
ಭಾನುವಾರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಸೂಪರ್ 12 ಹಂತದ ಅಂತಿಮ ದಿನ ಪಂದ್ಯವಾಗಿರುವ ಕಾರಣ ಈ ಎರಡು ತಂಡಗಳು ಕೂಡ ಸೂಪರ್ 12 ಹಂತದ ಸ್ಪರ್ಧೆಯಲ್ಲಿ ಇನ್ನು ಮುಂದುವರಿದಿರುವ ಕಾರಣ ಅಂತಿಮ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಲಿದೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ತಲಾ ಎರಡು ಗೆಲುವು ಸಾಧಿಸಿದ್ದು ಎರಡು ಸೋಲು ಅನುಭವಿಸಿದೆ. ಈ ಮೂಲಕ ಎರಡು ತಂಡಗಳು ಕೂಡ ಒಟ್ಟು 4 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದೆ. ಆದರೆ ಬಾಂಗ್ಲಾದೇಶ ತಂಡದ ನೆಟ್ ರನ್‌ರೇಟ್ ಕಡಿಮೆಯಿದ್ದು ಪಾಕಿಸ್ತಾನ ತಂಡ ನೆಟ್‌ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸಿ ಅಂಕಪಟ್ಟಿಯಲ್ಲಿ ಊರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದರೂ ಇತರ ಎರಡು ತಡಗಳ ಫಲಿತಾಂಶ ಟೂರ್ನಿಯಲ್ಲಿ ಪಾಕ್ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.
ಪಂದ್ಯದ ಸಮಯ ನೇರಪ್ರಸಾರ ಮಾಹಿತಿ
ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಭಾನುವಾರ ಅಡಿಲೇಡ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9:30ಕ್ಕೆ ಆರಂಭವಾಗಲಿದ್ದು 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಹಾಟ್‌ಸ್ಟಾರ್ ಹಾಗೂ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಹವಾಮಾನ ವರದಿ: ಪಂದ್ಯದ ದಿನ ಅಡಿಲೇಡ್ ಪರಿಸರದಲ್ಲಿ ಪಂದ್ಯಕ್ಕೆ ಪೂರಕವಾದ ವಾತಾವರಣವಿರಲಿದೆ. 17-27 ಡಿಗ್ರಿ ಸೆಲ್ಸಿಯಸ್‌ನ ಮಧ್ಯೆ ಉಷ್ಣಾಂಶವಿರುವ ನಿರೀಕ್ಷೆಯಿದ್ದು ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳು ಇಲ್ಲ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಪಿಚ್ ರಿಪೋರ್ಟ್: ಅಡಿಲೇಡ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲ ನೀಡುವ ಸಾಧ್ಯತೆಯಿದೆ. ಚೆಂಡು ಬ್ಯಾಟ್‌ಗೆ ನೇರವಾಗಿ ಬರುವ ಕಾರಣ ಇಲ್ಲಿ ಬ್ಯಾಟಿಂಗ್ ನಡೆಸುವುದನ್ನು ಬ್ಯಾಟರ್‌ಗಳು ಆನಂದಿಸಲಿದ್ದಾರೆ. ಇಲ್ಲಿನ ಮೇಲ್ಮೈನಲ್ಲಿ ಬೌಲರ್‌ಗಳು ಲೈನ್ ಮತ್ತು ಲೆಂತ್‌ನಲ್ಲಿ ಎಡವದಿದ್ದರೆ ಮಾತ್ರವೇ ಯಶಸ್ಸು ಸಾಧಿಸಬಹುದು.
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ.
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಫಿಜುರ್ ರಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ