ಟಿ20 ವಿಶ್ವಕಪ್: ಈ ಸ್ಟಾರ್ ಆಟಗಾರನ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ; ಮಹೇಲಾ ಜಯವರ್ಧನೆ

ಭಾರತ ಹಿರಿಯರ ಕ್ರಿಕೆಟ್ ಆಯ್ಕೆ ಸಮಿತಿಯು ಈ ವಾರದ ಆರಂಭದಲ್ಲಿ ಸಭೆ ನಡೆಸಿದ ನಂತರ, ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.
ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದು, ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಏಷ್ಯಾ ಕಪ್‌ನಲ್ಲಿ ಭಾರತದ ಕಳಪೆ ಪ್ರದರ್ಶನ ನೀಡಿದ್ದರೂ ತಂಡದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಲಾಗಿಲ್ಲ. ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಆಯಾ ಗಾಯಗಳಿಂದ ತಮ್ಮ ಪುನರಾಗಮನ ಮಾಡಿದರು.
ಟಿ20 ವಿಶ್ವಕಪ್: ಅಕ್ಷರ್ ಪಟೇಲ್ ಅಲ್ಲ, ಈತ ರವೀಂದ್ರ ಜಡೇಜಾ ಸ್ಥಾನ ತುಂಬಲಿದ್ದಾರೆ; ವೆಟ್ಟೋರಿ
ಇನ್ನು ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಂಡದ ಭಾಗವಾಗಿಲ್ಲ, ಜಡೇಜಾ ಏಷ್ಯಾ ಕಪ್‌ನಲ್ಲಿ ಗಾಯಗೊಂಡರು ಮತ್ತು ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ರವೀಂದ್ರ ಜಡೇಜಾ ಲಭ್ಯವಿಲ್ಲದಿರುವುದು ಟೀಮ್ ಇಂಡಿಯಾಕ್ಕೆ 'ದೊಡ್ಡ ನಷ್ಟ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಆ ಎಡಗೈ ಆಟಗಾರನನ್ನು ಹೊಂದಿಲ್ಲದಿರುವುದು ನಷ್ಟವಾಗಿದೆ
"ಇದು ಒಂದು ಸವಾಲಾಗಿದೆ. ಭಾರತ ತಂಡ ನಂ.5ರ ಪಾತ್ರದಲ್ಲಿ ಜಡೇಜಾರನ್ನು ಚೆನ್ನಾಗಿ ಅಳವಡಿಸಿದ್ದರು. ಅವರು ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಆ ಅಗ್ರ ಸಿಕ್ಸ್‌ನಲ್ಲಿದ್ದರು. ಆಲ್‌ರೌಂಡ್ ಆಯ್ಕೆಗಳನ್ನು ನೀಡಬಲ್ಲ ಇಬ್ಬರು ವ್ಯಕ್ತಿಗಳನ್ನು ಭಾರತ ನೀಡಿತ್ತು," ಎಂದು ಮಹೇಲಾ ಜಯವರ್ಧನೆ ದಿ ಐಸಿಸಿ ರಿವ್ಯೂನಲ್ಲಿ ಹೇಳಿದರು.
"ಇದು ಭಾರತ ತಂಡಕ್ಕೆ ಕಠಿಣವಾಗಿದೆ ಮತ್ತು ಬಹುಶಃ ಆ ಎಡಗೈ ಆಟಗಾರನನ್ನು ಹೊಂದಿಲ್ಲದಿರುವುದು ನಷ್ಟವಾಗಿದೆ. ಅವರು ದಿನೇಶ್ ಕಾರ್ತಿಕ್‌ರನ್ನು ಬಿಟ್ಟು ಆ ಪಾತ್ರದಲ್ಲಿ ರಿಷಭ್ ಪಂತ್ ಅವರನ್ನು ಕರೆತಂದಿದ್ದಾರೆ. ಭಾರತ ವಿಶ್ವಕಪ್‌ಗೆ ಹೋಗುವುದಕ್ಕೂ ಮುನ್ನ ಇತ್ಯರ್ಥಪಡಿಸಿಕೊಳ್ಳಬೇಕಾದ ವಿಷಯವಾಗಿದೆ. ಆದರೆ ಜಡೇಜಾ ಅವರು ಇದ್ದಂತಹ ಫಾರ್ಮ್ ಅನ್ನು ಹೊಂದಿರದಿದ್ದರೆ ಅದು ಭಾರತಕ್ಕೆ ಭಾರಿ ನಷ್ಟವಾಗುತ್ತದೆ," ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೇಳಿದರು.

ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ಧನಾತ್ಮಕ ಅಂಶ
ಭಾರತಕ್ಕೆ ಒಂದು ಧನಾತ್ಮಕ ಅಂಶವೆಂದರೆ, ವಿರಾಟ್ ಕೊಹ್ಲಿ ಅವರು ಫಾರ್ಮ್‌ಗೆ ಮರಳಿರುವುದು. ಬಲಗೈ ಬ್ಯಾಟರ್ ಏಷ್ಯಾ ಕಪ್‌ನಲ್ಲಿ ಅಸಾಧಾರಣ ಫಾರ್ಮ್‌ನಲ್ಲಿದ್ದರು ಮತ್ತು ಅವರು ಅಫ್ಘಾನಿಸ್ತಾನ ವಿರುದ್ಧ ಆಡುವಾಗ ತಮ್ಮ ಮೊದಲ ಟಿ20 ಶತಕವನ್ನು ದಾಖಲಿಸಿದರು. ಇದು ನವೆಂಬರ್ 2019ರ ನಂತರ ವಿರಾಟ್ ಕೊಹ್ಲಿ ಅವರ ಮೊದಲ ಅಂತಾರಾಷ್ಟ್ರೀಯ ಶತಕವಾಗಿದೆ.
"ವಿರಾಟ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು, ವಿಶೇಷವಾಗಿ ಆ ಬ್ಯಾಟಿಂಗ್ ಸ್ಥಾನದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ವಿರಾಟ್ ಕೊಹ್ಲಿಯಂತಹ ವ್ಯಕ್ತಿ ಒಂದು ಶಕ್ತಿಯಾಗಲಿದ್ದಾರೆ ಎಂಬ ವಿಶ್ವಾಸ ತೋರಿಸಿದ್ದಾರೆ ಮತ್ತು ಇದು ಎದುರಾಳಿ ತಂಡಕ್ಕೂ ಕಳವಳಕಾರಿಯಾಗಲಿದೆ. ಕೊಹ್ಲಿ ಬ್ಯಾಟಿಂಗ್ ನೋಡುವುದೇ ಚೆಂದ. ಈ ಎಲ್ಲಾ ಅದ್ಭುತ ಆಟಗಾರರು ವಿಶ್ವಕಪ್‌ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿ ಇರಬೇಕು ಮತ್ತು ಈ ಬಾರಿ ಆಸ್ಟ್ರೇಲಿಯಾದಲ್ಲಿ ಆಕರ್ಷಕ ವಿಶ್ವಕಪ್ ಆಗಿರುತ್ತದೆ," ಎಂದು ಮಹೇಲಾ ಜಯವರ್ಧನೆ ತಿಳಿಸಿದರು.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications