IND vs BAN: ಭಾರತ vs ಬಾಂಗ್ಲಾದೇಶ ಸೆಮಿಫೈನಲ್ ಕನಸಿಗೆ ಮಳೆ ವಿಘ್ನ?; ಹೇಗಿದೆ ಹವಾಮಾನ ವರದಿ?

ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, 2022ರ ಟಿ20 ವಿಶ್ವಕಪ್ ಅಭಿಯಾನವನ್ನು ಮರಳಿ ಟ್ರ್ಯಾಕ್‌ಗೆ ತರುವ ಆಶಯದೊಂದಿಗೆ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.
ಇಲ್ಲಿಯವರೆಗೆ ಭಾರತ ತಂಡ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಮತ್ತೊಂದೆಡೆ ಬಾಂಗ್ಲಾದೇಶ ಕೂಡ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಉತ್ತಮ ರನ್ ರೇಟ್‌ನಿಂದ ಬಾಂಗ್ಲಾದೇಶಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಆದಾಗ್ಯೂ, ಪಂದ್ಯದ ಮುನ್ನಾದಿನದಂದು ಅಡಿಲೇಡ್ ಓವಲ್‌ನಲ್ಲಿ ಭಾರೀ ಮಳೆ ಸುರಿದ ಕಾರಣ ಪಂದ್ಯವು ರದ್ದಾಗುವ ಸಾಧ್ಯತೆ ಇದೆ.
ಅಡಿಲೇಡ್‌ನ ಓವಲ್ ಕ್ರೀಡಾಂಗಣ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಗ್ರೂಪ್ 2 ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಶೇ.60ರಷ್ಟು ಮಳೆ ಸುರಿಯುವ ಸಾಧ್ಯತೆ
ಎರಡೂ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅಲುವಾಗಿ ತೀವ್ರ ಹಣಾಹಣಿ ನಡೆಸಲಿವೆ. ಹೀಗಾಗಿ ಹವಾಮಾನವು ಗುಂಪಿನ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. "ಮೋಡ ಕವಿದಿದ್ದು, ಸಂಜೆಯ ವೇಳೆಗೆ ಮಧ್ಯಮವಾಗಿ (ಶೇ.60) ಮಳೆಯ ಸುರಿಯುವ ಸಾಧ್ಯತೆ ಇದೆ. ನೈಋತ್ಯ ದಿಕ್ಕಿಗೆ ಪ್ರತಿ ಗಂಟೆಗೆ 20ರಿಂದ 30 ಕಿ.ಮೀ ಗಾಳಿ ಬೀಸಲಿದೆ,'' ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಪ್ರಕಾರ ಬುಧವಾರದ ಮುನ್ಸೂಚನೆಯನ್ನು ತಿಳಿಸಿದೆ.
0-2 ಮಿಮೀ ಮಳೆಯೊಂದಿಗೆ ತಾಪಮಾನವು 10ರಿಂದ 17 ಡಿಗ್ರಿ ಸೆಲ್ಸಿಯಸ್ ನಡುವೆ ಏರಿಳಿತಗೊಳ್ಳುತ್ತದೆ ಎಂದು ಹವಾಮಾನ ಮುನ್ಸೂಚನೆಯು ಸೂಚಿಸುತ್ತದೆ. ನಗರದಲ್ಲಿ ಭಾರೀ ಮಳೆಯಿಂದಾಗಿ, ಭಾರತದ ಅಭ್ಯಾಸದ ಅವಧಿಯನ್ನು ಸಹ ಮುಂದಕ್ಕೆ ಸ್ಥಳಾಂತರಿಸಲಾಯಿತು.

ಭಾರತ ಮತ್ತು ಬಾಂಗ್ಲಾದೇಶ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ
ಸದ್ಯದ ಪರಿಸ್ಥಿತಿಗಳ ಪ್ರಕಾರ, ದಕ್ಷಿಣ ಆಫ್ರಿಕಾ ಇದುವರೆಗೆ ಐದು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ, ಭಾರತ ಮತ್ತು ಬಾಂಗ್ಲಾದೇಶ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಜಿಂಬಾಬ್ವೆ ಮೂರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಇದುವರೆಗೆ ಕೇವಲ ಎರಡು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಮತ್ತು ಇನ್ನೂ ಒಂದು ಅಂಕವನ್ನು ಹೊಂದಿಲ್ಲ.
ಒಂದು ವೇಳೆ ಪಂದ್ಯವು ಮಳೆಯಿಂದ ವಾಶ್ ಔಟ್ ಆದರೆ, ಭಾರತ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಮತ್ತೆ 5 ಪಾಯಿಂಟ್‌ಗಳಲ್ಲಿ ಸಮಬಲಗೊಳ್ಳಲಿವೆ. ಅದು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ. ಏಕೆಂದರೆ ಒಂದು ವೇಳೆ ಪಾಕಿಸ್ತಾನದ ಗೆಲುವು ಪಡೆದರೆ ಅವರನ್ನು 4 ಅಂಕಗಳಿಗೆ ಏರುತ್ತದೆ.

ಎರಡು ಸ್ಥಾನಗಳಿಗಾಗಿ ಕನಿಷ್ಠ 4 ತಂಡಗಳು ಪೈಪೋಟಿ
ಆ ನಂತರ ಸೆಮಿಫೈನಲ್ ತಲುಪಲು ಎರಡು ಸ್ಥಾನಗಳಿಗಾಗಿ ಕನಿಷ್ಠ 4 ತಂಡಗಳು ಪೈಪೋಟಿ ನಡೆಸಲಿವೆ. ಮಳೆಯಿಂದಾಗಿ ಬಾಂಗ್ಲಾದೇಶದೊಂದಿಗಿ ಪಂದ್ಯ ರದ್ದಾದರೆ, ಯಾವುದೇ ರನ್-ರೇಟ್ ಘರ್ಷಣೆಯನ್ನು ತಪ್ಪಿಸಲು ಭಾರತ (5 ಅಂಕಗಳು) ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ. ದಕ್ಷಿಣ ಆಫ್ರಿಕಾ (5 ಅಂಕ) ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಬೇಕು.
ಒಂದು ವೇಳೆ ಭಾರತ ಅಥವಾ ದಕ್ಷಿಣ ಆಫ್ರಿಕಾ ತಂಡಗಳು ಸೋತರೆ, ಪಾಕಿಸ್ತಾನ (4 ಅಂಕಗಳು) ಮತ್ತು ಬಾಂಗ್ಲಾದೇಶ (5 ಅಂಕಗಳು) ಸೆಮಿಫೈನಲ್ ಪಂದ್ಯಕ್ಕಾಗಿ ತೀವ್ರ ಪೈಪೋಟಿ ಮಾಡುವ ಅವಕಾಶವನ್ನು ಹೊಂದಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications