ಟಿ20 ವಿಶ್ವಕಪ್: ಪ್ರಿಟೋರಿಯಸ್ ಬದಲಿಗೆ ಯುವ ಪ್ರತಿಭಾನ್ವಿತ ಆಟಗಾರನನ್ನು ಆಯ್ಕೆ ಮಾಡಿದ ದ. ಆಫ್ರಿಕಾ

ದಕ್ಷಿಣ ಆಫ್ರಿಕಾ ತಂಡ ಕೂಡ ಈ ಬಾರಿಯ ಟಿ20 ವಿಶ್ವಕಪ್‌ಗೆ ಮುನ್ನ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ತಂಡದ ಪ್ರಮುಖ ಆಟಗಾರ ಡ್ವೇಯ್ನ್ ಪ್ರಿಟೋರಿಯಸ್ ಗಾಯಗೊಂಡು ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಅನುಭವಿ ಆಟಗಾರನ ಬದಲಿಗೆ ದಕ್ಷಿಣ ಆಫ್ರಿಕಾ ಯುವ ಆಟಗಾರನಿಗೆ ಅವಕಾಶ ನೀಡಿದೆ.
ಮೂಳೆ ಮುರಿತದಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿದ ಆಟಗಾರ ಡ್ವೇಯ್ನ್ ಪ್ರಿಟೋರಿಯಸ್‌ಗೆ ದಕ್ಷಿಣ ಆಫ್ರಿಕಾ ತಂಡವು ಮಾರ್ಕೊ ಜಾನ್ಸನ್‌ರನ್ನು ಬದಲಿ ಆಟಗಾನನ್ನಾಗಿ ನೇಮಿಸಿದೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಕಣಕ್ಕಿಳಿದು ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಮಾರ್ಕೋ ಜಾನ್ಸನ್‌ಗೆ ಅವಕಾಶ
ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಕಳೆದ ಹಲವು ವರ್ಷಗಳಿಂದ ಪ್ರಮುಖ ಆಟಗಾರನಾಗಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದರೆ ಭಾರತದ ವಿರುದ್ಧದ ಸರಣಿಯ ಸಂದರ್ಭದಲ್ಲಿ ಪ್ರಿಟೋರಿಯಸ್ ಕೈಗೆ ಗಾಯವಾಗಿದೆ. ಎಡಗೈ ಮೂಳೆ ಮುರಿತಕ್ಕೊಳಗಾಗಿರುವ ಪ್ರಿಟೋರಿಯಸ್ ವಿಶ್ವಕಪ್‌ನಿಂದ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮಾರ್ಕೋ ಜಾನ್ಸನ್ ಅವರನ್ನು ಇದಕ್ಕೂ ಮುನ್ನ ಮೀಸಲು ಆಟಗಾರನಾಗಿ ನೇಮಿಸಲಾಗಿತ್ತು. ಆದರೆ ಪ್ರಿಟೋರಿಯಸ್ ಗಾಯಗೊಂಡಿರುವ ಕಾರಣದಿಂದಾಗಿ ಮಾರ್ಕೋ ಜಾನ್ಸನ್ ಅವರನ್ನು ಅಂತಿಮ 15ರ ಬಳಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇನ್ನು ಲಿಜಾಡ್ ವಿಲಿಯಮ್ಸ್ ಈಗ ಮಾರ್ಕೋ ಜಾನ್ಸನ್ ಅವರ ಬದಲಿಗೆ ಮೀಸಲು ಆಟಗಾರನಾಗಿ ಹೆಸರಿಸಲಾಗಿ.
ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ಕಳೆದ ವಿಶ್ವಕಪ್‌ನಲ್ಲಿ ಮಿಂಚಿದ್ದ ಪ್ರಿಟೋರಿಯಸ್
ಪ್ರಿಟೋರಿಯಸ್ 2021ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಕಳೆದ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಪ್ರಿಟೋರಿಯಸ್ ಸೇವೆ ದಕ್ಷಿಣ ಆಫ್ರಿಕಾ ತಂಡಕ್ಕೆ ಲಭ್ಯವಾಗದ ಕಾರಣದಿಂದಾಗಿ ಯುವ ಆಟಗಾರ ಜಾನ್ಸನ್‌ಗೆ ಹೊಸ ಜವಾಬ್ಧಾರಿ ದೊರೆತಿದೆ.
ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡವನ್ನ ಹೆಸರಿಸಿದ ಹರ್ಷ ಬೋಗ್ಲೆ: ಟೀಂ ಇಂಡಿಯಾ ಹೆಸರಿಲ್ಲ!
ಅಕ್ಟೋಬರ್ 24 ರಂದು ಹೋಬರ್ಟ್‌ನಲ್ಲಿ ಕ್ವಾಲಿಫೈಯರ್ ಬಿ1 ವಿಜೇತರ ವಿರುದ್ಧ ದಕ್ಷಿಣ ಆಫ್ರಿಕಾ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್‌ನ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯ ಆರಂಭಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು ಅಕ್ಟೋಬರ್ 17 ರಂದು ನ್ಯೂಜಿಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಈ ಎರಡು ಪಂದ್ಯಗಳು ಕೂಡ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ವಿಶ್ವಕಪ್‌ಗೆ ಸಿದ್ಧವಾಗಿದೆ ದಕ್ಷಿಣ ಆಫ್ರಿಕಾ
ಇನ್ನು ದಕ್ಷಿಣ ಆಫ್ರಿಕಾ ತಂಡ ಇತ್ತೀಚೆಗಷ್ಟೇ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಭಾಗಿಯಾಗಿತ್ತು. ಮೂರು ಪಂದ್ಯಗಳ ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-2 ಅಂತರದಿಂದ ಭಾರತದ ವಿರುದ್ಧ ಸೋಲು ಅನುಭವಿಸಿತ್ತು. ನಂತರ ನಡೆದ ಏಕದಿನ ಸರಣಿಯಲ್ಲಿಯೂ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ್ದು ಹಿನ್ನಡೆ ಅನುಭವಿಸಿದೆ.
ದಕ್ಷಿಣ ಆಫ್ರಿಕಾದ ಸ್ಕ್ವಾಡ್ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಕಿಯಾ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ರಿಲ್ಲಿ ರೊಸೊವ್, ತಬ್ರೈಜ್ ಶಂಬ್ಸಿ, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್
ಸ್ಟ್ಯಾಂಡ್‌ಬೈ ಆಟಗಾರರು: ಜಾರ್ನ್ ಫಾರ್ಟುಯಿನ್, ಆಂಡಿಲ್ ಫೆಹ್ಲುಕ್ವಾಯೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications