾನ ತಂಡ ಈ ಭಾರಿಯ ಟಿ20 ವಿಶ್ವಕಪ್‌ನಲ್ಲಿ ಪವಾಡದ ರೀತಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಅನುಭವಿಸಿತ್ತು. ಆದರೆ ಅದಾದ ಬಳಿಕ ನಡೆದ ಮುರು ಪಂದ್ಯದಲ್ಲಿಯೂ ಪಾಕಿಸ್ತಾನ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡ ತನ್ನ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಶರಣಾಗಿದ್ದು ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಲು ಮತ್ತೊಂದು ಪ್ರಮುಖ ಕಾರಣವಾಯಿತು.

ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ ಮೂರು ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಸಾಧಾರಣ ಮೊತ್ತಕ್ಕೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕಿದ ಪಾಕಿಸ್ತಾನ ತಂಡ ಬಳಿಕ ರನ್ ಬೆನ್ನಟ್ಟುವಾದ ಆರಂಭಿಕರಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಪಾಕ್ ಪಡೆ ಭರ್ಜರಿಯಾಗಿ ರನ್ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.

ಇನ್ನು ಸೆಮಿಫೈನಲ್ ಪಂದ್ಯದ ಮುಕ್ತಾಯದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ಸಿಡ್ನಿಯಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು. "ಇಲ್ಲಿ ನೆರೆದ ಅಭಿಮಾನಿಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇಲ್ಲಿ ಆಡಿದಾಗ ನಮಗೆ ತವರಿನಲ್ಲಿ ಆಡಿದ ಅನುಭವ ದೊರೆತಿದೆ. ಬೌಲಿಂಗ್‌ನಲ್ಲಿ ಮೊದಲ 6 ಓವರ್‌ನಲ್ಲಿ ನಮಗೆ ಉತ್ತಮ ಆರಂಭ ದೊರೆಯಿತು. ಬಳಿಕ ಬೆಂಡು ಉತ್ತವಾಗು ಬರುತ್ತಿರಲಿಲ್ಲ. ಹಾಗಿದ್ದರೂ ನಮ್ಮ ತಂಡದ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಂತರ ಪವರ್‌ಪ್ಲೇನಲ್ಲಿ ಉತ್ತಮ ಪ್ರದರ್ಶನ ನಿಡುವುದು ನಮ್ಮ ಯೋಜನೆಯಾಗಿತ್ತು" ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.

Story first published: Thursday, November 10, 2022, 14:52 [IST]
Other articles published on Nov 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+