ಟಿ20 ವಿಶ್ವಕಪ್: ರಿಲೇ ರೊಸ್ಸೋ ಸ್ಪೋಟಕ ಬ್ಯಾಟಿಂಗ್, ಸತತ 2ನೇ ಶತಕ ದಾಖಲಿಸಿದ ಮೊದಲ ಪ್ಲೇಯರ್!

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಹರಿಣಗಳು ಬೃಹತ್ ಸ್ಕೋರ್ ಕಲೆಹಾಕಿದ್ದು, ದಕ್ಷಿಣ ಆಫ್ರಿಕಾ ಪರ ಸ್ಫೋಟಕ ಬ್ಯಾಟರ್ ರಿಲೇ ರೊಸ್ಸೋ ಅಬ್ಬರದ ಶತಕ ದಾಖಲಿಸಿದ್ದಾರೆ. ಇದು ಪ್ರಸ್ತುತ ಟಿ20 ವಿಶ್ವಕಪ್‌ನ ಮೊದಲ ಶತಕವಾಗಿದೆ.
52 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ರೊಸ್ಸೊ, ದಕ್ಷಿಣ ಆಫ್ರಿಕಾ ತಂಡವು ಬೃಹತ್ ಮೊತ್ತ ದಾಖಲಿಸಲು ನೆರವಾದರು. 56 ಎಸೆತಗಳಲ್ಲಿ ಭರ್ಜರಿಯಾಗಿ 109ರನ್ ಸಿಡಿಸಿದ ರೊಸ್ಸೊ ಬಾಂಗ್ಲಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ 194.64ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಅವಕ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತು.
ಟಿ20 ವಿಶ್ವಕಪ್‌ನಲ್ಲಿ ಮೊದಲ ಶತಕ ದಾಖಲಿಸಿದ ರೊಸ್ಸೊ ಟಿ20 ವಿಶ್ವಕಪ್‌ನ 4ನೇ ವೇಗದ ಶತಕ ದಾಖಲಿಸಿದ್ರು. ಜೊತೆಗೆ ಇದು ಅವರಿಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 2ನೇ ಶತಕವಾಗಿರುವುದು ವಿಶೇಷ. ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ದಾಖಲಿಸಿದ ಮೊದಲ ಕ್ರಿಕೆಟರ್ ಎಂಬ ಸಾಧನೆ ಮಾಡಿದ್ದಾರೆ.
ಕಳೆದ ನಾಲ್ಕು ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ರೊಸ್ಸೊ 0(1), 0(2), 100*(48) ಮತ್ತು 109(59) ರನ್ ದಾಖಲಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಬಾರಿ ಡಕೌಟ್ ಆಗಿದ್ದ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟರ್, ಇದೀಗ ಸತತ ಎರಡು ಶತಕಗಳ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205ರನ್ ಕಲೆಹಾಕಿದೆ. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಹೀನಾಯ ಕುಸಿತಗೊಂಡಿದ್ದು, 12 ಓವರ್‌ಗೆ 7 ವಿಕೆಟ್ ಕಳೆದುಕೊಂಡು 76ರನ್‌ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications