
ಹೊಬಾರ್ಟ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ 9 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 79 ರನ್ ಕಲೆಹಾಕಿದ್ದು ದಕ್ಷಿಣ ಆಫ್ರಿಕಾಗೆ 80ರನ್ ಗುರಿ ನೀಡಿದೆ.
ಮಳೆಯ ಕಾಟದಿಂದಾಗಿ 30 ನಿಮಿಷಗಳ ಕಾಲ ಟಾಸ್ ವಿಳಂಭವಾಗಿದ್ದು, ಟಾಸ್ ಬಳಿಕ ಮತ್ತೆ ಮಳೆ ಪ್ರಾರಂಭವಾಗಿದ್ದು ಪಂದ್ಯದ ಆರಂಭ ಮತ್ತಷ್ಟು ತಡವಾಯಿತು. ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದಾಗಿ ಸಾಕಷ್ಟು ಸಮಯ ವ್ಯರ್ಥವಾದ ಪರಿಣಾಮ ಪಂದ್ಯದ ಓವರ್‌ಗಳು ಕಡಿತಗೊಂಡು, 9 ಓವರ್‌ಗಳಿಗೆ ಪಂದ್ಯ ನಿಗದಿಗೊಂಡಿತು.
ಪಂದ್ಯದ ಓವರ್ ಕಡಿತಗೊಂಡ ಪರಿಣಾಮ ಪವರ್ ಪ್ಲೇ 3 ಓವರ್ , ನಾಲ್ವರು ಬೌಲರ್‌ಗಳು ಗರಿಷ್ಠ 2 ಓವರ್ ಬೌಲಿಂಗ್ ಮಾಡಬಹುದಾಗಿತ್ತು.
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಶುರು ಮಾಡಿದ ಜಿಂಬಾಬ್ವೆ ತಂಡವು ಮೊದಲ ಓವರ್‌ನಲ್ಲಿ 4 ರನ್ ಕಲೆಹಾಕಿತು. 2ನೇ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 6 ರನ್ ಮುಟ್ಟಿತು. ಮೊದಲಿಗೆ ನಾಯಕ ಕ್ರೈಗ್ ಎರ್ವಿನ್ 2 ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಇದ್ರ ಬೆನ್ನಲ್ಲೇ ರೆಗಿಸ್ ಚಕಬ್ವಾ 8ರನ್‌ಗಳಿಸಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದ್ರು.
ಎನ್‌ಗಿಡಿಯ ಅದೇ ಓವರ್‌ನಲ್ಲಿಯೇ ಫಾರ್ಮ್ ಬ್ಯಾಟ್ಸ್‌ಮನ್ ಸಿಕಂದರ್ ರಾಜಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಪರಿಣಾಮ ಜಿಂಬಾಬ್ವೆ 5 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 31 ರನ್ ಕಲೆಹಾಕಿತು.
ಆದ್ರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ವೆಸ್ಲಿ ಮಾಧೆವೆರೆ 18 ಎಸೆತಗಳಲ್ಲಿ ಅಜೇಯ 35, ಮಿಲ್ಟನ್ ಶುಂಬಾ ಅಜೇಯ 18ರನ್ ಕಲೆಹಾಕಿದ ಪರಿಣಾಮ ಜಿಂಬಾಬ್ವೆ ತಂಡವು ನಿಗದಿತ 9 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 79 ರನ್ ಕಲೆಹಾಕಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 80 ರನ್ ಸುಲಭ ಟಾರ್ಗೆಟ್ ನೀಡಿದೆ.
ದಕ್ಷಿಣ ಆಫ್ರಿಕಾ ಪರ ಮೊದಲ ಓವರ್‌ನಲ್ಲೇ ಕ್ವಿಂಟನ್ ಡಿಕಾಕ್ 23ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದ್ದಾರೆ. ಆದ್ರೆ ಮಳೆಯು ಮತ್ತೊಮ್ಮೆ ಪಂದ್ಯಕ್ಕೆ ಅಡ್ಡಿಪಡಿಸಿದೆ.
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ದಕ್ಷಿಣ ಆಫ್ರಿಕಾ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಎನ್ರಿಕ್ ನೊರ್ಕಿಯಾ, ಲುಂಗಿ ಎನ್‌ಗಿಡಿ
ಬೆಂಚ್: ಹೆನ್ರಿಚ್ ಕ್ಲಾಸೆನ್, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್
ಜಿಂಬಾಬ್ವೆ 11: ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ಟೋನಿ ಮುನ್ಯೊಂಗಾ, ಬ್ರಾಡ್ ಇವಾನ್ಸ್, ಕ್ಲೈವ್ ಮದಂಡೆ, ವೆಲ್ಲಿಂಗ್ಟನ್ ಮಸಕಡ್ಜಾ