Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂರ್ಯಕುಮಾರ್ ನೋಡಿ ಕಲಿಯಿರಿ: ಪಾಕ್ ಆಟಗಾರರಿಗೆ ಶಾಹಿದ್ ಅಫ್ರಿದಿ ಪಾಠ!

T20 World Cup 2022: Pakistan former skipper Shahid Afridi Praises Suryakumar Yadav said pak players have to learn from him

ಟಿ20 ವಿಶ್ವಕಪ್‌ನ ಅಂತಿಮ ಹಂತದಲ್ಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಪಾಕಿಸ್ತಾನ ತಂಡದ ಪ್ರದರ್ಶನದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಆಟಗಾರರ ಪ್ರದರ್ಶನವನ್ನು ವಿಶ್ಲೇಷಣೆ ಮಾಡಿರುವ ಶಾಹೀದ್ ಅಫ್ರಿದಿ ಭಾರತದ ಆಟಗಾರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಸಿದ 25 ಎಸೆತಗಳಲ್ಲಿ ಅಜೇಯ 61 ರನ್‌ಗಳ ಪ್ರದರ್ಶನವನ್ನು ಉಲ್ಲೇಖಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಥಾ ಪ್ರದರ್ಶನವನ್ನು ಪಾಕಿಸ್ತಾನದಿಂದ ನಿರೀಕ್ಷಿಸುವುದಾಗಿ ಹೇಳಿದ್ದಾರೆ. ಅದರಲ್ಲೂ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ನಿಂದ ಸಾಕಷ್ಟು ಕಲಿಯುವುದು ಬಾಕಿಯಿದೆ ಎಂದಿದ್ದಾರೆ ಶಾಹೀದ್ ಅಫ್ರಿದಿ.

ಸೂರ್ಯ ಸ್ಪೋಟಕ ಆಟ

ಸೂರ್ಯ ಸ್ಪೋಟಕ ಆಟ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇತರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡುವಂಥಾ ಪಿಚ್‌ನಲ್ಲಿಯೂ ಸೂರ್ಯ ಬ್ಯಾಟ್‌ನಿಂದ ಸ್ಪೋಟಕ ಪ್ರದರ್ಶನ ಬಂದಿದೆ. ಈ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟು 225 ರನ್‌ಗಳನ್ನು ಗಳಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ಮೂರನೇ ಅತಿ ಹೆಚ್ಚಿನ ರನ್‌ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. 193ರಷ್ಟು ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಸೂರ್ಯಕುಮಾರ್ ಬ್ಯಾಟ್ ಬೀಸಿರುವುದು ಗಮನಾರ್ಹ ಅಂಶವಾಗಿದೆ. ಆದರೆ ಮತ್ತೊಂದೆಡೆ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 103 ರನ್‌ಗಳನ್ನು ಗಳಿಸಿದ್ದು ಅರ ಸ್ಟ್ರೈಕ್‌ರೇಟ್ 100 ಆಗಿದೆ. ಇದು ಪಾಕ್ ತಂಡಕ್ಕೆ ಹಿನ್ನಡೆ ಎಂಬುದು ಶಾಹಿದ್ ಅಫ್ರಿದಿ ಅಭಿಪ್ರಾಯ.

ಸೂರ್ಯಕುಮಾರ್ ಬಗ್ಗೆ ಶಾಹಿದ್ ಮೆಚ್ಚುಗೆ

ಸೂರ್ಯಕುಮಾರ್ ಬಗ್ಗೆ ಶಾಹಿದ್ ಮೆಚ್ಚುಗೆ

2009ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟಕ್ಕೇರಿದ್ದು ಈ ಸಂದರ್ಭದಲ್ಲಿ ಶಾಹಿದ್ ಅಫ್ರಿದಿ ಪಾತ್ರ ಮಹತ್ವದ್ದಾಗಿತ್ತು. ಈ ಭಾರಿ ಪಾಕಿಸ್ತಾನ ತಂಡಕ್ಕೆ ಮತ್ತೆ ವಿಶ್ವಕಪ್ ಗೆಲ್ಲುವ ಅವಕಾಶವಿದೆ ಎಂದಿರುವ ಅಫ್ರಿದಿ ಅದಕ್ಕಾಗಿ ತಂಡದ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂಬುದನ್ನು ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಅವರಂತಾ ಆಟಗಾರ ಯಶಸ್ಸು ಸಾಧಿಸಿರುವುದು ಅವರ ಹೊಡೆತಗಳ ಆಯ್ಕೆ ಹಾಗೂ ಬ್ಯಾಟಿಂಗ್‌ನಲ್ಲಿನ ತೀವ್ರತೆಯ ಕಾರಣದಿಂದಾಗಿ. ಸೂರ್ಯಕುಮಾರ್ ಯಾದವ್ ದೇಶೀಯ ಕ್ರಿಕೆಟ್‌ನಲ್ಲಿ ಅಪಾರವಾದ ಅನುಭವ ಹೊಂದಿರುವ ಆಟಗಾರ ಎಂದಿದ್ದಾರೆ ಶಾಹಿದ್ ಅಫ್ರಿದಿ.

ಸೂರ್ಯ ಯಶಸ್ಸಿಗೆ ಕಾರಣ ಹೇಳಿದ ಅಫ್ರಿದಿ

ಸೂರ್ಯ ಯಶಸ್ಸಿಗೆ ಕಾರಣ ಹೇಳಿದ ಅಫ್ರಿದಿ

"ಸೂರ್ಯಕುಮಾರ್ ಯಾದವ್ ಅವರ ಯಶಸ್ಸಿಗೆ ಬಹು ಮುಖ್ಯವಾದ ಕಾರಣ ದೇಶೀಯ ಕ್ರಿಕೆಟ್‌ನಲ್ಲಿನ ಅವರ ಅನುಭವ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡುವ ಮುನ್ನ ಸೂರ್ಯಕುಮಾರ್ ಯಾದವ್ 200-250 ಪಂದ್ಯಗಳ ದೇಶೀಯ ಕ್ರಿಕೆಟ್‌ನ ಅನುಭವ ಹೊಂದಿದ್ದಾರೆ. ಅವರ ಆಟ ಅವರಿಗೆ ಚೆನ್ನಾಗಿ ಅರಿವಿದೆ. ಅವರು ಉತ್ತಮ ಚೆಂಡುಗಳಿಗೂ ಬಾರಿಸಬಲ್ಲರು, ಯಾಕೆಂದರೆ ಅವರ ಅಭ್ಯಾಸ ಆ ರೀತಿಯಾಗಿರುತ್ತದೆ. ಈ ಮಾದರಿಯಲ್ಲಿ ನೀವು ಬ್ಯಾಟರ್ ಆಗಿ ಬೆಳವಣಿಗೆ ಹೊಂದಬೇಕು, ನಿಮ್ಮ ಆಟದಲ್ಲಿ ಬೆಳವಣಿಗೆ ಕಾಣಿಸಬೇಕು" ಎಂದಿದ್ದಾರೆ ಶಾಹೀದ್ ಅಫ್ರಿದಿ.

ಪಾಕಿಸ್ತಾನ vs ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ ಬಳಗ ಹೀಗಿದೆ

ಪಾಕಿಸ್ತಾನ vs ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ ಬಳಗ ಹೀಗಿದೆ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

Story first published: Wednesday, November 9, 2022, 9:02 [IST]
Other articles published on Nov 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+